ಬುಗಾಟ್ಟಿ ಚೇರಾನ್ ಪ್ರೊಫಿಲೀ ಕಾರು ಬರೋಬ್ಬರಿ 88.23 ಕೋಟಿ ರೂಪಾಯಿಗಳಿಗೆ ಹರಾಜು
ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿ ವಿಶ್ವದಾಖಲೆ ಬರೆದ ಬುಗಾಟ್ಟಿ ಚೇರಾನ್ ಪ್ರೊಫಿಲೀ W-16 ಆವೃತ್ತಿಯ ಕೊನೆಯ ಕಾರು
Team Udayavani, Feb 6, 2023, 6:17 PM IST
ಫ್ರಾನ್ಸ್: W-16 ಸಿಲಿಂಡರ್ ಒಳಗೊಂಡ ಬುಗಾಟ್ಟಿ ಚೇರಾನ್ ಪ್ರೊಫಿಲೀ ಆವೃತ್ತಿಯ ಕೊನೆಯ ಸೂಪರ್‌ಕಾರು ಬರೋಬ್ಬರಿ 88.23 ಕೋಟಿ ರೂಪಾಯಿಗಳಿಗೆ (10.7 ಮಿಲಿಯನ್ ಡಾಲರ್) ಮಾರಾಟವಾಗುವ ಮೂಲಕ ಜಗತ್ತಿನಲ್ಲೇ ಅತ್ಯಂತ ದುಬಾರಿ ಬೆಲೆಗೆ ಹರಾಜಾದ ಕಾರು ಎಂಬ ವಿಶ್ವದಾಖಲೆಗೆ ಪಾತ್ರವಾಗಿದೆ. .
ಫೆ.1ರಂದು ಫ್ರಾನ್ಸ್‌ನ ಆಟೆಲಿಯರ್ ಎಂಬಲ್ಲಿ ಆರ್.ಎಂ.ಸೋಥೆಬೈಸ್ ಎಂಬ ಕಂಪನಿ ನಡೆಸಿದ ಹರಾಜಿನಲ್ಲಿ ಭಾರೀ ಪೈಪೋಟಿಯ ಮಧ್ಯೆ ಈ ದುಬಾರಿ ಬೆಲೆಗೆ ಮಾರಾಟವಾಗಿದೆ.ಕೇವಲ 2.3 ಸೆಕೆಂಡುಗಳಲ್ಲೇ 100k\h ತಲುಪುವ ಸಾಮರ್ಥ್ಯವಿರುವ ಈ ಸೂಪರ್ ಕಾರು 8 ಲೀಟರ್‌ನ ಕ್ವಾಡ್ ಟರ್ಬೋ W-16 ಎಂಜಿನ್ ಹೊಂದಿದೆ. 7,993 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಈ ಕಾರು 6,700 rpm ಕೂಡಾ ಹೊಂದಿದೆ.2017 ರಲ್ಲಿ ವಿಶ್ವದಾಖಲೆಯ ಉದ್ದೇಶದಿಂದ ನಡೆಸಿದ ಪರೀಕ್ಷೆಯಲ್ಲಿ 400k\h ವೇಗ ತಲುಪಲು ಈ ಕಾರು ಕೇವಲ 32.6 ಸೆಕೆಂಡುಗಳನ್ನು ತೆಗೆದುಕೊಂಡಿತ್ತು. ಈ ಕಾರು 100 ಕಿ.ಮೀ ದೂರ ಸಾಗಲು 22.5 ಲೀಟರ್ ತೈಲ ಉಪಯೋಗಿಸಿಕೊಳ್ಳುತ್ತದೆ ಎಂದು ಬುಗಾಟ್ಟಿ ಕಂಪನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.