Belthangady: ಮಾನವನ ಸ್ವಯಂಕೃತ ಅಪರಾಧದಿಂದ ಬಹುಪಾಲು ಸಮಸ್ಯೆ

ಶೇ.80 ಮನೆ ಹಾನಿಗೆ ಭೂಕುಸಿತ ಕಾರಣ

Team Udayavani, Sep 4, 2024, 1:06 PM IST

Belthangady: ಮಾನವನ ಸ್ವಯಂಕೃತ ಅಪರಾಧದಿಂದ ಬಹುಪಾಲು ಸಮಸ್ಯೆ

ಬೆಳ್ತಂಗಡಿ: ಕಡಿದಾದ ಪ್ರದೇಶ ದಲ್ಲಿ ಭೂ ಸಮತಟ್ಟು ಮಾಡಿ ಬೆಟ್ಟವನ್ನು ಕಡಿದು ಮನೆಗಳ ನಿರ್ಮಿಸಿದ ಪರಿಣಾಮ ಪ್ರಸಕ್ತ ಸಾಲಿನ ಮಳೆಗೆ ಶೇ.80ರಷ್ಟು ಮನೆಗಳು ಹಾನಿಗೊಳಗಾಗಿರುವ ವರದಿ ಬಹಿರಂಗವಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 2019ರ ಆಗಸ್ಟ್‌ನಲ್ಲಿ ಪ್ರವಾಹ ಎದುರಾದಾಗ ಅನೇಕ ಮನೆಗಳು ಹಾನಿಗೀಡಾಗಿದ್ದವು. ಈ ಭಾರೀ ಮಳೆ 2019ರ ಪ್ರವಾಹವನ್ನು ನೆನಪಿಸುವಂತಿತ್ತು. ಆದರೆ ಅಂದು ಪ್ರಾಕೃತಿಕ ವಿಕೋಪಕ್ಕೆ ಸಂಭವಿಸಿದ ಹಾನಿಯಾದರೆ, ಪ್ರಸಕ್ತ ಸಾಲಿನಲ್ಲಿ ಮಾನವ ಸ್ವಯಂಕೃತ ಅಪರಾಧದಿಂದ ಬಹುಪಾಲು ಹಾನಿ ಸಂಭವಿಸಿರುವುದು ಸ್ಪಷ್ಟವಾಗಿದೆ.

ಗರಿಷ್ಠ 220 ಮಿ.ಮೀ. ವರೆಗೆ ಮಳೆ ಜೂನ್‌ 2024ರಿಂದ ಈ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 233 ಮನೆಗಳು ಹಾನಿಗೊಳಗಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿ ಸರಾಸರಿ ಕನಿಷ್ಠ 30ರಿಂದ ಗರಿಷ್ಠ 220 ಮಿ.ಮೀ. ವರೆಗೆ ಮಳೆಯಾಗಿದೆ.

ಪರಿಣಾಮ 233 ಮನೆಗಳು ಭಾಗಶಃ ಹಾನಿ ಗೀಡಾಗಿವೆ. ಈ ಪೈಕಿ ಸುಮಾರು 191 ಮನೆ ಗಳು ಮೇಲೆ ಪಕ್ಕದ ಗುಡ್ಡ ಕುಸಿತದಿಂದಲೇ ಹಾನಿಗೊಳಗಾಗಿರುವುದು ಖಚಿತವಾಗಿದೆ.

ತೀವ್ರ ಮಳೆಯಿಂದಾಗಿ ಈ ಬಾರಿ ಹೆಚ್ಚಿನ ಹಾನಿ ಸಂಭವಿಸಿದೆ. ಬೆಟ್ಟ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಸಮತಟ್ಟು ಮಾಡಿ ಮನೆ ನಿರ್ಮಿಸಿದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಮುಂದೆ ಹೀಗಾಗದಂತೆ ಜಿಲ್ಲಾ ಧಿಕಾರಿಗಳ ನೇತೃತ್ವದ ತಂಡ ಹೊಸ ನಿಯಮ ಜಾರಿಗೆ ತರುವಲ್ಲಿ ವಿಶ್ಲೇಷಣೆ ನಡೆಸುತ್ತಿದೆ. ಮುಂದೆ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
-ಪೃಥ್ವಿ ಸಾನಿಕಮ್‌ ತಹಶೀಲ್ದಾರ್‌, ಬೆಳ್ತಂಗಡಿ

ಗ್ರಾಪಂ ಮಟ್ಟದಲ್ಲಿ ಈ ಬಾರಿ ಹಾನಿಗೊಳಗಾದ ಮನೆ, ರಸ್ತೆ, ಸೇತುವೆ ಸಹಿತ ಸಮಗ್ರ ಮಾಹಿತಿ ಪಡೆದು ವರದಿ ಸಿದ್ಧಪಡಿಸಿ ನೀಡಲಾ ಗಿದೆ. ಇದಕ್ಕಾಗಿಯೇ ಜಿಲ್ಲಾಡಳಿತ ನಿಯೋಜಿಸಿದ ತಂಡ ವರದಿ ನೀಡಿದೆ. ಅದರಂತೆ ಹಾನಿಗೊಳಗಾದ ರಸ್ತೆ, ಸೇತುವೆ ದುರಸ್ತಿಗೆ ಅನುದಾನ ಕೋರಿ ಸರಕಾರಕ್ಕೆ ಬರೆಯಲಾಗಿದೆ.
– ಭವಾನಿ ಶಂಕರ್‌, ಇಒ, ತಾ.ಪಂ. ಬೆಳ್ತಂಗಡಿ

ಹಾನಿ ಹಾಗೂ ಪರಿಹಾರ ವಿವರ
ಸಂಪೂರ್ಣ ಹಾನಿ: 15 ಮನೆ-ತಲಾ 1.25 ಲ.ರೂ.
ಶೇ.15-20 ಹಾನಿ: 141 ಮನೆ- ತಲಾ 6,500 ರೂ. ನಂತೆ 9,16,500 ಲ.ರೂ.
ಶೇ.20-50 ಹಾನಿ: 50 ಮನೆ -ತಲಾ 30,000ರೂ. ನಂತೆ 15,00,000 ಲ.ರೂ.
ಶೇ.50-75 ಹಾನಿ: 5 ಮನೆ- ತಲಾ 50,000ರೂ. ನಂತೆ 2,50,000 ಲ.ರೂ. ಪರಿಹಾರ
ಜಾನುವಾರ ಹಾನಿ: 2 ಹಸು, 1 ಕರು – 57,000 ರೂ. ಪರಿಹಾರ
ಕೃಷಿ ಹಾನಿ: 10 ಹೆಕ್ಟೇರ್‌ ಭತ್ತ ಬೆಳೆ ನಾಶ
ತೋಟಗಾರಿಕೆ-ಶೇ.33, ಹೆಚ್ಚಿನ ಹಾನಿಯಿಲ್ಲ.

ನಿಯಮ ಬಾಹಿರ ಮನೆ ನಿರ್ಮಾಣ
ಮನೆ ನಿರ್ಮಾಣಕ್ಕಾಗಿ ಸ್ಥಳೀಯಾಡಳಿತ ಕಾಯ್ದಿರಿಸಿದ ಸ್ಥಳಗಳೇ ಬಹುತೇಕ ಸುರಕ್ಷತೆಯಿಲ್ಲ. ಈ ನಡುವೆ ಖಾಸಗಿ ಸ್ಥಳಗಳಲ್ಲಿ ಕೆಲವೆಡೆ ಮನೆಗಳು ನಿಯಮ ಬಾಹಿರವಾಗಿ ನಿರ್ಮಿಸಿರುವುದು ಇದಕ್ಕೆ ಕಾರಣವಾಗಿದೆ. ಮನೆ ಪಕ್ಕ 90 ಡಿಗ್ರಿ ಲಂಭವಾಗಿ ಗುಡ್ಡವನ್ನು ಕಡಿದು ಸಮೀಪವೇ ಮನೆ ನಿರ್ಮಿಸಿದ ಅನೇಕ ಮನೆಗಳಿವೆ. ಸೆಟ್‌ ಬ್ಯಾಕ್‌ ಬಿಡುವ ಉದ್ದೇಶ ಬಹುತೇಕ ನಿಯಮ ಗಾಳಿಗೆ ತೂರಲಾಗಿದೆ. ಇವೆಲ್ಲ ಈ ವರ್ಷದ ವರ್ಷಧಾರೆಗೆ ಕುಸಿತ ಉಂಟಾಗಿದೆ.

248 ಮನೆ ಹಾನಿ 45 ಲಕ್ಷ ರೂ. ಪರಿಹಾರ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 15 ಮನೆ ಸಂಪೂರ್ಣ ಹಾನಿಗೀಡಾಗಿದ್ದು ತಲಾ 1.25 ಲಕ್ಷ ರೂ.ನಂತೆ 18,75,000 ಲಕ್ಷ ರೂ.ನೆರವು, 223 ಭಾಗಶಃ ಮನೆ ಹಾನಿಗಳ ಪೈಕಿ 191 ಮನೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ. ಜಾನುವಾರು ಸೇರಿ ಒಟ್ಟು 45,98,500 ಲಕ್ಷ ರೂ. ನೆರವನ್ನು ಜಿಲ್ಲಾಡಳಿತದ ಮೇರೆಗೆ ತಾಲೂಕು ಆಡಳಿತದಿಂದ ನೀಡಲಾಗಿದೆ.

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.