ಅಂಗನವಾಡಿ ಬಲವರ್ಧನೆಗೆ ಬಾಲಸ್ನೇಹಿ ಕೇಂದ್ರ


Team Udayavani, Jul 8, 2019, 5:00 AM IST

n-12

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಯರು ಮಾತೃ ವಾತ್ಸಲ್ಯದೊಂದಿಗೆ ಸಮಾಜದ ಕಟ್ಟಕಡೆಯ ಜನತೆಯೊಂದಿಗೆ ಸುಖ – ದುಃಖಗಳೊಂದಿಗೆ ಬೆರೆಯು ವವರು ಮತ್ತು ಸಮಾಜದ ಮುಖ್ಯ ವಾಹಿನಿಯಲ್ಲಿರುವವರು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ರವಿವಾರ ಶ್ರೀ ನಟರಾಜ ವೇದಿಕೆಯಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಮಾವೇಶ, ಸಮ್ಮಾನವನ್ನು ಉದ್ಘಾಟಿಸಿ ಮಾತನಾಡಿದರು.

ಗೌರವಧನ ಹೆಚ್ಚಳ
ಹೆಣ್ಣು ಮಕ್ಕಳ ಕಲ್ಯಾಣದ ದೃಷ್ಟಿಯಿಂದ ಪ್ರಧಾನಿ ಮೋದಿಯವರು ಬೇಟಿ ಪಢಾವೋ ಬೇಟಿ ಬಚಾವೋದಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರಕಾರದಿಂದಲೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲಾಗಿದೆ. ರಾಜ್ಯ ಸರಕಾರವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಬಜೆಟ್‌ನಲ್ಲಿ ಮಾಡಲಾದ ಈ ಘೋಷಣೆ ಅನುಷ್ಠಾನಕ್ಕೆ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದರು.

ಬಾಲಸ್ನೇಹಿ ಕೇಂದ್ರ

ಇಂದು ಪ್ರತಿಯೊಬ್ಬರೂ ಪರಿ ವರ್ತನೆಗೆ ಒಗ್ಗಿಕೊಳ್ಳುವುದು ಅನಿ ವಾರ್ಯ. ಸರಕಾರದಿಂದ ರಾಜ್ಯದ 1 ಸಾವಿರ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಹಾಗೂ 276 ಪಬ್ಲಿಕ್‌ ಸ್ಕೂಲ್ಗಳಲ್ಲಿ ಎಲ್ಕೆಜಿ ಆರಂಭಿಸಿದಾಗ ಅಂಗನವಾಡಿಗಳಿಗೆ ಆತಂಕ ಉಂಟಾಗಿರುವುದು ಹೌದು. ಆದರೆ ಇದನ್ನು ದೂರ ಮಾಡಲು ಸರಕಾರ 4,100 ಬಾಲಸ್ನೇಹಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದೆ. ಅಂಗನವಾಡಿಗಳ ಬಲವರ್ಧನೆಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಅಂಗನವಾಡಿ ನೌಕರ ರನ್ನೂ ಎನ್‌ಪಿಎಸ್‌ ಸ್ಕೀಂಗೆ ಒಳಪಡಿಸುವ ಕುರಿತು ಚರ್ಚೆ ನಡೆಸಲಾಗುವುದು. ಅಂಗನವಾಡಿ ಕಟ್ಟಡ, ಜಾಗ, ವೇತನದ ಕುರಿತು ಸಚಿವೆ ಜಯಮಾಲಾ ಅವರಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.

ಕನಿಷ್ಠ ವೇತನ ಜಾರಿಗೊಳಿಸಿ
ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್‌. ಮಾತನಾಡಿ, ಸುಮಾರು 45 ವರ್ಷಗಳಿಂದ ಅಂಗನವಾಡಿ ನೌಕರರಿಗೆ ಗೌರವಧನ ಮಾತ್ರ ಸಿಗುತ್ತಿದೆ. ಹಲವು ರೀತಿಯ ಹೋರಾಟ ಬಳಿಕ 150 ರೂ.ಗಳಿಂದ 8 ಸಾವಿರ ರೂ.ಗೆ ಹಾಗೂ 50 ರೂ.ನಿಂದ 4 ಸಾವಿರ ರೂ.ಗೆ ಗೌರವಧನ ಹೆಚ್ಚಳವಾಗಿದೆ. ಆದರೆ ದುಪ್ಪಟ್ಟು ಕೆಲಸ ಮಾಡುವ ನಮಗೆ ಕನಿಷ್ಠ ವೇತನ ಜಾರಿಗೊಳಿಸಿ ಎನ್ನುವ ಆಗ್ರಹ ಮಾಡುತ್ತಿದ್ದೇವೆ ಎಂದರು.

ಲಾಭದಲ್ಲಿ ಸಹಕಾರ ಸಂಘ
ಸಂಘದ ಮೂಲಕ ಸಹಕಾರ ಸಂಘವನ್ನು 4 ವರ್ಷಗಳ ಹಿಂದೆ ಅತ್ಯಂತ ಕಟ್ಟಪಟ್ಟು ಮಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ವರ್ಷದಿಂದ ಲಾಭದಲ್ಲಿ ಮುನ್ನಡೆಯುತ್ತಿದೆ.
ಮುಂದೆ ಪುತ್ತೂರಿನಲ್ಲೂ ಶಾಖೆ ಆರಂಭಿಸುವ ಚಿಂತನೆ ಇದೆ. ಜತೆಗೆ ಸಂಘದ ಸದಸ್ಯರಿಗೆ ನೆರವಾಗಲು ಟ್ರಸ್ಟ್‌ ಆರಂಭಿಸಲಾಗಿದೆ. ಅಂಗನವಾಡಿಯ ನಿವೃತ್ತರಿಗೆ ಪಿಂಚಣಿ ಸಿಗಬೇಕು ಎನ್ನುವ ಹೋರಾಟ ಕೈಗೆತ್ತಿಕೊಂಡಿದ್ದೇವೆ ಎಂದರು.

ಸಮ್ಮಾನ, ದೇಣಿಗೆ ಹಸ್ತಾಂತರ
ಪುತ್ತೂರಿನಲ್ಲಿ ಸಿಡಿಪಿಒ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಶಾಂತಿ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ನಿವೃತ್ತಿ ಹೊಂದಿದ 5 ಅಂಗನವಾಡಿ ಕಾರ್ಯಕರ್ತೆಯವರು ಹಾಗೂ 10 ಸಹಾಯಕಿಯರನ್ನು ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ ಅವರು ಸಂಘಕ್ಕೆ ದೇಣಿಗೆಯನ್ನು ನೀಡಿದರು.

ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ಪುಷ್ಪಾ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಘದ ಜಿಲ್ಲಾಧ್ಯಕ್ಷೆ ಲತಾ ಅಂಬೆಕಲ್ಲು, ತಾಲೂಕು ಉಪಾಧ್ಯಕ್ಷೆ ಮಾಲಿನಿ, ಪುತ್ತೂರು ಪ್ರಭಾರ ಸಿಡಿಪಿಒ ಭಾರತಿ, ಅಸಹಾಯಕರ ಸೇವಾ ಟ್ರಸ್ಟ್‌ ಅಧ್ಯಕ್ಷೆ ನಯನಾ ರೈ ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಉಪಾಧ್ಯಕ್ಷೆ ವಿಜಯೇಶ್ವರಿ ಗೌಡ ಸ್ವಾಗತಿಸಿ, ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ನಿರ್ವಹಿಸಿದರು.

ಕಾರ್ಯಕರ್ತೆಯರು ಕಣ್ಣೀರು ಸುರಿಸಿದರು…
ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ನೌಕರರಿಗೆ ಗೌರವ ಧನದ ನೆಲೆಯಲ್ಲಿ ಕಡಿಮೆ ವೇತನ ನೀಡುತ್ತಿರುವ, ಹಲವು ರೀತಿಯ ಒತ್ತಡದ ಮಧ್ಯೆ ಕೆಲಸ ನಿರ್ವಹಿಸಬೇಕಾದ ಸ್ಥಿತಿಗಳನ್ನು ಹೇಳಿಕೊಂಡು ಅಂಗನವಾಡಿ ಕಾರ್ಯಕರ್ತೆಯರು ಕಣ್ಣೀರು ಸುರಿಸಿದರು. ಜಿಲ್ಲಾ ಉಪಾಧ್ಯಕ್ಷೆ ವಿಜಯೇಶ್ವರಿ, ಮಾಜಿ ಅಧ್ಯಕ್ಷೆ ಶ್ರೀಲತಾ ರಾವ್‌, ಕಾರ್ಯಕರ್ತೆ ರಾಜೀವಿ ಕುಂಬ್ರ ಅನಿಸಿಕೆ ಹಂಚಿಕೊಂಡರು.

ಕಟ್ಟಡಕ್ಕೆ ಮನವಿ
ಪುತ್ತೂರಿನ ಹಾಲಿ ಸ್ತ್ರೀಶಕ್ತಿ ಭವನವು ನಗರದಿಂದ ದೂರ ಇದ್ದು, ಅಲ್ಲಿಗೆ ತೆರಳಲು ಕಷ್ಟವಾಗುತ್ತಿದೆ. ಸ್ವಂತ ಕಟ್ಟಡವನ್ನು ನಗರದೊಳಗೆ ಮಾಡಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.