ಸ್ಮಾಲ್‌ಸ್ಕ್ರೀನ್ ಗುಬ್ಬಿಗೆ ಬಿಗ್ ಫ್ಯಾನ್ಸ್
ಸುಪ್ರೀತಾ ಸತ್ಯನಾರಾಯಣ್
Team Udayavani, Jun 23, 2019, 5:00 AM IST
ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳು, ಧಾರಾವಾಹಿಗಳು ಸಾಕಷ್ಟು ಹೊಸ ಹೊಸ ಪ್ರತಿಭೆಗಳನ್ನು ದೊಡ್ಡ ಸಂಖ್ಯೆಯಲ್ಲಿ ಪರಿಚಯಿಸುತ್ತಿವೆ. ಕಿರುತೆರೆಯಲ್ಲಿ ಕಲಾವಿದರಾಗಿ ಪರಿಚಯವಾದ ಪ್ರತಿಭೆಗಳು ಬಳಿಕ ನಿಧಾನವಾಗಿ ಹಿರಿತೆರೆಯತ್ತ ಮುಖ ಮಾಡಿ ಅಲ್ಲೂ ಕಮಾಲ್ ಮಾಡಲು ಯಶಸ್ವಿಯಾಗು ತ್ತಿದ್ದಾರೆ. ಅದರಲ್ಲೂ ಕಿರುತೆರೆಯ ಮಹಿಳಾ ಪ್ರಧಾನ ಧಾರಾವಾಹಿಗಳು ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಪ್ರೇಕ್ಷಕರನ್ನು ಸೆಳೆಯುತ್ತಿರುವುದರಿಂದ, ಹಲವು ಪ್ರತಿಭಾನ್ವಿತ ನಟಿಯರು ಕಲಾರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಇತ್ತೀಚೆಗೆ ಕಿರುತೆರೆಯಲ್ಲಿ ಹಾಗೆ, ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿರುವ ನಟಿ ಸುಪ್ರೀತಾ ಸತ್ಯನಾರಾಯಣ್. ಬಹುತೇಕರಿಗೆ ಸುಪ್ರೀತಾ ಸತ್ಯನಾರಾಯಣ್ ಅಂದ್ರೆ ಯಾರು ಅಂಥ ತಕ್ಷಣಕ್ಕೆ ಗೊತ್ತಾಗುವುದು ಕಷ್ಟ. ಯಾಕೆಂದರೆ, ಸುಪ್ರೀತಾ ತನ್ನ ಹೆಸರಿಗಿಂತ ಹೆಚ್ಚಾಗಿ ಗುರುತಿಸಿ ಕೊಂಡಿದ್ದು ತನ್ನ ಗುಬ್ಬಿ ಪಾತ್ರದ ಮೂಲಕ. ಹಾಗಾಗಿ, ಸೀತಾ ವಲ್ಲಭ ಧಾರಾವಾಹಿಯ ಗುಬ್ಬಿ ಉರುಫ್ ಮೈಥಿಲಿ ಅಂದ್ರೆ ಬಹುತೇಕರಿಗೆ ತಕ್ಷಣ ಅರ್ಥವಾಗಿ ಬಿಡುತ್ತದೆ.
ಹೌದು, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸೀತಾ ವಲ್ಲಭ ನೋಡಿದವರಿಗೆ ಈ ಗುಬ್ಬಿ ಅಂದ್ರೆ ಯಾರು ಅಂಥ ಗೊತ್ತಿರುತ್ತದೆ. ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಈ ಗುಬ್ಬಿ ಅಲಿಯಾಸ್ ಮೈಥಿಲಿ ಪಾತ್ರಧಾರಿಯ ಹೆಸರೇ ಸುಪ್ರೀತಾ ಸತ್ಯನಾರಾಯಣ್.
ಮೂಲತಃ ಮೈಸೂರಿನವರಾದ ಸುಪ್ರೀತಾ, ಬಾಲ್ಯದಿಂದಲೇ ಕಲೆ-ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ಹುಡುಗಿ. ತನ್ನ ಶಿಕ್ಷಣದ ಬಳಿಕ ಬೆಂಗಳೂರಿನಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಪ್ರೀತಾ ಬಳಿಕ ಸೀತಾ ವಲ್ಲಭ ಧಾರಾವಾಹಿಗೆ ನಾಯಕಿಯಾಗುವ ಮೂಲಕ ಕಿರುತೆರೆಯತ್ತ ಮುಖ ಮಾಡಿದರು.
ಸದ್ಯ ಕಿರುತೆರೆಯಲ್ಲೇ ಸೀತಾವಲ್ಲಭ ಧಾರಾವಾಹಿಯ ಕ್ಯೂಟ್ ಲವ್‌ಸ್ಟೋರಿಯಿಂದ, ಗುಬ್ಬಿ (ಮೈಥಲಿ) ಪಾತ್ರದ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗಳಿಸಿರುವ ಸುಪ್ರೀತಾಗೆ ಮೊದಲ ಧಾರಾವಾಹಿಯೇ ಸಾಕಷ್ಟು ಹೆಸರು, ಜನಪ್ರಿಯತೆಯನ್ನು ತಂದು ಕೊಟ್ಟಿದೆ. ತನ್ನ ಸೌಂದರ್ಯ ಮತ್ತು ಅಭಿನಯದ ಅಭಿಮಾನಿಗಳನ್ನು ಸಂಪಾದಿಸಿರುವ ಸುಪ್ರೀತಾ, ತಮ್ಮ ಬಿಡುವಿನ ವೇಳೆಯಲ್ಲಿ ಡ್ಯಾನ್ಸ್, ಪೇಂಟಿಂಗ್ ಮಾಡುತ್ತಾರೆ. ಜೊತೆಗೆ ಸ್ಕ್ರಿಪ್ಟ್ಗಳನ್ನು ಕೂಡ ಬರೆಯುತ್ತಾರಂತೆ. ಇನ್ನು ಸುಪ್ರೀತಾಗೆ ಡಯಟ್ ಅಂದ್ರೆ ಬಲುದೂರ. ಹಾಗಂತ ಜಂಕ್‌ಫುಡ್‌ಗಳನ್ನ ಹೆಚ್ಚಾಗಿ ತಿನ್ನೋದಿಲ್ಲ. ಹಣ್ಣು, ತರಕಾರಿಗಳು ಅಂದ್ರೆ ಇಷ್ಟಪಟ್ಟು ತಿನ್ನುತ್ತಾರಂತೆ. ಸದ್ಯ ಕಿರುತೆರೆಯ ಜರ್ನಿಯಲ್ಲಿ ಯಶಸ್ವಿಯಗಿರುವ ಸುಪ್ರೀತಾಗೆ ಚಾಲೆಂಜಿಂಗ್ ರೋಲ್ ಮಾಡೋದು ಅಂದ್ರೆ ಇಷ್ಟವಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.