ಕಂಟೈನ್ ಮೆಂಟ್ ವಲಯ ರಚಿಸಿ : ಡೆಲ್ಟಾ + ಹಿನ್ನೆಲೆಯಲ್ಲಿ ಕೇಂದ್ರದಿಂದ ಪತ್ರ
Team Udayavani, Jun 27, 2021, 7:15 AM IST
ಬೆಂಗಳೂರು: ರಾಜ್ಯದಲ್ಲಿ ಡೆಲ್ಟಾ + ಸೋಂಕು ಕಂಡುಬಂದಿರುವಲ್ಲಿ ಕಂಟೈನ್‌ಮೆಂಟ್ ವಲಯ ರಚಿಸುವಂತೆ ಕೇಂದ್ರವು ಸೂಚನೆ ನೀಡಿದೆ.
ಈ ಕುರಿತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ಗೆ ಪತ್ರ ಬರೆದಿದ್ದಾರೆ. ಜನರು ಗುಂಪು ಸೇರುವುದನ್ನು ತಡೆಯಬೇಕು, ಪರೀಕ್ಷೆ ಹೆಚ್ಚಿಸಬೇಕು, ಲಸಿಕೆ ಹೆಚ್ಚಿಸಲು ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.
ಗಂಭೀರ: ಪುರಾವೆಗಳಿಲ್ಲ
ಡೆಲ್ಟಾ + ಸೋಂಕು ಗಂಭೀರ ಪರಿಣಾಮ ಬೀರಲಿದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಖ್ಯಾತ ವೈರಾಲಜಿಸ್ಟ್ ಶಹೀದ್ ಜಮಾಲ್ ಹೇಳಿದ್ದಾರೆ. ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ವಂಶವಾಹಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 49 ಡೆಲ್ಟಾ + ಪ್ರಕರಣ ಪತ್ತೆಯಾಗಿವೆ. ಒಬ್ಬರು ಮಾತ್ರ ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.