ಹಕ್ಕಿ ಕ್ಲಿಕ್ಕಿ
ಹಕ್ಕಿಯ-ಚಿತ್ರಕೆ-ತಲೆದೂಗುವ
Team Udayavani, Mar 27, 2019, 6:00 AM IST
ಹುಡುಗಿಯರಿಗೆ ಫೋಟೊ ಹುಚ್ಚು ಜಾಸ್ತಿ ಅಂತಾರೆ. ಸ್ವಾತಿ ಕೂಡಾ ಅದಕ್ಕೆ ಹೊರತಾಗಿಲ್ಲ. ಹಾಗಂತ ಇವರನ್ನು ಸೆಲ್ಫಿಗೆ ಪೋಸ್ ಕೊಡೋ ಹುಡುಗಿ ಅಂದ್ಕೊಬೇಡಿ. ಇವರು ಫೋಟೊಗ್ರಾಫರ್. ಅಂತಿಂಥ ಫೋಟೊಗ್ರಾಫರ್ ಅಲ್ಲ. ಹಕ್ಕಿಗಳ ಜಾಡು ಹಿಡಿದ ಫೋಟೊಗ್ರಾಫರ್. ಇವರ ಹಕ್ಕಿ ಫೋಟೊಗಳು ಮಾತಾಡುತೆ…
ಹಿತ್ತಲಿನ ಗಿಡದಲ್ಲಿ ಪಾರಿವಾಳ ಗೂಡು ಕಟ್ಟಿದೆ ಅಂದ್ಕೊಳ್ಳಿ. ಅದು ಎಷ್ಟೊತ್ತಿಗೆ ಗೂಡಿಗೆ ಬರುತ್ತೆ, ಯಾವಾಗ ಹಾರಿ ಹೋಗುತ್ತೆ, ಅದರ ಜೀವನಕ್ರಮ ಹೇಗೆ ಅಂತ ತಿಳಿದುಕೊಂಡಿದ್ದೀರ. ಅದು ಸ್ವಲ್ಪ ಕಷ್ಟವೇ. ಯಾಕಂದ್ರೆ, ಹಕ್ಕಿಗಳ ಜಾಡು ಕಂಡು ಹಿಡಿಯೋದು ಅಷ್ಟು ಸುಲಭವಲ್ಲ. ಆದರೆ, ಸ್ವಾತಿಗೆ ಆ ವಿಷಯದಲ್ಲಿ ಕುತೂಹಲ, ತಾಳ್ಮೆ ಜಾಸ್ತಿ. ಮನುಷ್ಯರ ವಾಸನೆಗೇ ಹೆದರಿ ಮರೆಯಾಗುವ ಅವೆಷ್ಟೋ ಹಕ್ಕಿಗಳ ಬದುಕು ಇವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ.
ಛಾಯಾಚಿತ್ರ- ಚಿತ್ರ
ಸ್ವಾತಿ ಆರ್. ಮೂಲತಃ ದಾವಣಗೆರೆಯವರು. ಈಕೆ ಛಾಯಾಗ್ರಾಹಕಿಯಷ್ಟೇ ಅಲ್ಲ, ಚಿತ್ರಕಲಾವಿದೆಯೂ ಹೌದು. ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಪದವಿ ಪಡೆದಿರುವ ಸ್ವಾತಿಗೆ, ಫೋಟೊಗ್ರಫಿ ಅಚ್ಚುಮೆಚ್ಚಿನ ಹವ್ಯಾಸ. ಬಿಡುವಿನ ಸಮಯದಲ್ಲಿ ಹೆಗಲಿಗೆ ಕ್ಯಾಮೆರಾ ಏರಿಸಿ ಹೊರಟರೆ ಸಾಕು; ವಿಭಿನ್ನ, ವಿಶಿಷ್ಟ ವಿಷಯಗಳು ಲೆನ್ಸ್‌ನಲ್ಲಿ ಸೆರೆಯಾಗುತ್ತವೆ.
ತಾಳ್ಮೆಯೇ ಶಕ್ತಿ
ಬರ್ಡ್ ಫೋಟೊಗ್ರಫಿಗೆ ಬೇಕಾದ ಮೊದಲ ಅರ್ಹತೆಯೇ ತಾಳ್ಮೆ. ಪಕ್ಷಿಗಳಿಗಾಗಿ ಕಾದು ಕುಳಿತು, ಒಂಚೂರೂ ಸದ್ದಾಗದಂತೆ, ಪಕ್ಷಿಗಳ ಏಕಾಂತಕ್ಕೆ ಭಂಗವಾಗದಂತೆ ಫೋಟೊ ಕ್ಲಿಕ್ಕಿಸುವುದು ಸುಲಭದ ಮಾತಲ್ಲ. ವಾರಗಟ್ಟಲೆ ಕಾದರೂ ಒಂದು ಫೋಟೊ ತೆಗೆಯಲು ಸಾಧ್ಯವಾಗದಿರಬಹುದು. ಆಹಾರ, ಆಶ್ರಯಕ್ಕಾಗಿ ಖಂಡಾಂತರದಿಂದ ವಲಸೆ ಬರುವ ಹಕ್ಕಿಗಳ ಫೋಟೊ ಕ್ಲಿಕ್ಕಿಸಲು ತಿಂಗಳಾನುಗಟ್ಟಲೆ ಕಾಯಬೇಕು. ಆ ತಾಳ್ಮೆ ಸ್ವಾತಿಗೆ ಎಷ್ಟು ಸಿದ್ಧಿಸಿದೆ ಎಂಬುದನ್ನು ಅವರು ತೆಗೆದಿರುವ ಫೋಟೊಗಳೇ ಹೇಳುತ್ತವೆ.
ಸಾವಿರಕ್ಕೂ ಹೆಚ್ಚು ಪ್ರಭೇದಗಳು
ಬಾಲ್ಯದಿಂದಲೇ ಫೋಟೋಗ್ರಫಿಯ ಸೆಳೆತಕ್ಕೆ ಒಳಗಾದ ಸ್ವಾತಿ, ಮುಂದೆ ಸ್ವಂತ ಕ್ಯಾಮೆರಾ ಖರೀದಿಸಿ ಪಕ್ಷಿ ಛಾಯಾಗ್ರಹಣದಲ್ಲಿ ತೊಡಗಿದರು. ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು, ಸಾವಿರಕ್ಕಿಂತಲೂ ಹೆಚ್ಚು ಪಕ್ಷಿ ಪ್ರಭೇದಗಳ ಫೋಟೊ ತೆಗೆದಿದ್ದಾರೆ. ಬನ್ನೇರುಘಟ್ಟ, ಮಂಡಗದ್ದೆ, ರಂಗನತಿಟ್ಟು ಪಕ್ಷಿಧಾಮಗಳಿಗೆ ಹೋಗಿ, ನೈಟ್ ಹೆರಾನ್, ಲಿಟಲ್ ಅಗ್ರೀಟ್, ಡಾರ್ಟನ್, ರಿವರ್ಜೀನ್‌ನಂಥ ಪಕ್ಷಿಗಳ ಲೋಕದಲ್ಲಿ ಸಂಚರಿಸಿದ್ದಾರೆ. ಇವರನ್ನು ಅಭಿನಂದಿಸಲು 8861141800 ಸಂಪರ್ಕಿಸಿ.
ಬಳಕೂರು ವಿ.ಎಸ್. ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.