ಮಲೇರಿಯಾವನ್ನು ಆಹ್ವಾನಿಸುತ್ತಿದೆ ಕೃತಕ ಗುಂಡಿ!
Team Udayavani, Jun 25, 2019, 5:23 AM IST
ಉಡುಪಿ: ಒಂದೆಡೆ ರಾ.ಹೆ.ಅಭಿವೃದ್ಧಿ ಮತ್ತೂಂದೆಡೆ ಅಸಮರ್ಪಕ ಕಾಮಗಾರಿಗಳಿಂದ ಜನರಿಗೆ ತೊಂದರೆ. ಇದು ಉಡುಪಿ-ಮಣಿಪಾಲ ರಸ್ತೆ ಬದಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಮಳೆಗಾಲಕ್ಕೆ ಏನೆಲ್ಲಾ ಮುಂಜಾಗರೂಕತೆ ಕ್ರಮ ತೆಗೆದುಕೊಂಡರೂ ಕೂಡ ಒಂದು ಸಣ್ಣ ತಪ್ಪು ಕೂಡ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ ಎಂಬುವುದಕ್ಕೆ ಸಾಕ್ಷಿಯಂತಾಗಿದೆ ಈ ಕೃತಕ ಗುಂಡಿ!
ಶಾರದಾ ಕಲ್ಯಾಣ ಮಂಟಪದ ಸಮೀಪವಿರುವ ರಾ.ಹೆ. ಪಕ್ಕದಲ್ಲಿ ಡ್ರೈನೇಜ್ ನೀರು ಹರಿದುಹೋಗಲೆಂದು ಈ ಹೊಂಡ ನಿರ್ಮಿಸಿ ಅದೆಷ್ಟೋ ತಿಂಗಳುಗಳೇ ಕಳೆದಿವೆ. ಆದರೆ ಮಳೆಸುರಿದ ಕಾರಣ ಕಾಮಗಾರಿಯೂ ಸ್ಥಗಿತಗೊಂಡಿದೆ. ಪರಿಣಾಮ ಹೊಂಡದಲ್ಲಿ ಕೆಸರು ನೀರು ನಿಂತು ಮಲೇರಿಯಾ ರೋಗವನ್ನು ಆಹ್ವಾನಿಸುವ ಕೃತಕ ಗುಂಡಿಯಂತಾಗಿದೆ. ಇದನ್ನು ರಾ.ಹೆ.ಇಲಾಖೆ ಹಾಗೂ ನಗರಸಭೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಕತ್ತಲಾದಂತೆ ಸೊಳ್ಳೆ ಕಾಟ
ನೀರು ನಿಂತ ಪರಿಣಾಮ ಕತ್ತಲು ಆವರಿಸುತ್ತಿದ್ದಂತೆ ಈ ಜಾಗ ಸೊಳ್ಳೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ. ಅಂಗಡಿ-ಮುಂಗಟ್ಟು, ರಿಕ್ಷಾ ತಂಗುದಾಣಗಳು ಇಲ್ಲಿದ್ದು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ವಿಸ್ತರಣೆ ಕಾಮಗಾರಿಯೂ ಮುಂದಕ್ಕೆ ಹೋಗುವಂತೆ ಗೋಚರಿಸುತ್ತಿಲ್ಲ.
ಪರಿಣಾಮ ಮಳೆಗಾಲದಲ್ಲಿ ಅಭಿವೃದ್ಧಿಯ ನೆಪದಲ್ಲಿ ರೋಗವನ್ನು ಆಹ್ವಾನಿಸುವಂತಾಗಿದೆ. ಮಲೇರಿಯಾ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿದರು ಕೂಡ ಇಂತಹ ಕಾಮಗಾರಿಗಳು ಅದಕ್ಕೆ ವಿರುದ್ಧªವಾಗುತ್ತಿದೆ.
ಅಪೂರ್ಣ ಕಾಮಗಾರಿ
ಚರಂಡಿಯಲ್ಲಿ ಕೇಬಲ್ ವಯರ್‌ಗಳು ಹಾಗೂ ಕಬ್ಬಿಣದ ರಾಡ್‌ಗಳು ಎದ್ದು ಕಾಣುತ್ತಿವೆ. ರಸ್ತೆತುಂಬ ಕೆಸರು ತುಂಬಿಕೊಂಡು ಪಾದಚಾರಿಗಳೂ ಸಮಸ್ಯೆಗೀಡಾಗುತ್ತಿದ್ದಾರೆ. ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿದ್ದ ಹೆದ್ದಾರಿ ಇಲಾಖೆ ಕೂಡ ಸುಮ್ಮನಾಗಿರುವುದು ಸ್ಥಳೀಯರನ್ನು ಕಂಗೆಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.