ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ: 13 ವರ್ಷಗಳಲ್ಲಿ 6,000 ಜೀವ ಬಲಿ

Team Udayavani, May 22, 2020, 9:00 AM IST

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ: 13 ವರ್ಷಗಳಲ್ಲಿ 6,000 ಜೀವ ಬಲಿ

ಹೊಸದಿಲ್ಲಿ: ಕಳೆದ 13 ವರ್ಷಗಳಲ್ಲಿ ವಿಶ್ವಾದ್ಯಂತ ಸುಮಾರು 380 ವಿಮಾನ ದುರಂತಗಳಲ್ಲಿ 6,000ದಷ್ಟು ಮಂದಿ ಮೃತಪಟ್ಟಿದ್ದಾರೆ. 1998 ಮತ್ತು 2007ರ ನಡುವೆ ಸಂಭವಿಸಿದ ವಿಮಾನ ದುರಂತಗಳಲ್ಲಿ ಒಟ್ಟು 5,147 ಮಂದಿ ಬಲಿಯಾಗಿದ್ದಾರೆ. ಈ ಪೈಕಿ 286 ಪ್ರಯಾಣಿಕ ವಿಮಾನಗಳಾದರೆ, 70 ಸರಕು ವಿಮಾನಗಳಾಗಿದ್ದವು ಎಂದು ಅಮೆರಿಕ ಮೂಲದ ವಿಮಾನ ಸಂಸ್ಥೆ ಬೋಯಿಂಗ್‌ನ 2007ರ ವರದಿ ತಿಳಿಸಿದೆ. ಈ ಪೈಕಿ 78 ಮಾರಣಾಂತಿಕ ಅಪಘಾತಗಳಾಗಿದ್ದರೆ, 146 ವಿಮಾನ ಸಂಪೂರ್ಣ ನಾಶವಾದ ಅಥವಾ ದುರಸ್ತಿಯಾಗದಷ್ಟು ಹಾನಿಯಾದ ಅಪಘಾತಗಳಾಗಿದ್ದವು ಎಂದು 1959-2008ರ ನಡುವಣ ವಾಣಿಜ್ಯ ಜೆಟ್‌ ವಿಮಾನ ಅವಘಡಗಳ ವರದಿ ಹೇಳಿದೆ. 2008ರ ಬಳಿಕ ಅಂಥ ಸುಮಾರು 40 ಅವಘಡಗಳು ಸಂಭವಿಸಿದ್ದು, ಶನಿವಾರ ಮುಂಜಾನೆ ಮಂಗಳೂರು ಸಮೀಪ ಸಂಭವಿಸಿದ ಏರಿಂಡಿಯಾ ವಿಮಾನ ದುರಂತ ಇವುಗಳಲ್ಲೊಂದು. ಕಳೆದ ಮೂರು ವರ್ಷಗಳಲ್ಲಿ ವಿಮಾನ ದುರಂತಗಳಲ್ಲಿ ಸುಮಾರು 1,000 ಮಂದಿ ಮಡಿದಿರುವುದಾಗಿ ವಿವಿಧ ಮೂಲಗಳು ತಿಳಿಸಿವೆ.

ಹತ್ತು ದಿನಗಳ ಹಿಂದೆ ಜೋಹಾನ್ಸ್‌ಬರ್ಗ್‌ನಿಂದ ಹೊರಟಿದ್ದ ಆಫ್ರಿಕಿಯಾ ಏರ್‌ವೆಸ್‌ ವಿಮಾನ ಲಿಬಿಯಾ ರಾಜಧಾನಿ ಟ್ರಿಪೊಲಿಯಲ್ಲಿ ಇಳಿಯಲು ಯತ್ನಿಸುತ್ತಿದ್ದ ವೇಳೆ ಪತನಗೊಂಡು 103 ಮಂದಿ ಬಲಿಯಾಗಿದ್ದರು. 9 ವರ್ಷದ ಡಚ್‌ ಬಾಲಕನೊಬ್ಬ ಮಾತ್ರ ಬದುಕುಳಿದಿದ್ದ. ಒಂದು ತಿಂಗಳ ಹಿಂದೆ ಪೋಲಂಡ್‌ ಅಧ್ಯಕ್ಷ ಲೆಚ್‌
ಕೆಝಿನ್‌ಸ್ಕಿ ಪ್ರಯಾಣಿಸುತ್ತಿದ್ದ ವಿಮಾನ ಪಶ್ಚಿಮ ರಶ್ಯದ ಸ್ಮೋಲೆನ್‌ಸ್ಕ್ ಸಮೀಪ ಅಪಘಾತಕ್ಕೀಡಾಗಿ ಅವರು ಮತ್ತು ಇತರ 92 ಮಂದಿ ಬಲಿಯಾಗಿದ್ದರು.

2009ರ ಜೂ. 1ರಂದು ರಯೋ ಡಿಜನೈರೋದಿಂದ ಪ್ಯಾರಿಸ್‌ಗೆ ಹಾರುತ್ತಿದ್ದ ಏರ್‌ ಫ್ರಾನ್ಸ್‌ ಏರ್‌ಬಸ್‌ ಎ 330 ವಿಮಾನ ಅಟ್ಲಾಂಟಿಕ್‌ ಸಾಗರಕ್ಕೆ ಬಿದ್ದು 228 ಮಂದಿ ಬಲಿಯಾಗಿದ್ದರು. 2009ರ ಜೂ. 30ರಂದು ಯೆಮೆನ್‌ ಏರ್‌ಬಸ್‌ 310 ವಿಮಾನ ಕೊಮೊರೋಸ್‌ ದ್ವೀಪಗಳತ್ತ ಹಾರುತ್ತಿದ್ದ ವೇಳೆ ಹಿಂದೂ ಮಹಾಸಾಗರಕ್ಕೆ ಬಿದ್ದು 153 ಮಂದಿ ಮೃತಪಟ್ಟಿದ್ದರು.

15 ದಿನಗಳ ಬಳಿಕ ಇರಾನಿನ ಪ್ರಯಾಣಿಕ ವಿಮಾನ ವೊಂದು ಖಾಜ್ವಿನ್‌ ನಗರ ಸಮೀಪ ಪತನಗೊಂಡು ಎಲ್ಲ 168 ಮಂದಿ ಬಲಿಯಾಗಿದ್ದರು. 2008ರ ಆಗಸ್ಟ್‌ನಲ್ಲಿ ಸ್ಪೇನ್‌ ಏರ್‌ ವಿಮಾನವೊಂದು ಮ್ಯಾಡ್ರಿಡ್‌ನ‌ ಬರಜಾಸ್‌ ವಿಮಾನ ನಿಲ್ದಾಣದಿಂದ ಮೇಲೇರಿದೊಡನೆ ಪತನ ಗೊಂಡು 172 ಮಂದಿಯಲ್ಲಿ 154 ಮಂದಿ ಬಲಿಯಾಗಿದ್ದರು. ಆ ವರ್ಷ ಇನ್ನೆರಡು ಪ್ರಮುಖ ಅವಘಡಗಳು ಸಂಭವಿಸಿದ್ದವು. ಫೆಬ್ರವರಿಯಲ್ಲಿ ಸಂಟಾ ಬಾರ್ಬಾರಾ ಏರ್‌ಲೈನ್ಸ್‌ ವಿಮಾನ ಪತನಗೊಂಡು 46 ಮಂದಿ ಮತ್ತು ಕಿರ್ಗಿಸ್ಥಾನ್‌ನ ಬಿಶ್ಕೆಕ್‌ನಲ್ಲಿ ಐಟೆಕ್‌ ವಿಮಾನ ಪತನಗೊಂಡು 71 ಮಂದಿ ಸಾವಿಗೀಡಾಗಿದ್ದರು.

2007ರಲ್ಲಿ ಬ್ರೆಝಿಲ್‌ನ ಸಾವೊ ಪಾಲೊ ನಗರದಲ್ಲಿ ಟಾಮ್‌ ಏರ್‌ಬಸ್‌ ರನ್‌ವೇಯಿಂದ ಜಾರಿ ಪ್ರಮುಖ ರಸ್ತೆಯೊಂದರ ಮೇಲೆ ಬಿದ್ದು ಒಂದು ಗ್ಯಾಸ್‌ ಸ್ಟೇಶನ್‌ ಮತ್ತು ಕಟ್ಟಡಕ್ಕೆ ಅಪ್ಪಳಿಸಿದಾಗ 119 ಮಂದಿ ಬಲಿಯಾಗಿದ್ದರು. 2006ರಲ್ಲಿ ಮೂರು ಪ್ರಮುಖ ದುರಂತ ಗಳು ಸಂಭವಿಸಿ 450ಕ್ಕೂ ಅಧಿಕ ಮಂದಿ ಸಾವಿಗೀಡಾದರು. ಜುಲೈಯಲ್ಲಿ ರಶ್ಯದ ಇರ್ಕುಟ್‌ಸ್ಕ್ ವಲಯದಲ್ಲಿ ಸಿಬಿರ್‌(ಎಸ್‌7) ವಿಮಾನ ಪತನ ಗೊಂಡು 128 ಮಂದಿ, ಆಗಸ್ಟ್‌ನಲ್ಲಿ ಯುಕ್ರೇನನ ಡೊನೆಟ್‌
ಸ್ಕ್ನಲ್ಲಿ ಪುಲ್ಕೊವೊ ಏರ್‌ಲೈನ್ಸ್‌ ವಿಮಾನ ಪತನಗೊಂಡು 170 ಮಂದಿ ಮತ್ತು ಸೆಪ್ಟಂಬರ್‌ನಲ್ಲಿ ಬ್ರೆಝಿಲ್‌ನಲ್ಲಿ ಗೋಲ್‌ ಏರ್‌ಲೈನ್ಸ್‌ ವಿಮಾನ ಪತನಗೊಂಡು 154 ಮಂದಿ ಮಡಿದಿದ್ದರು.

ಇತರ ದುರಂತಗಳು
2005 ಆಗಸ್ಟ್‌: ಕೊಲಂಬಿಯ-ವೆನೆಜುವೆಲ ಗಡಿಯಲ್ಲಿ ವೆಸ್ಟ್‌ ಕೆರಿಬಿಯನ್‌ ಏರ್‌ವೆಸ್‌ ವಿಮಾನ ಪರ್ವತಕ್ಕೆ ಢಿಕ್ಕಿ, 160 ಬಲಿ. ಇಂಡೋನೇಶ್ಯದ ಮೆಡಾನ್‌ನಲ್ಲಿ ಮಂಡಲ ಏರ್‌ಲೈನ್ಸ್‌ ವಿಮಾನ ಎಡಕ್ಕೆ ವಾಲುತ್ತ ರನ್‌ವೇ ಬಿಟ್ಟೋಡಿ ವಸತಿ ಪ್ರದೇಶಕ್ಕೆ ನುಗ್ಗಿ ಸ್ಫೋಟ. 143 ಬಲಿ.

2005 ಫೆಬ್ರವರಿ: ಕಾಬೂಲ್‌ ಸಮೀಪ ಕಾಮ್‌ ಏರ್‌ ಫ್ಲೈಟ್‌ 11,000 ಅಡಿ ಎತ್ತರದ ಚಪೇರಿ ಪರ್ವತಕ್ಕೆ ಅಪ್ಪಳಿಸಿ 104 ಮಂದಿ ಬಲಿ.

2003 ಫೆಬ್ರವರಿ: ಇರಾನ್‌ ರಿವಲ್ಯೂಶನರಿ ಗಾರ್ಡ್‌ಗೆ ಸೇರಿದ ಮಿಲಿಟರಿ ವಿಮಾನ ಪರ್ವತಕ್ಕೆ ಢಿಕ್ಕಿ, 275 ಸಾವು ಮತ್ತು ಸುಡಾನ್‌ ಏರ್‌ವೆàಸ್‌ ವಿಮಾನ ಸುಡಾನ್‌ ಬಂದರು ಸಮೀಪ ಪತನ, 116 ಬಲಿ.

2003 ಮಾರ್ಚ್‌: ಅಲ್ಜೀರಿಯದ ವಿಮಾನವೊಂದು ಮೇಲೇರುವ ವೇಳೆ ದುರಂತ. 100ಕ್ಕೂ ಅಧಿಕ ಸಾವು.

2002 ಮೇ 25: ಚೀನಾ ಏರ್‌ಲೈನ್ಸ್‌ ವಿಮಾನ ಆಗಸ ಮಧ್ಯೆ ಹೋಳಾಗಿ ತೈವಾನ್‌ ಕೊಲ್ಲಿಗೆ ಪತನ, ಎಲ್ಲ 225 ಬಲಿ. ಇದಕ್ಕೆ ಮುನ್ನ ಚೀನದ ಇನ್ನೊಂದು
ವಿಮಾನ ದಟ್ಟ ಮಂಜಿನಲ್ಲಿ ದಕ್ಷಿಣ ಕೊರಿಯದ ಬುಸಾನ್‌ ವಿಮಾನ ನಿಲ್ದಾಣದಲ್ಲಿ ಇಳಿಯಲುಯತ್ನಿಸುವ ವೇಳೆ ಪರ್ವತಕ್ಕೆ ಢಿಕ್ಕಿ, 166 ಪ್ರಯಾಣಿಕರ ಪೈಕಿ128 ಬಲಿ. ಆ ವರ್ಷ ಕೊಲಂಬಿಯದ ಇಪಿಯೇಲ್ಸ್‌ ಸಮೀಪ ಟಾಮಿ ವಿಮಾನ ಪತನದಲ್ಲಿ 92, ನೈಜೀರಿಯಾದ ಕಾನೊದಲ್ಲಿ ಇಎಎಸ್‌ಏರ್‌ಲೈನ್ಸ್‌ ವಿಮಾನ ಪತನದಲ್ಲಿ
77 ಮತ್ತು ಜರ್ಮನಿಯ ಉಬರ್‌ಲಿಂಜೆನ್‌ನಲ್ಲಿ ಆಗಸ ಮಧ್ಯೆ ವಿಮಾನಗಳ ಢಿಕ್ಕಿಯಲ್ಲಿ 71 ಬಲಿ.

2001 ನವೆಂಬರ್‌: ಅಮೆರಿಕದ ಏರ್‌ಲೈನ್ಸ್‌ ಏರ್‌ಬಸ್‌ ಎ 300 ಜೆಎಫ್‌ಕೆ ವಿಮಾನ ನಿಲ್ದಾಣದಿಂದ ಮೇಲೇರಿದ ಬಳಿಕ ಪತನ. ನೆಲದಲ್ಲಿದ್ದವರ ಸಹಿತ 265 ಬಲಿ.

2001 ಜುಲೈ: ಅಮೆರಿಕ ಏರ್‌ಲೈನ್ಸ್‌ನ ಇನ್ನೊಂದು ವಿಮಾನ ವರ್ಜೀನಿಯ ಆರ್ಲಿಂಗ್ಟನ್‌ ಸಮೀಪ ಪತನ, 189 ಮಂದಿ ಬಲಿ. ಅದೇ ತಿಂಗಳು ವ್ಲಾದಿವೋಸ್ತೊಕಾವಿಯ ವಿಮಾನ ಸೈಬೀರಿಯದ ಅರಣ್ಯದಲ್ಲಿ ಬಿದ್ದು ಸ್ಫೋಟ ಗೊಂಡು 145 ಬಲಿ. ಅಲ್ಲದೆ ಕಳೆದ ಹತ್ತು ವರ್ಷಗಳಲ್ಲಿ ಸಣ್ಣ ವಿಮಾನಗಳ ಮತ್ತು ಕಡಿಮೆ ಸಾವು-ನೋವು ಉಂಟಾದ ಅನೇಕ ದುರಂತಗಳು ಸಂಭವಿಸಿವೆ.

ಟಾಪ್ ನ್ಯೂಸ್

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.