ಹಾಲಿನ ದರ ಹೆಚ್ಚಳ ಮಾಡಿದ ಅಮುಲ್: ಹೊಸ ದರಗಳು ಇಂದಿನಿಂದಲೇ ಜಾರಿಗೆ
Team Udayavani, Feb 3, 2023, 12:15 PM IST
ಹೊಸದಿಲ್ಲಿ: ಕೆಲ ದಿನಗಳ ಹಿಂದೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಹೆಚ್ಚಿಸಿದಂತೆ ಇದೀಗ ಅಮುಲ್ ತನ್ನ ಹಾಲಿನ ದರ ಹೆಚ್ಚಿಸಿದೆ.
ಗುಜರಾತ್ ಡೈರಿ ಸಹಕಾರಿ ಅಮುಲ್ ಇಂದಿನಿಂದ ಜಾರಿಗೆ ಬರುವಂತೆ ತಾಜಾ ಹಾಲಿನ ಮೇಲೆ ಲೀಟರ್‌ಗೆ 3 ರೂ. ಹೆಚ್ಚಿಸಿದೆ. ಈ ಪರಿಷ್ಕರಣೆ ನಂತರ ಅಮುಲ್ ಗೋಲ್ಡ್ ಬೆಲೆ ಲೀಟರ್ ಗೆ 66 ರೂ. ಆಗಿದೆ.
ಅಮುಲ್ ತಾಜಾ ಲೀಟರ್ ಗೆ 54 ರೂ, ಅಮುಲ್ ಹಸುವಿನ ಹಾಲು ಲೀಟರ್ ಗೆ 56 ರೂ ಮತ್ತು ಅಮುಲ್ ಎ 2 ಎಮ್ಮೆಯ ಹಾಲಿಗೆ ಈಗ ಲೀಟರ್ ಗೆ 70 ರೂ.ಗಳಾಗಲಿದೆ ಎಂದು ಅಮುಲ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಕಲಾ ಸೇವೆಗೊಂದು ಗೌರವವಿರಲಿ… ಸಾವು-ನೋವಿನಲ್ಲೊಂದು ಸಾಂತ್ವನವಿರಲಿ…
ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ತನ್ನ ಡೈರಿ ಉತ್ಪನ್ನಗಳನ್ನು ಅಮುಲ್ ಬ್ರಾಂಡ್‌ನಲ್ಲಿ ಮಾರಾಟ ಮಾಡುತ್ತಿದೆ. ಅಕ್ಟೋಬರ್ ನಲ್ಲಿ ತನ್ನ ಗೋಲ್ಡ್, ತಾಜಾ ಮತ್ತು ಶಕ್ತಿ ಬ್ರಾಂಡ್‌ಗಳ ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ 2 ರೂ. ಹೆಚ್ಚಿಸಿತ್ತು.
ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆಯ ವೆಚ್ಚದಲ್ಲಿ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ. ದನಗಳ ಮೇವಿನ ವೆಚ್ಚವೇ ಸರಿಸುಮಾರು 20 ಪ್ರತಿಶತಕ್ಕೆ ಏರಿದೆ ಎಂದು ಅಮುಲ್ ಹೇಳಿದೆ.
Amul has increased prices of Amul pouch milk (All variants) by Rs 3 per litre: Gujarat Cooperative Milk Marketing Federation Limited pic.twitter.com/At3bxoGNPW
— ANI (@ANI) February 3, 2023
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.