ಶೀಘ್ರವೇ ಕನ್ನಮಂಗಲದ ಪೂರ್ವ ಲಾಲ್ ಬಾಗ್ ಸಸ್ಯ ತೋಟ ಲೋಕಾರ್ಪಣೆ : ಸಚಿವ ಅರವಿಂದ ಲಿಂಬಾವಳಿ
Team Udayavani, Jun 7, 2021, 9:10 PM IST
ಬೆಂಗಳೂರು : ಮಹದೇವಪುರ ವಿಧಾನಸಭಾ ವ್ಯಾಪ್ತಿಯ ಕನ್ನಮಂಗಲದಲ್ಲಿ ನಿರ್ಮಾಣವಾಗುತ್ತಿರುವ ಪೂರ್ವ ಲಾಲ್ ಬಾಗ್, ಸಸ್ಯ ತೋಟವನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅದಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಸಚಿವರು, 70 ಎಕರೆ ವಿಸ್ತೀರ್ಣದಲ್ಲಿ ಲಾಲ್ ಬಾಗ್ ನಿರ್ಮಾಣವಾಗುತ್ತಿದ್ದು, ಜಾಗರ್ಸ್ ಪಾತ್, ಕಾಂಪೌಂಡ್ ಕಾಮಗಾರಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗಿಡಗಳಿಗೆ ನೀರಾವರಿ ವ್ಯವಸ್ಥೆ ಮುಂತಾದ ಕಾಮಗಾರಿಗಳು ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ :ವಾಷಿಂಗ್ಟನ್: ಜು. 20ರಂದು ಅಮೆಜಾನ್ ಸಂಸ್ಥಾಪಕ ಜೆಫ್ ಬೆರೋಸ್ ಗಗನಯಾತ್ರೆ!
ಸರ್ಕಾರದಿಂದ 190 ಲಕ್ಷ ರೂಪಾಯಿ ಈ ಉದ್ದೇಶಕ್ಕಾಗಿ ನಿಗದಿಪಡಿಸಿ ಅನುಮೋದನೆ ನೀಡಲಾಗಿದೆ, ಲಾಲ್ ಬಾಗ್ ನಂತರ ನಿರ್ಮಾಣವಾಗುತ್ತಿರುವ ಎರಡನೆಯ ಸಸ್ಯ ಶಾಸ್ತ್ರೀಯ ಉದ್ಯಾನವನ ಇದಾಗಿದೆ, 2120 ಪ್ರಭೇದಗಳ ಸಸ್ಯ ಸಂಕುಲ ಇಲ್ಲಿ ಲಭ್ಯವಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.