Pneumonia: ಕೋವಿಡ್ 19 ಆಯ್ತು…ಈಗ ನಿಗೂಢ ನ್ಯೂಮೋನಿಯಾ ಸೋಂಕಿನಿಂದ ಚೀನಾ ತತ್ತರ
ಪರಿಸ್ಥಿತಿ ತೀವ್ರವಾದ ಪರಿಣಾಮ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
Team Udayavani, Nov 23, 2023, 12:50 PM IST
ಬೀಜಿಂಗ್: ಕೋವಿಡ್ 19 ಸೋಂಕಿನಿಂದ ದಿಗಿಲು ಹುಟ್ಟಿಸಿದ್ದ ಚೀನಾದಲ್ಲಿ ಈಗ ನಿಗೂಢ ನ್ಯೂಮೋನಿಯಾ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಚೀನಾದ ಆಸ್ಪತ್ರೆಗಳು ಸಾವಿರಾರು ಮಕ್ಕಳು ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Shocking: 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಸರಕಾರಿ ಶಾಲೆಯ ಪ್ರಾಂಶುಪಾಲ ಅರೆಸ್ಟ್
ಚೀನಾದ ಆಸ್ಪತ್ರೆಗಳು ಸೋಂಕು ಪೀಡಿತ ಮಕ್ಕಳಿಂದ ತುಂಬಿ ಹೋಗಿರುವುದು ಕಳವಳಕಾರಿಯಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಬೀಜಿಂಗ್ ಮತ್ತು ಲಿಯೋನಿಂಗ್ ಪ್ರಾಂತ್ಯದಲ್ಲಿ ಈ ನಿಗೂಢ ನ್ಯೂಮೋನಿಯಾ ಸೋಂಕು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದು, ಮಕ್ಕಳ ಆಸ್ಪತ್ರೆಗಳು ಅನಾರೋಗ್ಯ ಪೀಡಿತ ಮಕ್ಕಳಿಂದ ತುಂಬಿ ಹೋಗಿರುವುದಾಗಿ ವರದಿ ವಿವರಿಸಿದೆ.
ಪರಿಸ್ಥಿತಿ ತೀವ್ರವಾದ ಪರಿಣಾಮ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡಾ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಸದ್ಯದ ಸ್ಥಿತಿ ಕೋವಿಡ್ 19 ಕಾಲಘಟ್ಟವನ್ನು ನೆನಪಿಸುವಂತಿದೆ ಎಂದು ವರದಿ ತಿಳಿಸಿದೆ.
ನಿಗೂಢ ನ್ಯೂಮೋನಿಯಾ ಪೀಡಿತ ಮಕ್ಕಳಲ್ಲಿ ವಿಪರೀತ ಜ್ವರ ಹಾಗೂ ಶ್ವಾಸಕೋಶದ ತೊಂದರೆ ಪತ್ತೆಯಾಗಿದೆ. ಆದರೆ ಯಾವುದೇ ಶೀತ, ಕೆಮ್ಮದ ಲಕ್ಷಣಗಳಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಾವಿರಾರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳಿಗೆ ಯಾವುದೇ ಶೀತ ಅಥವಾ ಇತರ ಯಾವ ಲಕ್ಷಣಗಳು ಕಂಡು ಬಂದಿಲ್ಲ. ವಿಪರೀತ ಜ್ವರ ಕಂಡು ಬಂದಿರುವುದಾಗಿ ಬೀಜಿಂಗ್ ನಿವಾಸಿಗಳು ತೈವಾನ್ ನ್ಯೂಸ್ ವೆಬ್ ಸೈಟ್ ಎಫ್ ಟಿವಿ ನ್ಯೂಸ್ ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.