Belman: ಅಗ್ನಿ ದುರಂತದ ಅಪಾಯ; ಟ್ರಾನ್ಸ್‌ಫಾರ್ಮರ್ ಸುತ್ತ ಸ್ವಚ್ಛತೆ
ಮುಂಡ್ಕೂರು: ಮೆಸ್ಕಾಂ ಮುನ್ನೆಚ್ಚರಿಕೆ ಕ್ರಮ
Team Udayavani, Jan 8, 2025, 4:02 PM IST
ಬೆಳ್ಮಣ್: ಮಳೆಗಾಲಕ್ಕೆ ಮುನ್ನ ತಂತಿಗಳ ಮೇಲೆ ಹಾದು ಹೋಗುತ್ತಿರುವ ಮರದ ಗೆಲ್ಲು ಹಾಗೂ ಗಿಡಗಂಟಿಗಳು ಕತ್ತರಿಸಿ ಸ್ವಚ್ಛಗೊಳಿಸಿ ಮಳೆಗಾಲದ ಮುನ್ನೆಚ್ಚರ ನಡೆಸಿ ಪ್ರಶಂಸೆಗೆ ಪಾತ್ರವಾಗಿದ್ದ ಮುಂಡ್ಕೂರು ಹಾಗೂ ಬೆಳ್ಮಣ್‌ನ ಮೆಸ್ಕಾಂ ಇಲಾಖೆ ಸಿಬಂದಿ ಇದೀಗ ವಿದ್ಯುತ್ ಪರಿವರ್ತಕಗಳ ಸುತ್ತ ಬೆಳೆದಿದ್ದ ಹುಲ್ಲು ಹಾಗೂ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ ಅಗ್ನಿ ಅಪಾಯಗಳನ್ನು ದೂರ ಮಾಡಿದ್ದಾರೆ.
ಮುಂಡ್ಕೂರು ಮೆಸ್ಕಾಂನ ಶಾಖಾಧಿಕಾರಿ ಸೋಮಯ್ಯ ಪೂಜಾರಿ ಹಾಗೂ ಬೆಳ್ಮಣ್‌ನ ಶಾಖಾಧಿಕಾರಿ ಪ್ರದೀಪ್‌ರವರ ಮಾರ್ಗದರ್ಶನದಲ್ಲಿ ಆಯಾ ಇಲಾಖೆಯ ಲೈನ್‌ಮ್ಯಾನ್‌ಗಳು ಹಾಗೂ ಸಿಬಂದಿಗಳು, ಅರೆಕಾಲಿಕ ಗ್ಯಾಂಗ್‌ಮೆನ್‌ಗಳು ಸೇರಿ ವಿದ್ಯುತ್ ಪರಿವರ್ತಕಗಳ ಸುತ್ತಮುತ್ತ ಸ್ವಚ್ಛತೆ ನಡೆಸಿದ್ದಾರೆ.
ಬೆಂಕಿ ಬೀಳುತ್ತಿತ್ತು…
ಪ್ರತೀ ಬಾರಿ ಮಳೆಗಾಲ ಮುಗಿದ ಬಳಿಕ ವಿದ್ಯುತ್ ಪರಿವರ್ತಕದ ಬಳಿಯ ಹುಲ್ಲು ಗಿಡಗಳು ಬಿಸಿಲಿಗೆ ಕರಟಿ ಹೋಗಿ ಪರಿವರ್ತಕದ ಕಿಡಿ ತಗಲಿ ಬೆಂಕಿ ಹಿಡಿದು ಊರೆಲ್ಲ ಹರಡಿ ಆವಾಂತರ ಸೃಷ್ಟಿಯಾಗುತ್ತದೆ. ಇದನ್ನೆಲ್ಲ ತಪ್ಪಿಸಲು ಮುಂಡ್ಕೂರು ಹಾಗೂ ಬೆಳ್ಮಣ್ ಮೆಸ್ಕಾಂ ಸಿಬಂದಿಗಳು ತಾವೇ ಹುಲ್ಲು ಕಟ್ಟಿಂಗ್ ಯಂತ್ರಗಳಿಂದ ಶ್ರಮದಾನ ಮಾಡಿದ್ದಾರೆ. ಮೆಸ್ಕಾಂ ಸಿಬಂದಿಗಳ ಈ ಪರಿಕಲ್ಪನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವಿದ್ಯುತ್ ಉಚಿತವಾದರೂ ಸಹಕಾರ ಕಡಿಮೆ
ಇದೀಗ ಸರಕಾರ ನಾಗರಿಕರಿಗೆ ಉಚಿತ ವಿದ್ಯುತ್ ನೀಡಿ ಕೃಪೆ ತೋರಿದ್ದರೂ ಸಾರ್ವಜನಿಕರು ತಮ್ಮ ಖಾಸಗಿ ಜಮೀನಿನಲ್ಲಿರುವ ಪರಿವರ್ತಕ ಹಾಗೂ ಕಂಬಗಳ ಅಕ್ಕಪಕ್ಕದ ಗಿಡಗಂಟಿ, ಹುಲ್ಲು ಮರ ಗೆಲ್ಲುಗಳನ್ನು ಕಡಿಯದೇ ಬಿಟ್ಟು ಆಕಸ್ಮಿಕ ಬೆಂಕಿ ಬಿದ್ದಾಗ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಆದರೆ, ಮೆಸ್ಕಾಂ ಸಿಬಂದಿ ತಾವೇ ಹುಲ್ಲು ಕಟಾವು ಯಂತ್ರ ಕೈಗೆತ್ತಿಕೊಂಡು ಶ್ರಮದಾನ ಮಾಡಿದೆ. ಇಂಥ ಕೆಲಸಗಳಿಗೆ ಸಾರ್ವಜನಿಕರು ಕೂಡಾ ಕೈಜೋಡಿಸಿದರೆ ಉತ್ತಮ ಎಂದು ನಿವೃತ್ತ ಕಂದಾಯ ಅಧಿಕಾರಿ ಅವಿಲ್ ಡಿ’ಸೋಜಾ ಹೇಳಿದ್ದಾರೆ.
ಅಪಾಯ ಬರುವ ಮುನ್ನವೇ ಎಚ್ಚರಿಕೆ ಕ್ರಮ
ಸಮರಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಮನೆಗೆ ಬೆಂಕಿ ಬಿದ್ದ ಬಳಿಕ ಬಾವಿ ತೋಡುವುದಕ್ಕಿಂತ ಅಪಾಯ ಬರುವ ಮುನ್ನವೇ ಕಾರ್ಯೋನ್ಮುಖರಾಗುವುದು ಉತ್ತಮ. ಪ್ರತೀ ಬಾರಿ ಪರಿವರ್ತಕಗಳ ಪಕ್ಕ ಒಣಗಿದ ಹುಲ್ಲು, ಗಿಡಗಳಿಗೆ ಬೆಂಕಿ ತಗಲಿ ಅಪಾಯ ಉಂಟಾಗುತ್ತಿದೆ. ಈ ಕಾರಣಕ್ಕಾಗಿ ಈ ಬಾರಿ ನಮ್ಮ ಸಿಬಂದಿಯ ಈ ಕೆಲಸ ಮಾಡಿದ್ದಾರೆ.
– ಸೋಮಯ್ಯ ಪೂಜಾರಿ, ಶಾಖಾಧಿಕಾರಿ, ಮುಂಡ್ಕೂರು ಮೆಸ್ಕಾಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.