ಅಡಕೆ ಹಾನಿಕರವಲ್ಲ, ಸಾಬೀತಿಗೆ ಬದ್ಧ : ಆರಗ
ರಾಜ್ಯ ಅಡಕೆ ಕಾರ್ಯಪಡೆ ಸಭೆ ! ಅಡಕೆ ಕಾನ್ಸರ್ ನಿವಾರಕ ಎಂಬುದನ್ನು ನ್ಯಾಯಾಲಯದಲ್ಲಿ ಮಂಡಿಸಲು ಸಿದ್ಧ
Team Udayavani, Feb 10, 2021, 4:14 PM IST
ಶಿವಮೊಗ್ಗ: ಅಡಕೆ ಬೆಳೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸಲು ಪ್ರಯತ್ನಗಳು ಮುಂದುವರಿದಿವೆ. ಅಲ್ಲದೆ, ಎಂ.ಎಸ್. ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ತಜ್ಞರ ಜತೆಗೆ ಕೃಷಿ ವಿವಿಗಳ ಕುಲಪತಿಗಳು, ಪ್ರಗತಿಪರ ತೋಟಗಾರಿಕೆ ಬೆಳೆಗಾರರು ಸೇರಿದಂತೆ ಐದು ಜನರ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಅಡಕೆ ಕಾರ್ಯಪಡೆ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಂಗಳವಾರ ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಅಡಕೆ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈಜ್ಞಾನಿಕ ಸಂಶೋಧನೆಗಳನ್ನಾಧರಿಸಿ ಅಡಕೆ ಕ್ಯಾನ್ಸರ್ ನಿವಾರಕ ಅಂಶಗಳನ್ನು ಹೊಂದಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಬಲವಾಗಿ ವಿಷಯ ಮಂಡಿಸಿ ಸಮರ್ಥಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಅಡಕೆ ಬೆಳೆ ಗಾರರ ಅತಂಕ ದೂರ ಮಾಡಲು ಕಾರ್ಯಪಡೆ ಸಕ್ರಿಯವಾಗಿದೆ. ಪ್ರಗತಿಪರ ರೈತರು, ವಿವಿಧ ತೋಟಗಾರಿಕೆ ಬೆಳೆಗಾರರ ಸಂಘಗಳೂ ಕೂಡ ಸೇರಿವೆ. ವಿದೇಶಗಳಿಂದ ಆಮದಾಗುತ್ತಿದ್ದ ಅಡಕೆ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಹಾಗೂ ಇಲ್ಲಿನ ಅಡಕೆಗೆ ತಗಲುವ ಉತ್ಪನ್ನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ದರ ನಿಗ ದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ದರ ಏರಿಕೆ ಮೂಲಕ ಅಡಕೆ ಆಮದು ನಿಯಂತ್ರಣ ಮಾಡಬಹುದು. ಹಲವು ವರ್ಷಗಳ ಹಿಂದೆ 250 ರೂ. ಇತ್ತು. ಈಗಲೂ ಅದೇ ಇದೆ. ಅದನ್ನು 350 ರೂ.ಗೆ ಏರಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಎಂಎಸ್‌ಪಿ ಯೋಜನೆಯನ್ನು ಅಡಕೆಗೂ ವಿಸ್ತರಿಸಬೇಕು. ಇದರಿಂದಾಗಿ ವಿದೇಶದಿಂದ ಆಮದಾಗುವ ಅಡಕೆ ನಿಯಂತ್ರಣಕ್ಕೆ ಬರುವನಿರೀಕ್ಷೆ ಇದೆ. ಉತ್ಪಾದನಾ ವೆಚ್ಚವನ್ನು ನಿರ್ಧರಿಸಲು ಸಿಪಿಸಿಆರ್‌ಐ, ಶಿವಮೊಗ್ಗ ಕೃಷಿ- ತೋಟಗಾರಿಕೆ ವಿಶ್ವವಿದ್ಯಾಲಯ, ಕ್ಯಾಂಪ್ಕೋ, ತುಮೊRàಸ್, ಮಾಮೊRàಸ್, ಸೇರಿದಂತೆ ಅಡಕೆ ಬೆಳೆಗಾರ ಸಹಕಾರ ಸಂಘಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಿ 10 ದಿನದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ಬರುತ್ತಿದ್ದಂತೆ ಕೇಂದ್ರಕ್ಕೆ ನಿಯೋಗ ತೆರಳಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ಪ್ರಾದೇಶಿಕವಾಗಿ ಅಡಕೆ ಮಾದರಿಯನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರ ವರದಿ ಬರುವವರೆಗೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣದ ತೀರ್ಪನ್ನು ಕಾಯ್ದಿರಿಸಬೇಕು. ಅಲ್ಲದೇ ಅದರ ವಿಸ್ತೃತ ವಿಚಾರಣೆಗಾಗಿ ಹಿರಿಯ ನ್ಯಾಯಾ ಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಟಾಸ್ಕ್ಫೋರ್ಸ್‌ನ ಚಟುವಟಿಕೆಗಳಿಗಾಗಿ ಮುಂದಿನ ಬಜೆಟ್‌ನಲ್ಲಿ 10 ಕೋಟಿ ರೂ.ಗಳನ್ನು ಕಾಯ್ದಿರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಪ್ರಸ್ತುತ 3.50 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಅಡಕೆ ಕಾರ್ಯಪಡೆಯು ಕೃಷಿ ಮತ್ತು ತೋಟಗಾರಿಕೆ ವಿವಿಗಳ ಸಹಯೋಗದಲ್ಲಿ ನಡೆಯುವ ಕೌಶಲ್ಯಾಧಾರಿತ ತರಬೇತಿಗಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದರು.
ಅಡಕೆಯ ಪರ್ಯಾಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಅನೇಕರು ಸಕ್ರಿಯರಾಗಿದ್ದಾರೆ. ವಾಣಿಜ್ಯ ಕ್ಷೇತ್ರದಲ್ಲಿ ಬೇರೆ-ಬೇರೆ ವಿಧಾನಗಳಲ್ಲಿ ಅಡಕೆ ಪರಿಚಯಿಸುವುದನ್ನು ಕಾರ್ಯಪಡೆ ಉತ್ತೇಜಿಸಲಿದೆ.
ಶಿರಸಿಯ ಗುರುಮೂರ್ತಿ ಹೆಗಡೆಯವರು ಅಡಕೆಯ ಪರ್ಯಾಯ ಉತ್ಪನ್ನ ಹಾಗೂ ಬಳಸಬಹುದಾದ ಹೊಸ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಕೈಗೊಳ್ಳುವ ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಅಡಕೆ ಬಳಸಲು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಅಡಕೆಯ ಪರ್ಯಾಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನ ನಿರಂತರವಾಗಿರಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಕೇಂದ್ರ ಪುರಸ್ಕೃತ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಅನಾನಸ್ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಅಡಕೆಯನ್ನು ಸೇರಿಸುವಂತೆ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಅಡಕೆ ಬೆಳೆ ವಿವಿಧ ರೋಗಗಳಿಂದ ನಾಶವಾಗುತ್ತಿದ್ದು ಅದಕ್ಕೆ ಪರ್ಯಾಯವಾಗಿ ತಾಳೆ ಬೆಳೆ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು. ತಾಳೆ ಬೆಳೆಯುವವರಿಗೆ ಪ್ರೋತ್ಸಾಹದ ಜತೆಗೆ ಸರಕಾರವೇ ತಾಳೆ ಎಣ್ಣೆ ಘಟಕ ಸ್ಥಾಪಿಸಬೇಕು. ಭದ್ರಾವತಿಯ ತಾಳೆ ಎಣ್ಣೆ ಘಟಕದ 100 ಎಕರೆ ಪ್ರದೇಶವನ್ನು ಸರಕಾರ ಪಡೆದುಕೊಳ್ಳಬೇಕು. ಈ ಬಗ್ಗೆ ಗಮನ ಸೆಳೆಯುವುದಕ್ಕಾಗಿ ನಿಯೋಗ ತೆರಳಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಅಡಕೆ ಕಾರ್ಯಪಡೆಗೆ ಲಾಲ್‌ಬಾಗ್‌ನಲ್ಲಿ ಕಚೇರಿ ಇದ್ದರೆ ಅನುಕೂಲ ಎಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ :ತೇಗೂರು ಬಳಿ ಚಿರತೆ ಪ್ರತ್ಯಕ್ಷ
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್ ಪ್ರತಿಕ್ರಿಯಿಸಿ, ಅಡಕೆ ಬಗ್ಗೆ ಹಳೆಯ ದಾಖಲೆಗಳನ್ನು ಅಡಕೆ ಫೆಡರೇಶನ್ ಕಲೆ ಹಾಕಿದೆ. ಅಡಕೆ ಕ್ಯಾನ್ಸರ್ ನಿವಾರಣೆಗೆ ಅನುಕೂಲ ಎಂಬ ಅಂಶಗಳು ದಾಖಲಾಗಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆದರೆ ಅನುಕೂಲ ಎಂದರು.
ಶಾಸಕ ಹಾಲಪ್ಪ ಮಾತನಾಡಿ, ಕೆಲವು ಪ್ರದೇಶಗಳಲ್ಲಿ ಅಡಕೆಗೆ ಖಾವಿ, ವಾರ್ನಿಷ್ ಇನ್ನಿತರೆ ವಸ್ತು ಸೇರಿಸುತ್ತಿದ್ದಾರೆ. ದಲ್ಲಾಳಿಗಳ ಬಳಿ ಖರೀದಿ ಮಾಡಿದರೆ ಅಪಾಯವಿದೆ. ಸಾಂಪ್ರದಾಯಿಕ ಅಡಕೆ ಬೆಳೆಯುವಲ್ಲಿ ಮಾದರಿ ಪಡೆಯಿರಿ ಎಂದು ಸೂಚಿಸಿದರು. ಇದಕ್ಕೆ ಸಾಕಷ್ಟು ಮಂದಿ ದನಿಗೂಡಿಸಿದರು.
ಸಭೆಯಲ್ಲಿ ಮಲೆನಾಡು ಅಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಲಾಲ್‌ಬಾಗ್‌ನ ಉಪ ನಿರ್ದೇಶಕ ಪ್ರಸಾದ್ ಸೇರಿದಂತೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ ಚಂದ್ರ, ಮಾಮೊRàಸ್ ಉಪಾಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ, ತುಮೊRàಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಕ್ರಾಮ್ ಅಧ್ಯಕ್ಷ ಎಚ್.ಎಸ್. ಮಂಜಪ್ಪ, ಅಡಕೆ ಮಹಾಮಂಡಳಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಶಿವಮೊಗ್ಗ ಕೃಷಿ-ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ| ಎಂ.ಕೆ. ನಾಯ್ಕ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.