ಇಟಲಿಯಿಂದಲೇ ಭಾರತ ಸೇವೆ ಮಾಡಿದ ಯುವಕ; ತಾಯ್ನಾಡಿಗೆ ಮರಳದೇ ರೋಮ್ ನಲ್ಲೇ ಉಳಿದ ವಿದ್ಯಾರ್ಥಿ
ಸೋಂಕು ಬೇರೆಯವರಿಗೆ ಹರಡಬಾರದು ಎಂಬ ಕಾರಣಕ್ಕೆ ಭಾರತಕ್ಕೆ ಬರದೇ ಅಲ್ಲೇ ಉಳಿದಿದ್ದಾನೆ.
Team Udayavani, Mar 26, 2020, 4:08 PM IST
Representative Image
ರೋಮ್: ಅಕ್ಷರಶಃ ಇಟಲಿಯನ್ನು ಕೋವಿಡ್ ವೈರಸ್ ಮರಣದ ಕೂಪಕ್ಕೆ ತಳ್ಳಿದೆ. ಜನರು ಕಂಡ ಕಂಡ ಸ್ಥಳಗಳಲ್ಲಿ ಸಾವಿಗೀಡಾಗುತ್ತಿದ್ದಾರೆ. ಇಟಲಿ ಜಗತ್ತಿನಲ್ಲಿ ಅತ್ಯುತ್ತಮ ಆರೋಗ್ಯ ಸೇವೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಆದರೂ ಅಲ್ಲಿನ ಆರಂಭಿಕ ಅವಗಣನೆಯಿಂದ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಸಂಖ್ಯೆಯ ಭಾರತೀಯರು ಇಟಲಿಯಲ್ಲಿ ವಾಸಿಸುತ್ತಿದ್ದು ಅವರ ಪರಿಸ್ಥಿತಿಯೂ ತೀವ್ರ ಸಂಕಷ್ಟದಲ್ಲಿದೆ.
ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳು ಅಲ್ಲಿ ವಾಸಿಸುತ್ತಿದ್ದಾರೆ. ಇಟಲಿಯ ರಾಜಧಾನಿಯಲ್ಲಿ ಓದುತ್ತಿರುವ ಪ್ರಸ್ತುತ ಇಂದೋರ್ನ ವಿದ್ಯಾರ್ಥಿಯೊಬ್ಬ ತನ್ನಿಂದ ಕೋವಿಡ್ ವೈರಸ್ ಸೋಂಕು ಬೇರೆಯವರಿಗೆ ಹರಡಬಾರದು ಎಂಬ ಕಾರಣಕ್ಕೆ ಭಾರತಕ್ಕೆ ಬರದೇ ಅಲ್ಲೇ ಉಳಿದಿದ್ದಾನೆ. ಇಂದೋರ್ ನ ವಿದ್ಯಾರ್ಥಿ ಅನಂತ್ ಶುಕ್ಲಾ ಅವರು ಇಟಲಿಯ ರಾಜಧಾನಿ ರೋಮ್ನಲ್ಲಿ ವಾಸಿಸುತ್ತಿದ್ದಾರೆ.
ವಿದ್ಯಾರ್ಥಿಯ ತಂದೆ ಅನಂತ್ ಮನೆಗೆ ಹಿಂದಿರುವಂತೆ ಸಾಕಷ್ಟು ಮನವಿ ಮಾಡಿದ್ದಾರೆ. ಆದರೆ ಸಾಮಾಜಿಕ ಆರೋಗ್ಯದ ಕಾರಣಕ್ಕಾಗಿ ತಮ್ಮ ತಂದೆಯ ಸೂಚನೆಯನ್ನು ಧಿಕ್ಕರಿಸಿ ಮರಣ ಮೃದಂಗ ಭಾರಿಸುತ್ತಿರುವ ಇಟಲಿಯಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ. ನಾನು ಭಾರತಕ್ಕೆ ಹಿಂದಿರುಗಿದರೆ ಅಲ್ಲಿನ ಮುಗ್ದ ಜನರಿಗೆ ನನ್ನಿಂದ ಸೋಂಕು ವರ್ಗಾವಣೆಯಾದಂತಾಗುತ್ತದೆ.
ಅದರ ಬದಲು ನಾನು ಇಲ್ಲೇ ಉಳಿದು ಬಿಟ್ಟರೆ ಇತರರಿಗೆ ಈ ವೈರಸ್ ಹರಡುವುದನ್ನು ನಾನು ತಡೆಯಬಹುದು. ಈ ಕಾರಣಕ್ಕೆ ಇಲ್ಲೇ ಉಳಿಯಲಿದ್ದು, ತೃಪ್ತನಾಗಿದ್ದೇನೆ ಜತೆಗೆ ಸಾಮಾಜಿಕ ಆರೋಗ್ಯ ಕಾಪಾಡಿಕೊಂಡ ಸಂತೋಷವು ನನ್ನಲ್ಲಿ ಇದೆ ಎಂದು ಹೇಳಿದ್ದಾರೆ.
ಇಟಲಿ ಮಾಡಿದ ತಪ್ಪನ್ನು ನೀವು ಮಾಡಬೇಡಿ
ಇಲ್ಲಿನ ನಾಗರಿಕರು ಮಾಡಿದ ತಪ್ಪನ್ನು ನೀವು ಮಾಡುವುದು ಬೇಡ ಎಂದು ಇಟಲಿಯಲ್ಲಿರುವ ಭಾರತೀಯರು ಹೇಳುವ ಮಾತು. ಇದಕ್ಕೆ ಅನಂತ್ ಶುಕ್ಲಾ ಧ್ವನಿಗೂಡಿಸಿದ್ದು, ತಮ್ಮ ಮತ್ತು ಕುಟುಂಬದ ಹಿತದೃಷ್ಟಿಯಿಂದ ಮನೆಯಿಂದ ದಯವಿಟ್ಟು ಹೊರಹೋಗಬೇಡಿ ಎಂದು ಜನರಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.
ನೀವು ಇದನ್ನು ನಿರ್ಲಕ್ಷ್ಯ ಮಾಡಿದರೆ ಇಟಲಿಯಂತೆ ಭಾರತವೂ ಶ್ಮಶಾನವಾಗಲಿದೆ ಎಂದು ಹೇಳಿದ್ದಾರೆ. ಸೈನಿಕರಾಗಿ ದೇಶ ಸೇವೆ ಮಾಡುವುದೊಂದೆ ದೇಶಸೇವೆಯಲ್ಲ. ದೇಶದ ಒಳಿತಿಗಾಗಿ ಮನೆಯಲ್ಲೇ ಇದ್ದುಬಿಡುವುದು ಒಂದು ದೇಶಸೇವೆ ಎಂದು ಹೇಳಿದ್ದಾರೆ.
ನಿರ್ಲಕ್ಷ್ಯಕ್ಕೆ ಬೆಲೆ ತೆತ್ತ ಇಟಲಿ:
ಈ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟಲು ಇಟಲಿಯಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿರಲಿಲ್ಲ. ಚೀನದಲ್ಲಿ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಇಟಲಿಯಲ್ಲೂ ಕಾಣಿಸಿಕೊಂಡಿದೆ. ಆದರೆ ಚೀನದಲ್ಲಿ 3ನೇ ಹಂತದಲ್ಲಿರಬೇಕಾದರೆ ಇಟಲಿ 2ನೇ ಹಂತದಲ್ಲಿತ್ತು. ಆದರೆ ಅಲ್ಲಿನ ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ.
ಒಂದು ವೇಳೆ ಸರಕಾರ ಆರಂಭದಲ್ಲಿ ಕ್ರಮಕೈಗೊಂಡಿದ್ದರೆ ಇಂದಿನ ಸ್ಥಿತಿಗೆ ಇಟಲಿ ತಲುಪುತ್ತಿರಲಿಲ್ಲ ಎಂಬುದು ಬಹುತೇಕ ಇಟಲಿಯನ್ನರ ಅಭಿಪ್ರಾಯವಾಗಿದೆ. ಇಟಲಿ ತನ್ನಲ್ಲಿನ ಆರೋಗ್ಯ ಸೇವೆಯ ಮೇಲೆ ಇರಿಸಿದ್ದ ಅತಿಯಾದ ಆತ್ಮವಿಶ್ವಾಸವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇಟಲಿಯಲ್ಲಿ ಹೆಣವನ್ನು ಹೂಳಲು ಸ್ಥಳಾವಕಾಶ ಇಲ್ಲದೇ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಅಲ್ಲಿನ ಆಸ್ಪತ್ರೆಯಲ್ಲಿ ಸೂಕ್ತ ಸೌಕರ್ಯ ಇಲ್ಲದೇ ಜನರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಸುಸಜ್ಜಿತ ಆಸ್ಪತ್ರೆಗಳಿದ್ದರು ಸೋಂಕು ಪೀಡಿತರ ಸಂಖ್ಯೆ ಹೆಚ್ಚಾದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.