Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

ಪಣಂಬೂರು- ಮೀನಕಳಿಯ ನಡುವೆ ಅಡ್ಡಲಾಗಿ ನಿಲ್ಲುವ ಗೂಡ್ಸ್‌  ರೈಲುಗಳನ್ನು ದಾಟುವುದೇ ದೊಡ್ಡ ಸರ್ಕಸ್‌; ಅಂಡರ್‌ ಪಾಸ್‌, ಓವರ್‌ ಪಾಸ್‌ ಬೇಡಿಕೆಗೆ ಹತ್ತು ವರ್ಷ; ಹೆಣ್ಮಕ್ಕಳು, ಪುಟ್ಟ ಮಕ್ಕಳ ನೋವಿಗೆ ಬೇಕಿದೆ ಸ್ಪಂದನೆ

Team Udayavani, Nov 8, 2024, 3:03 PM IST

7(1)

ಬೈಕಂಪಾಡಿ: ಮಂಗಳೂರು ನಗರ ಹೊರ ವಲಯದಲ್ಲಿರುವ ಪಣಂಬೂ ರಿನಿಂದ ಸಮುದ್ರ ತೀರದಲ್ಲಿ ಬರುವ ಮೀನಕಳಿಯ ಗ್ರಾಮಕ್ಕೆ ಹೋಗಲು ಗೂಡ್ಸ್‌ ರೈಲಿನ ಚಕ್ರವ್ಯೂಹವನ್ನು ಬೇಧಿಸಿಕೊಂಡು ಹೋಗಬೇಕು. ಅದೆಷ್ಟೋ ವರ್ಷಗಳಿಂದ ಬಳಸುತ್ತಿರುವ ರಸ್ತೆಗೆ ಅಡ್ಡಲಾಗಿ ನಿಲ್ಲುವ ಗೂಡ್ಸ್‌ ರೈಲುಗಳನ್ನು ಒಂದೋ ಹತ್ತಿ ಆಚೆಗೆ ಸಾಗಬೇಕು, ಇಲ್ಲವೇ ರೈಲಿನ ಅಡಿಯಿಂದ ನುಸುಳಬೇಕು.

ಇಲ್ಲಿನ ಗೋದಾಮಿನಿಂದ ಸರಕು ಸಾಗಣೆಗಾಗಿ ದಿನದ ಬಹುಪಾಲು ಸಮಯ ಒಂದಲ್ಲ ಒಂದು ರೈಲು ಇಲ್ಲಿ ನಿಂತೇ ಇರುತ್ತದೆ. ಹೀಗಾಗಿ ದಾಟುವುದು ನಿತ್ಯ ಸರ್ಕಸ್‌.

ಮೀನ ಕಳಿಯದ ಜನರ ಓಡಾಟಕ್ಕೆ ಅಡ್ಡಿಯಾಗಿರುವುದು ಗೂಡ್ಸ್‌ ರೈಲು ಹಳಿ ಮತ್ತು ಗೋದಾಮು. ಮೀನಕಳಿಯದಲ್ಲಿ ಬಂದರು ಆರಂಭವಾದ ಬೆನ್ನಲ್ಲೇ ಈ ಸಮಸ್ಯೆ ವಿಪರೀತ ಸ್ಥಿತಿಗೆ ತಲುಪಿದೆ. ತಮ್ಮ ಕಷ್ಟಕರ ಪಾಡಿನ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಎಷ್ಟು ಮನವಿ ಮಾಡಿದರೂ ಭರವಸೆ ಮಾತ್ರ ಉಳಿದು ಕೊಂಡಿದೆ. ಕನಿಷ್ಠ ಈ ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ಎಂಬ ಯೋಜ ನೆಯೂ ಸಿದ್ಧಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ಜನರು. ಹೀಗಾಗಿ ಅವರಿಗೆ ನಿಂತ ರೈಲುಗಳ ನಡುವೆ ಸರ್ಕಸ್‌ ಮಾಡುವುದು ಅನಿವಾರ್ಯವಾಗಿದೆ.

ಮಹಿಳೆಯರು, ಮಕ್ಕಳ ಪಾಡು ಹೇಳತೀರದು
ಮೀನಕಳಿಯಕ್ಕೆ ಹೋಗಲು ಎರಡು ದಾರಿಗಳಿವೆ. ಒಂದು ಪಣಂಬೂರಿನ ಕೈಗಾರಿಕೆ ಪ್ರದೇಶ ನಿಲ್ದಾಣದಿಂದ ನೇರವಾಗಿ ಪಶ್ಚಿಮಕ್ಕೆ ಸಾಗಿದರೆ ಕೇವಲ 1 ಕಿ.ಮೀ. ದೂರ. ಇನ್ನೊಂದು, ಬೈಕಂಪಾಡಿಗೆ ಹೋಗಿ ಅಲ್ಲಿಂದ ಪ್ರಧಾನ ರಸ್ತೆಯಲ್ಲಿ ಸುಮಾರು 4 ಕಿ.ಮೀ. ಸುತ್ತಿ ಹೋಗಬೇಕು. ಆದರೆ ಅತೀ ಹೆಚ್ಚು ಜನರು ಬಳಸುವ ಸಮೀಪದ ರಸ್ತೆಗೆ ರೈಲು ಹಳಿ ಮತ್ತು ರೈಲು ಸದಾ ಕಾಲ ತಡೆಯಾಗಿದೆ. ಸುಮಾರು ಸಾವಿರಕ್ಕೂ ಅಧಿಕ ಜನರಿರುವ ಊರಲ್ಲಿ ಎಲ್ಲರ ಬಳಿಯೂ ದ್ವಿಚಕ್ರ ಸಹಿತ ವಾಹನವಿಲ್ಲ. ರಿಕ್ಷಾ ದಲ್ಲಿ ನಿತ್ಯ 70 ರೂ. ನೀಡಿ ಓಡಾಡುವಷ್ಟು ಆರ್ಥಿಕ ಸ್ಥಿತಿವಂತರೂ ಇವರಲ್ಲ.

ಬಂದರು ಪ್ರದೇಶ ವೇಗವಾಗಿ ಅಭಿ ವೃದ್ಧಿ ಹೊಂದುತ್ತಿದ್ದು, ಸಾಕಷ್ಟು ಗೋದಾಮುಗಳು ಇಲ್ಲಿವೆ. ಇಲ್ಲಿಂದ ರೈಲಿನ ಮೂಲಕವೇ ಸಾಮಾನು ಸರಂಜಾಮುಗಳ ಸಾಗಣೆ ನಡೆಯುತ್ತದೆ. ಈ ಕಾರಣಕ್ಕಾಗಿ ಗೂಡ್ಸ್‌ ರೈಲುಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಒಂದು ರೈಲು ಒಮ್ಮೆ ಬಂದು ನಿಂತರೆ ಗಂಟೆಗಟ್ಟಲೆ ಲೋಡಿಂಗ್‌ ನಡೆಯುತ್ತದೆ. ಹೀಗಾಗಿ ಜನರು ರೈಲನ್ನು ದಾಟಿಕೊಂಡೇ ಹೋಗಬೇಕು. ಯುವಕರು, ಪುರುಷರು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹೋಗುವವರು ಹೇಗೋ ರೈಲಿನ ಎರಡು ಬೋಗಿಗಳ ನಡುವಿನ ಸಣ್ಣ ಜಾಗದಲ್ಲಿ ತೂರಿಕೊಂಡು ದಾಟುತ್ತಾರೆ. ಆದರೆ ಪುಟ್ಟ ಮಕ್ಕಳಿಗೆ, ವಯಸ್ಸಾದವರಿಗೆ ಅದೂ ಕಷ್ಟ. ಅವರು ರೈಲಿನಡಿ ಬಗ್ಗಿಕೊಂಡು ದಾಟಬೇಕಾಗುತ್ತದೆ. ಅದೆಷ್ಟೋ ವೃದ್ಧರಿಗೆ, ಮಹಿಳೆಯರಿಗೆ ರೈಲಿನ ಅಡಿಯಲ್ಲಿ ನುಸುಳಿಕೊಂಡು ಹೋಗುವುದು ಕೂಡ ಕಷ್ಟ. ಅವರು ಬಗ್ಗಿಕೊಂಡು ಉರುಳಾಡಿಕೊಂಡು ಹಳಿ ದಾಟುವ ದೃಶ್ಯವೇ ಕರುಣಾಜನಕ.

ನಿಂತ ರೈಲಿನ ನಡುವೆ ತಮ್ಮ ಸರಕು ಸರಂಜಾಮು, ಬ್ಯಾಗ್‌ಗಳನ್ನು ಹಿಡಿದು ಕೊಂಡು ದಾಟುವುದು ಅನಿವಾರ್ಯ. ವಯೋವೃದ್ಧರು, ಮಹಿಳೆಯರು ರೈಲು ಹತ್ತಿ ಇಳಿಯುವುದರಿಂದ ಕೈ ಕಾಲು ನೋವು, ಮಂಡಿ ನೋವು ಬಾಧಿಸುತ್ತಿದೆ.

ಪ್ರಧಾನಿ ಕಚೇರಿಯಿಂದ ಪತ್ರ ಬಂದರೂ…
ಈ ರೈಲು ಹಳಿಗೆ ಶಾಶ್ವತ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ರೈಲ್ವೇ ಇಲಾಖೆ, ಬಂದರು ಇಲಾಖೆ ಬಳಿ ಇಲ್ಲಿನ ಜನರು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಇನ್ನೂ ಯಾರೂ ಮನಸು ಮಾಡಿಲ್ಲ.

ಊರಿನ ಮಂದಿ ಸಮಸ್ಯೆ ಬಗೆಹರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಮೇಲ್‌ ಮೂಲಕ ಮನವಿ ಅರ್ಪಿಸಿ ದ್ದರು. ಮನವಿಗೆ ಪ್ರಧಾನ ಮಂತ್ರಿ ಕಾರ್ಯಾಲಯ ಉತ್ತರಿಸಿ, ಶಾಶ್ವತ ಮೇಲ್ಸೇತುವೆಯ ವೆಚ್ಚವನ್ನು ಬಂದರು ಮತ್ತು ರಾಜ್ಯ ಸರಕಾರ, ಪಾಲಿಕೆ ಜತೆಯಾಗಿ ಮಾಡಿಕೊಡಿ ಎಂದು ಸಲಹೆ ನೀಡಿತ್ತು. 2023ರ ಡಿಸೆಂಬರ್‌ ವೇಳೆಗೆ ಈ ಮೇಲ್‌ ಬಂದಿದ್ದರೂ ಯಾರೂ ಸ್ಪಂದಿಸಿಲ್ಲ.

ಹೆದ್ದಾರಿ ಬಳಿಯೂ ಕಾಲುದಾರಿಗೆ ಸಮಸ್ಯೆ
ಗ್ರಾಮಸ್ಥರು ತಮ್ಮ ನಿತ್ಯ ಕಾಯಕಕ್ಕೆ ಹೋಗುವ ದಾರಿಗಳು, ಇಲ್ಲಿನ ಬಸ್‌ ನಿಲ್ದಾಣ ಎಲ್ಲವೂ ಹೆದ್ದಾರಿ ವಿಸ್ತರಣೆ, ಪೆಟ್ರೋಲ್‌ ಬಂಕ್‌ ವಿಸ್ತರಣೆಯ ವೇಳೆ ಮುಚ್ಚಲ್ಪಟ್ಟಿತ್ತು. ಸಮರ್ಪಕ ಕಾಲುದಾರಿ ಹಾಗೂ ಪಾಲಿಕೆಯ ವತಿಯಿಂದ ತಂಗುದಾಣ ನಿರ್ಮಿಸಲು ಮನವಿ ಕೊಟ್ಟಿದ್ದರೂ ಭರವಸೆ ಮಾತ್ರ ಉಳಿದುಕೊಂಡು ಬಿಟ್ಟಿದೆ.

ಸಂಸದರ ಮೇಲೆ ಗ್ರಾಮಸ್ಥರ ಚಿತ್ತ
ಇತ್ತೀಚೆಗೆ ವಿಶೇಷ ಆರ್ಥಿಕ ವಲಯದಲ್ಲಿ ಕೆಲಸ ಕಳೆದುಕೊಂಡವರಿಗೆ ಕೆಲಸ ತೆಗೆದುಕೊಟ್ಟು ಅಲ್ಲಿಯ ನೌಕರರ ಗೌರವಕ್ಕೆ ಪಾತ್ರವಾದ ಸಂಸದ ಬ್ರಿಜೇಶ್‌ ಚೌಟ ಅವರ ಮೇಲೆ ಗ್ರಾಮಸ್ಥರ ಚಿತ್ತ ನೆಟ್ಟಿದೆ. ನೂತನ ಸಂಸದರನ್ನು ಭೇಟಿಯಾಗಿ ಮನವಿ ಅರ್ಪಿಸಿ ಸಮಸ್ಯೆ ತಿಳಿಸಲು ಮುಂದಾಗಿದ್ದಾರೆ. ಬಂದರು ಬಳಿಯ ಗೂಡ್ಸ್‌ ರೈಲು ಹಳಿಯ ಬಳಿ ಮೇಲ್ಸೇತುವೆ ಇಲ್ಲವೇ ಕೆಳ ಸೇತುವೆ ಮಾಡಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು ಎನ್ನುವ ಬಹು ದಿನದ ಬೇಡಿಕೆ ಪೂರೈಸಲು ಮನವಿ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.

ಸಮಸ್ಯೆ ಬಗೆ ಹರಿಸಲು ಗರಿಷ್ಠ ಪ್ರಯತ್ನ
ರೈಲ್ವೇ ಯಾರ್ಡ್‌ ಬಳಿ ಜನರ, ವಿದ್ಯಾರ್ಥಿಗಳ ಓಡಾಟಕ್ಕೆ ರೈಲು ನಿಲ್ದಾಣಗಳಲ್ಲಿ ಇರುವಂತೆ ಕಬ್ಬಿಣದ ಮೇಲ್ಸೇತುವೆ ನಿರ್ಮಿಸುವ ಕುರಿತಂತೆ ಪ್ರಸ್ತಾವ ಮಂಡಿಸಿದ್ದೆ. ತಾಂತ್ರಿಕ ಕಾರಣಕ್ಕೆ ವಿಳಂಬವಾಗಿರುವ ಮಾಹಿತಿ ಲಭಿಸಿದೆ. ಈ ಕುರಿತಂತೆ ಸಂಸದರ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲು ಗರಿಷ್ಠ ಪ್ರಯತ್ನ ನಡೆಸಲಾಗುವುದು.
– ಡಾ| ಭರತ್‌ ಶೆಟ್ಟಿ ವೈ ಶಾಸಕರು

-ಲಕ್ಷ್ಮೀನಾರಾಯಣ ರಾವ್‌

ಟಾಪ್ ನ್ಯೂಸ್

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

9–Niveus-Mangalore-Marathon

Niveus Mangalore Marathon 2024: ನ.10: ನೀವಿಯಸ್‌ ಮಂಗಳೂರು ಮ್ಯಾರಥಾನ್‌

7-bunts

Mangaluru: ಡಿ. 7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.