Belagavi: ಅಧಿವೇಶನ ಹೆಸರಿನಲ್ಲಿ ಸರ್ಕಾರದ ಹಣ ಪೋಲು- ಭೀಮಪ್ಪ ಗಡಾದ ಆರೋಪ
Team Udayavani, Dec 6, 2024, 2:28 PM IST
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಕಳೆದ ವರ್ಷ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ರಾಜ್ಯ ಸರ್ಕಾರ ₹24.89 ಕೋಟಿ ಖರ್ಚು ಮಾಡಿದೆ ಎಂದು ಬೆಳಗಾವಿಯಲ್ಲಿ ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದರು.
ಪ್ರತಿವರ್ಷ ಅಧಿವೇಶನಕ್ಕೆ ದುಂದುವೆಚ್ಚ ಮಾಡುತ್ತಿದ್ದರೂ, ಸದನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತಿಲ್ಲ. 2023ರಲ್ಲಿ 10 ದಿನ ನಡೆದ ಅಧಿವೇಶನದಲ್ಲಿ ವಿಧಾನಸಭೆ ಕಾರ್ಯ ಕಲಾಪಗಳು: 66 ತಾಸು, 11 ನಿಮಿಷ ಮತ್ತು ವಿಧಾನ ಪರಿಷತ್ತಿನ ಕಾರ್ಯ ಕಲಾಪಗಳು 57 ತಾಸು, 29 ನಿಮಿಷ ನಡೆದಿವೆ. ಈ ಅವಧಿ ಲೆಕ್ಕ ಹಾಕಿದರೆ ಪ್ರತಿ ತಾಸಿಗೆ 20 ಲಕ್ಷ ಖರ್ಚಾಗಿದೆ ಎಂದು ಗಡಾದ ಹೇಳಿದರು.
ಅಧಿವೇಶನದಲ್ಲಿ ಜನಪ್ರತಿನಿಧಿಗಳಿಗೆ ಸಾರಿಗೆ, ವಸತಿ, ಊಟ ಮತ್ತಿತರ ಸೌಕರ್ಯ ಕಲ್ಪಿಸಲು ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಇಷ್ಟೆಲ್ಲ ಸೌಕರ್ಯ ಪಡೆದರೂ ಶಾಸಕರು ಕಲಾಪಕ್ಕೆ ನಿರೀಕ್ಷೆಯಂತೆ ಹಾಜರಾಗುತ್ತಿಲ್ಲ. ಅಧಿವೇಶನ ಹೆಸರಿನಲ್ಲಿ ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಗಡಾದ ಆರೋಪ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದರಿಂದ ಉತ್ತರ ಕರ್ನಾಟಕದ ಸಮಸ್ಯೆಗಳು ಬಗೆಹರಿಯುತ್ತವೆ. ಈ ಭಾಗದ ಅಭಿವೃದ್ಧಿಯಾಗುತ್ತದೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದೂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly Session: ಸಚಿವರ ಕ್ರಿಯಾಲೋಪ: ಸ್ಪೀಕರ್ ಮೇಜು ಕುಟ್ಟಿದ ಬಿಜೆಪಿ
Honey Trap Case ರದ್ದತಿಗೆ ಮುನಿರತ್ನ ಅರ್ಜಿ: ಪೊಲೀಸರಿಗೆ ಹೈಕೋರ್ಟ್ ನೋಟಿಸ್
GST ವಂಚಕರ ವಿರುದ್ಧ ಕ್ರಮಕ್ಕೆ ಇ.ಡಿ.ಗೆ ಮನವಿ: ಸಿಎಂ ಸಿದ್ದರಾಮಯ್ಯ
CM Siddaramaiah: “ಒಂದು ದೇಶ ಒಂದು ಚುನಾವಣೆ’ ವಿರುದ್ಧ ಗೊತ್ತುವಳಿ ಅಂಗೀಕಾರ
Karnataka High court: ರಾಹುಲ್ ಗಾಂಧಿಗೆ ಅವಹೇಳನ; ಯತ್ನಾಳ್ ವಿರುದ್ಧದ ಕೇಸ್ ರದ್ದು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.