Bantwal: ದೇವಸ್ಯಪಡೂರು ಗ್ರಾಮದ ಮಾಲಬೆ ಮೋರಿ ಕುಸಿತ: ರಸ್ತೆ ಸಂಚಾರ ಕಡಿತ ಭೀತಿ!
Team Udayavani, Sep 4, 2024, 1:22 PM IST
ಬಂಟ್ವಾಳ: ಅಲ್ಲಿಪಾದೆ- ಕುಂಟಾಲಪಲ್ಕೆ ರಸ್ತೆಯ ದೇವಸ್ಯಪಡೂರು ಗ್ರಾಮದ ಮಾಲಬೆಯಲ್ಲಿ ಮೋರಿ ಕುಸಿದು ರಸ್ತೆಯಲ್ಲಿ ಸಂಚಾರ ಕಡಿತದ ಭೀತಿ ಎದುರಾಗಿದೆ. ಕಳೆದ ಮಳೆಗಾಲದಲ್ಲೇ ಮೋರಿ ಕುಸಿದಿದ್ದು, ಇದೀಗ ಮತ್ತೆ ಹೆಚ್ಚಿನ ಕುಸಿತ ಉಂಟಾಗಿ
ಕಳೆದ ಎರಡು ತಿಂಗಳ ಹಿಂದೆ ಭೀಕರ ಮಳೆಯ ಸಂದರ್ಭದಲ್ಲಿ ಈ ಭಾಗದಲ್ಲಿ ಮೋರಿ ಕುಸಿದಿದ್ದು, ಬಳಿಕ ಅಲ್ಲಿಗೆ ಕಪ್ಪು ಕಲ್ಲು ಸಹಿತ ಹುಡಿಗಳನ್ನು ಹಾಕಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು. ಆದರೆ ಈಗ ಮತ್ತೆ ಜೋರಾಗಿ ಮಳೆಯಾಗುತ್ತಿರುವುದರಿಂದ ಹಿಂದಿನ ಸ್ಥಿತಿ ಪುನರಾವರ್ತನೆಯಾಗಿದೆ.
ವಾಹನ ಸಂಚಾರ ಸಂಕಷ್ಟ
ರಸ್ತೆಯಲ್ಲಿ ಕುಸಿತ ಉಂಟಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಈ ರಸ್ತೆಯಲ್ಲಿ ಖಾಸಗಿ ಬಸ್ಸಿನ ಸಂಚಾರ ಕೂಡ ಇರುವುದರಿಂದ ಕುಸಿತದಿಂದ ಸಂಪರ್ಕ ಕಡಿತಗೊಂಡಲ್ಲಿ ನೂರಾರು ಪ್ರಯಾಣಿಕರಿಗೂ ತೊಂದರೆ ಉಂಟಾಗಲಿದೆ. ಜತೆಗೆ ಇಲ್ಲಿನ ರಸ್ತೆಯು ಈ ಭಾಗದ ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಒಂದು ವೇಳೆ ಮತ್ತಷ್ಟು ಕುಸಿದು ಸಂಚಾರ ಕಡಿತಗೊಂಡಲ್ಲಿ ನೂರಾರು ಗ್ರಾಮಸ್ಥರಿಗೆ ತೊಂದರೆಯಾಗಲಿದೆ.
ಗಲಬೆಯಲ್ಲಿ ಕಳೆದ ಜುಲೈಯಲ್ಲಿ ಮೋರಿ ಕುಸಿದು ರಸ್ತೆಗೆ ಹಾನಿಯಾಗಿದ್ದು, ಆ ಸಂದರ್ಭದಲ್ಲಿ ಜಿ.ಪಂ.ಎಂಜಿನಿಯರಿಂಗ್ ವಿಭಾಗದವರು ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದರು. ಈಗ ಮತ್ತೆ ಕುಸಿತದಿಂದ ಹೆಚ್ಚಿನ ಹಾನಿ ಉಂಟಾಗಿದೆ. ಹೀಗಾಗಿ ಕಂದಾಯ ಇಲಾಖೆ ಹಾಗೂ ಎಂಜಿನಿಯರಿಂಗ್ ವಿಭಾಗದವರು ಇತ್ತ ಗಮನಹರಿಸಿ ಮಳೆಹಾನಿ ಪರಿಹಾರದಲ್ಲಿ ದುರಸ್ತಿ ಕಾರ್ಯ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.
– ವಿನ್ಸೆಂಟ್ ಪಿಂಟೋ, ಸ್ಥಳೀಯರು
ರಸ್ತೆಯು ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯ ಮೂಲಕ ಅನುಷ್ಠಾನಗೊಂಡಿದ್ದು, ಪ್ರಸ್ತುತ ಮೋರಿ ಕುಸಿದಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆಯ ಕುಸಿಯುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?
RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ
Supreme Court: ತೀರ್ಪಿನಲ್ಲಿ ಲವ್ ಜೆಹಾದ್ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್ ನಕಾರ
Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?
RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ
Supreme Court: ತೀರ್ಪಿನಲ್ಲಿ ಲವ್ ಜೆಹಾದ್ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್ ನಕಾರ
Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.