ಬಜಪೆ: ರಸ್ತೆ ವಿಸ್ತರಣೆಗೊಂಡರೂ ಸಂಕಷ್ಟ ತಪ್ಪಲಿಲ್ಲ!

ವಾಹನ ಸಂಚಾರ ಸುಗುಮವಾಗಲು ರಸ್ತೆ ಬದಿಯಲ್ಲಿ ಮಣ್ಣು ಹಾಕಲಾಗಿದೆ

Team Udayavani, Dec 19, 2022, 3:09 PM IST

ಬಜಪೆ:ರಸ್ತೆ ವಿಸ್ತರಣೆಗೊಂಡರೂ ಸಂಕಷ್ಟ ತಪ್ಪಲಿಲ್ಲ!

ಬಜಪೆ: ಇಲ್ಲಿನ ಪೊಲೀಸ್‌ ಠಾಣೆಯಿಂದ ಮುರನಗರ ಹಳೆ ವಿಮಾನ ನಿಲ್ದಾಣ ಕಾಂಕ್ರೀಟ್‌ ರಸ್ತೆಯ ಇಕ್ಕೆಲಗಳಲ್ಲಿ ಹುಡಿಮಣ್ಣು ಹಾಕಿದ ಪರಿಣಾಮ ರಸ್ತೆ ಬದಿಯ ಮನೆಗಳು, ಆಸ್ಪತ್ರೆಯೊಳಗೆ ಧೂಳು ತುಂಬಿಕೊಳ್ಳುವಂತಾಗಿರುವುದು ಮಾತ್ರವಲ್ಲದೆ ರಸ್ತೆಯಲ್ಲಿ ಸಾಗುವ ಲಘು ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ.

ಬಜಪೆ ಪೊಲೀಸ್‌ ಠಾಣೆಯಿಂದ ಮುರನಗರ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಒಂದು ವಾಹನ ಸಾಗುವಷ್ಟಕ್ಕೆ ಮಾತ್ರ ಕಾಂಕ್ರೀಟ್‌ ಹಾಕಲಾಗಿತ್ತು. ಇದರಿಂದ ಎದುರು ಬರುವ ವಾಹನಗಳಿಗೆ ದಾರಿ ಕೊಡುವುದು ಲಘು ವಾಹನಗಳಿಗೆ ತೊಂದರೆಯಾಗುತ್ತಿತ್ತು.

ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಕಾಂಕ್ರೀಟ್‌ ರಸ್ತೆಯನ್ನು ವಿಸ್ತರಿಸುವಂತೆ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಬಜಪೆ ಪೇಟೆ ರಸ್ತೆ ಕಾಮಗಾರಿ ಆರಂಭ ವಾಗಿರುವುದರಿಂದ ಪರ್ಯಾಯ ರಸ್ತೆ ಯಾಗಿ ಇದನ್ನು ಬಳಸಲಾಗುತ್ತಿದೆ. ಬಜಪೆ ಪೊರ್ಕೋಡಿ ದ್ವಾರದಿಂದ ಚರ್ಚ್‌ ವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರ ಬದಲಿ ಮಾರ್ಗದ ವ್ಯವಸ್ಥೆಗಾಗಿ ವಾಹನ ಗಳಿಗೆ ಕಿನ್ನಿಪದವು ಹಳೆ ವಿಮಾನ ನಿಲ್ದಾಣ, ಮುರನಗರ, ಪೊಲೀಸ್‌ ಠಾಣೆ ರಸ್ತೆಯಾಗಿ ಬಜಪೆಗೆ ಬರಲು ಸಿದ್ಧತೆಗಳು ನಡೆಯುತ್ತಿದೆ.

ಅದಕ್ಕಾಗಿ ಮುರನಗರದಿಂದ -ಬಜಪೆ ಪೊಲೀಸ್‌ ಠಾಣೆಯ ತನಕ ಎರಡು ವಾಹನಗಳು ಸುಗುಮವಾಗಿ ಸಂಚರಿಸಲು ಅನುಕೂಲವಾಗುವಂತೆ ಕಾಂಕ್ರೀಟ್‌ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕಿ ವಿಸ್ತರಿಸಲಾಗಿದೆ.

ಎದುರಾಯ್ತು ಮತ್ತೊಂದು ಸಮಸ್ಯೆ
ರಸ್ತೆ ಕಿರಿದಾಗಿದೆ ಎಂಬ ಸಮಸ್ಯೆ ದೂರವಾದರೂ ಈಗ ರಸ್ತೆ ವಿಸ್ತರಣೆಯಾಗಿದ್ದೇ ತಪ್ಪಾಯಿತು ಎನ್ನುವಂತೆ ಇಲ್ಲಿನ ರಸ್ತೆ ಏನೋ  ವಿಸ್ತರಿಸಲಾಯಿತು. ಆದರೆ ಸುತ್ತಮುತ್ತಿಲಿನವರು ನಿತ್ಯವೂ ಧೂಳು ತಿನ್ನಬೇಕಾದ ಪ್ರಸಂಗ ಎದುರಾಗಿದೆ. ವಾಹನ ಸಂಚಾರ ಸುಗುಮವಾಗಲು ರಸ್ತೆ ಬದಿಯಲ್ಲಿ ಮಣ್ಣು ಹಾಕಲಾಗಿದೆ. ಘನ ವಾಹನಗಳು ಈ ರಸ್ತೆಯಲ್ಲಿ ಸಾಗುವ ಸಾಕಷ್ಟು ಧೂಳು ಎಳುತ್ತದೆ. ಇದರಿಂದ ಲಘು ವಾಹನ ಹಾಗೂ ದ್ವಿಚಕ್ರವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಹಾಕಿದ ಮಣ್ಣಿಗೆ ನೀರು ಹಾಕಿದರೂ ಒದ್ದೆಯಾದ ಮಣ್ಣು ಕ್ಷಣದಲ್ಲೇ ಒಣಗಿ ಮತ್ತೆ ಧೂಳು ಎಳುತ್ತದೆ.

ಮಳೆ ಬಂದರೆ ಕೆಸರು
ಮಳೆ ಬಂದರೆ ಕಾಂಕ್ರೀಟ್‌ ರಸ್ತೆ ಕೆಸರುಮಯವಾಗಲಿದೆ. ಇದರಿಂದ ವಾಹನ ಸಂಚಾರವೇ ಕಷ್ಟಕರವಾಗಲಿದೆ. ಬಜಪೆ ಪೇಟೆ ಕಾಮಗಾರಿ ಆರಂಭದ ಬಳಿಕ ಈ ರಸ್ತೆಯ ಬದಲಿಗೆ ಪರ್ಯಾಯ ರಸ್ತೆಯಾಗಿ ಉಪಯೋಗಿಸುವುದರಿಂದ ಆಗ ವಾಹನ ಸಂಚಾರವೇ ದುರ್ಗಮವಾಗುವ ಸಾಧ್ಯತೆ ಇದೆ. ಹೀಗಾಗಿ ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕಿದೆ. ಹುಡಿಮಣ್ಣಿನ ಬದಲು ಇಲ್ಲಿ ಕೋರೆ ಕೆಂಪು ಮಣ್ಣು ಹಾಕಬಹುದಿತ್ತು. ಇದರಿಂದ ಧೂಳು, ಕೆಸರು
ಕಡಿಮೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಪೊಲೀಸ್‌ ಠಾಣೆ – ಮುರನಗರ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಪೋಪ್‌ ಜಾನ್‌ ದ್ವಿತೀಯ ಅವರ ಪುಣ್ಯ ಕ್ಷೇತ್ರ, ಖಾಸಗಿ ಆಸ್ಪತ್ರೆ, ಹಲವು ಮನೆಗಳಿದ್ದು ರಸ್ತೆಯ ಧೂಳು ಆ ಪರಿಸರವನ್ನೇ ಬಹುತೇಕ ಆವರಿಸಿದೆ. ಈಗಲೇ ಇಲ್ಲಿಗೆ ಬೇರೆ ಗಟ್ಟಿ ಮಣ್ಣು ಹಾಕಿದರೆ ಉತ್ತಮ ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಬದಲಿ ರಸ್ತೆಯಾಗಿ ಇದು ಸುಮಾರು ಒಂದು ವರ್ಷ ಬಳಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಬೇರೆ ಮಣ್ಣು ಹಾಕುವ ಕಾರ್ಯ ಈಗಲೇ ಮಾಡಬೇಕು. ಗುತ್ತಿಗೆದಾರರು, ಇಲಾಖೆ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕಿದೆ.

ಚರಂಡಿಯೇ ಇಲ್ಲದ ರಸ್ತೆ ಬಜಪೆ ಪೊಲೀಸ್‌ ಠಾಣೆಯಿಂದ ಮುರನಗರ ಹಳೆವಿಮಾನ ನಿಲ್ದಾಣ ಕಾಂಕ್ರೀಟಿ ರಸ್ತೆಯ ಬದಿಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ನಿಲ್ಲುವ ಸಾಧ್ಯತೆಗಳಿವೆ. ಚರಂಡಿ ನಿರ್ಮಾಣಕ್ಕೂ ಕ್ರಮ ತೆಗೆದುಕೊಳ್ಳಬೇಕು.

ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.