ಆರ್ಚರಿ: ಅಭಿಷೇಕ್ ವರ್ಮ ಬಂಗಾರ ಪದಕಕ್ಕೆ ಗುರಿ
Team Udayavani, Jun 27, 2021, 7:00 AM IST
ಪ್ಯಾರಿಸ್: ಆರ್ಚರಿ ವರ್ಲ್ಡ್ ಕಪ್ ಸ್ಟೇಜ್ 3 ವಿಭಾಗದ ಸ್ಪರ್ಧೆಯಲ್ಲಿ ಭಾರತದ ಅಭಿಷೇಕ್ ವರ್ಮ ಬಂಗಾರದ ಪದಕಕ್ಕೆ ಗುರಿ ಇರಿಸಿದ್ದಾರೆ.
ಅಮೆರಿಕದ ಕ್ರಿಸ್ ಸ್ಕಾಫ್ì ವಿರುದ್ಧದ ನೆಕ್-ಟು-ನೆಕ್ ಸ್ಪರ್ಧೆಯ ಶೂಟ್-ಆಫ್ನಲ್ಲಿ ವರ್ಮ ಮೇಲುಗೈ ಸಾಧಿಸಿದರು.
ಫೈನಲ್ ಸ್ಪರ್ಧೆಯ 5 ಸುತ್ತುಗಳು ಮುಗಿದಾಗ ಇಬ್ಬರೂ 148 ಅಂಕ ಹೊಂದಿದ್ದರು. ಶೂಟ್-ಆಫ್ನಲ್ಲಿ ಅಭಿಷೇಕ್ ವರ್ಮ ಪರಿಪೂರ್ಣ 10 ಅಂಕ ಸಂಪಾದಿಸಿದರೆ, ವಿಶ್ವದ 5ನೇ ರ್‍ಯಾಂಕಿಂಗ್ ಆರ್ಚರ್ ಸ್ಕಾಫ್ì 9 ಅಂಕ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರು.
ಇದು ಅಭಿಷೇಕ್ ವರ್ಮ ಪಾಲಾದ ದ್ವಿತೀಯ ವೈಯಕ್ತಿಕ ಸ್ವರ್ಣ. 2015ರ ವಿಶ್ವಕಪ್ ಸ್ಟೇಜ್ 3 ಸ್ಪರ್ಧೆಯಲ್ಲೂ ಅವರು ಚಿನ್ನ ಜಯಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.