ಕುಗ್ಗಿದ ತಾಪಂ; ಹಿಗ್ಗಿದ ಜಿಪಂ!
ಜಿಲ್ಲೆಯಲ್ಲಿನ್ನು 40 ಜಿಪಂ ಕ್ಷೇತ್ರಗಳು! ತಾಪಂ ಕ್ಷೇತ್ರಗಳ ಸಂಖ್ಯೆ ಗಣನೀಯ ಇಳಿಕೆ
Team Udayavani, Feb 14, 2021, 3:41 PM IST
ಬಾಗಲಕೋಟೆ: ಬಸವನಾಡು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ವಿಸ್ತಾರವಾಗಿದೆ. ಆದರೆ, ತಾಪಂ ಕ್ಷೇತ್ರಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ.
ಹೌದು, 2016ರ ಜಿಪಂ ಚುನಾವಣೆ ವೇಳೆ ಒಟ್ಟು 36 ಕ್ಷೇತ್ರಗಳಿದ್ದವು. ಅದಕ್ಕೂ ಮುಂಚೆ 2011ರಲ್ಲಿ 32 ಕ್ಷೇತ್ರಗಳನ್ನು ಬಾಗಲಕೋಟೆ ಜಿಪಂ ಹೊಂದಿತ್ತು. ಇದೀಗ 2021ರಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ 4 ಹೆಚ್ಚಳವಾಗಿದ್ದು, ಬರೋಬ್ಬರಿ 40 ಸದಸ್ಯರು ಜಿಪಂಗೆ ಆಯ್ಕೆಯಾಗಲಿದ್ದಾರೆ.
ಕುಗ್ಗಿದ ತಾಪಂ ಕ್ಷೇತ್ರಗಳು: 2016ಕ್ಕೂ ಮುಂಚೆ ಜಿಲ್ಲೆಯಲ್ಲಿ ಆರು ತಾಲೂಕುಗಳಿದ್ದವು. ಆಗ ತಾಪಂ ಕ್ಷೇತ್ರಗಳು 130 ಇದ್ದವು. ಇದೀಗ ಅವುಗಳನ್ನು 110ಕ್ಕೆ ಕಡಿತ ಮಾಡಲಾಗಿದೆ. ಜಿಪಂ ಕ್ಷೇತ್ರಗಳನ್ನು ಹೆಚ್ಚಿಸಿ, ತಾಪಂ ಕ್ಷೇತ್ರಗಳನ್ನು 110ಕ್ಕೆ ಇಳಿಸಿ, ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವುದೇ ಜಿಲ್ಲೆಯ ಅಧಿಕಾರಿಗಳಿಗೆ ಸವಾಲಾಗಿದೆ ಎನ್ನಲಾಗಿದೆ.
ಗಲಕೋಟೆ ತಾಲೂಕಿನಲ್ಲಿ ಈ ಮೊದಲು 18 ತಾಪಂ ಕ್ಷೇತ್ರಗಳಿದ್ದವು. ಈಗ ಅವು 13ಕ್ಕೆ ಇಳಿದಿವೆ. ಇನ್ನು ಹುನಗುಂದ ಮತ್ತು ಇಳಕಲ್ಲ ಸೇರಿ ಒಟ್ಟು 21 ಕ್ಷೇತ್ರಗಳಿರುವುದನ್ನು ಪ್ರತ್ಯೇಕ ತಾಲೂಕು ಆದ ಬಳಿಕ ಹುನಗುಂದಕ್ಕೆ 9 ಮತ್ತು ಇಳಕಲ್ಲಗೆ 9 ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದೆ.
ಬಾದಾಮಿ (ಗುಳೇದಗುಡ್ಡ ಸೇರಿ) ಈ ಮೊದಲು ಒಟ್ಟು 25 ತಾ.ಪಂ. ಕ್ಷೇತ್ರಗಳಿದ್ದವು. ಅದರಲ್ಲಿ ಬಾದಾಮಿಗೆ ಈ ಬಾರಿ 16 ಕ್ಷೇತ್ರ ಹಂಚಿಕೆಯಾಗಿದ್ದರೆ, ಗುಳೇದಗುಡ್ಡಕ್ಕೆ 11 ಕ್ಷೇತ್ರ ವಿಂಗಡಿಸಲು ಚುನಾವಣೆ ಆಯೋಗ ನಿರ್ದೇಶನ ನೀಡಿದೆ. ಜಮಖಂಡಿ (ರಬಕವಿ-ಬನಹಟ್ಟಿ ಸೇರಿ) ತಾಲೂಕಿನಲ್ಲಿ ಮೊದಲು
29 ತಾಪಂ ಕ್ಷೇತ್ರಗಳಿದ್ದವು. ಅದರಲ್ಲಿ ಈ ಬಾರಿ ಜಮಖಂಡಿಗೆ 16, ರಬಕವಿ-ಬನಹಟ್ಟಿ ತಾಪಂ 11 ಕ್ಷೇತ್ರ ಹೊಂದಲಿದೆ. ಇನ್ನು ಮುಧೋಳ ತಾಲೂಕಿನಲ್ಲಿ ಮೊದಲು 22 ತಾಪಂ ಕ್ಷೇತ್ರಗಳಿದ್ದವು. ಮಹಾಲಿಂಗಪುರ ಭಾಗ ರಬಕವಿ-ಬನಹಟ್ಟಿ ತಾಲೂಕಿಗೆ ಸೇರಿದ್ದರಿಂದ ಇಲ್ಲಿಯೂ ಕ್ಷೇತ್ರಗಳ ಕಡಿತವಾಗಿವೆ. ಮುಧೋಳ ತಾಲೂಕಿನಲ್ಲಿ ಈ ಬಾರಿ 13 ತಾಪಂ ಕ್ಷೇತ್ರ ರಚನೆ ಮಾಡಬೇಕಿದೆ. ಬೀಳಗಿ ತಾಪಂನಲ್ಲಿ ಮೊದಲು 15 ಕ್ಷೇತ್ರಗಳಿರುವುದನ್ನು ಈ ಬಾರಿ 13ಕ್ಕೆ ಇಳಿಸಲಾಗಿದೆ.
ಹಿಗ್ಗಿದ ಜಿಪಂ ಕ್ಷೇತ್ರಗಳು: ಜಿಪಂ, ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಚುನಾವಣೆ ಆಯೋಗ ಸ್ಪಷ್ಟ ನಿರ್ದೇಶನ ನೀಡಿದ್ದು, ಆಯಾ ಜಿಪಂ ಕ್ಷೇತ್ರವಿಂಗಡಿಸುವಾಗ, ಗ್ರಾಪಂ ಪೂರ್ಣ ಕ್ಷೇತ್ರವನ್ನು ಒಳಗೊಂಡಿರಬೇಕು. ಅಲ್ಲದೇ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ವಿಂಗಡಿಸಲು ಸೂಚಿಸಿದ್ದು, ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರಗಳು ಹೆಚ್ಚಾಗಿವೆ. 36 ಕ್ಷೇತ್ರಗಳು 40ಕ್ಕೆ ಏರಿಕೆಯಾಗಿದ್ದು, ಬಾಗಲಕೋಟೆ-5, ಹುಗನುಂದ-3, ಬಾದಾಮಿ-6, ಗುಳೇದಗುಡ್ಡ-2, ಇಳಕಲ್ಲ-4, ಜಮಖಂಡಿ-6, ಮುಧೋಳ-5, ಬೀಳಗಿ-5, ರಬಕವಿ-ಬನಹಟ್ಟಿ-4 ಸೇರಿ ಒಟ್ಟು 40 ಜಿಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬೇಕಿದೆ.
ಇದನ್ನೂ ಓದಿ :ಸಿಎಂ ಗಾದಿಗೆ ಕಾಂಗ್ರೆಸ್‌ನಲ್ಲಿ ಮ್ಯೂಸಿಕಲ್ ಚೇರ್ ಆಟ
ತೇರದಾಳಕ್ಕೆ ಸಿಗದ ಮಾನ್ಯತೆ: ಜಿಲ್ಲೆಯಲ್ಲಿ ಈ ಮೊದಲು ಇದ್ದ 6 ತಾಲೂಕುಗಳು, ಈಗ 9ಕ್ಕೇರಿವೆ. ತೇರದಾಳ ಹೊಸ ತಾಲೂಕು ಘೋಷಣೆಯಾದರೂ, ಅದಕ್ಕೆ ಭೌಗೋಳಿಕ ಕ್ಷೇತ್ರದ ಗಡಿ ನಿಶ್ಚಿಯಿ ಅಂತಿಮಗೊಳಿಸುವ ಕಾರ್ಯ ಮಾಡುವಲ್ಲಿ ಸರ್ಕಾರ ನಿರಾಸಕ್ತಿ ವಹಿಸುತ್ತಿದೆ ಎಂಬ ಅಸಮಾಧಾನ ತೇರದಾಳ ತಾಲೂಕು ಹೋರಾಟ ಸಮಿತಿ ವ್ಯಕ್ತಪಡಿಸಿದೆ. ಚುನಾವಣೆ ಆಯೋಗ ನೀಡಿದ ನಿರ್ದೇಶನದಲ್ಲಿ ತೇರದಾಳ ತಾಲೂಕಿಗೆ ಮಾನ್ಯತೆ ಸಿಕ್ಕಿಲ್ಲ. ಆಯೋಗ ಉಲ್ಲೇಖೀಸಿದ ತಾಲೂಕುಗಳಲ್ಲಿ 9 ಮಾತ್ರ ನೀಡಿದ್ದು, ತೇರದಾಳ ಅನ್ನು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಬಾರಿ ಬಾದಾಮಿಯಿಂದ ಬೇರ್ಪಟ್ಟ ಗುಳೇದಗುಡ್ಡ, ಹುನಗುಂದದಿಂದ ಬೇರ್ಪಟ್ಟ ಇಳಕಲ್ಲ ಹಾಗೂ ಜಮಖಂಡಿಯಿಂದ ಬೇರ್ಪಟ್ಟ ರಬಕವಿ-ಬನಹಟ್ಟಿ ತಾಲೂಕಿನಲ್ಲಿ (ಈಗಾಗಲೇ ತಾಪಂ ಕಚೇರಿ ಆರಂಭಗೊಂಡಿದ್ದು, ಅಧ್ಯಕ್ಷ-ಉಪಾಧ್ಯಕ್ಷರೂ ಆಯ್ಕೆಯಾಗಿದ್ದಾರೆ) ಹೊಸ ಕ್ಷೇತ್ರಗಳ ಪುನರ್ ವಿಂಗಡಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.