ಕೋವಿಡ್ ಎಫೆಕ್ಟ್ : ಡಬ್ಲ್ಯುಎಚ್‌ಒಗೆ ಅಮೆರಿಕ ವಿದಾಯ
ಕೋವಿಡ್ ತಡೆಗೆ ವಿಫಲ, ಚೀನ ಪರವಾಗಿ, ವರ್ತಿಸಿದ ಆರೋಪ
Team Udayavani, Jul 9, 2020, 11:13 AM IST
ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವನ್ನು ಹಿಂದೆಗೆದುಕೊಳ್ಳುವ ನಿರ್ಧಾರವನ್ನು ಟ್ರಂಪ್ ಆಡಳಿತವು ಔಪಚಾರಿಕವಾಗಿ ವಿಶ್ವಸಂಸ್ಥೆಗೆ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸಾಂಕ್ರಾಮಿಕದ ಮಧ್ಯೆಯೇ ಜಾಗತಿಕ ಆರೋಗ್ಯ ಸಂಸ್ಥೆಯೊಂದಿಗಿನ ಸಂಬಂಧವನ್ನು ಯುಎಸ್ ಮುರಿದುಕೊಂಡಿದೆ.
ಚೀನದ ವುಹಾನ್ ನಗರದಲ್ಲಿ ಜನ್ಮ ತಾಳಿ ಇಡೀ ವಿಶ್ವವನ್ನೇ ನಡುಗಿಸುತ್ತಿರುವ ವೈರಸ್‌ಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಚೀನದೊಂದಿಗೆ ಕೈಜೋಡಿಸಿದೆ ಎಂದು ಕಿಡಿಕಾರಿದ್ದ ಅಮೆರಿಕ, ಆರೋಗ್ಯ ಸಂಸ್ಥೆಯು ಜಗತ್ತಿನ ದಾರಿ ತಪ್ಪಿಸಿದೆ ಎಂದು ಆರೋಪಿಸಿತ್ತು.
ಜಾಗತಿಕವಾಗಿ ಅರ್ಧ ಮಿಲಿಯನ್ ಜನರು ಕೊರೊನಾಗೆ ಸಾವನ್ನಪ್ಪಿದ್ದಾರೆ. ಅದರಲ್ಲೂ ಅಮೆರಿಕಾದಲ್ಲೇ 1,30,000 ಜನರನ್ನು ಕೋವಿಡ್ ಬಲಿ ಪಡೆದುಕೊಂಡಿದೆ.ಏಪ್ರಿಲ್ನಲ್ಲಿ ಟ್ರಂಪ್ ಆಡಳಿತವು ಹಣ ನೀಡುವುದನ್ನು ನಿಲ್ಲಿಸಿತ್ತು. ಇದಾದ ಒಂದು ತಿಂಗಳ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಸಂಬಂಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದರು.
ವಿಶ್ವ ಆರೋಗ್ಯ ಸಂಸ್ಥೆಗೆ ಯುಎಸ್ ಅತಿದೊಡ್ಡ ದೇಣಿಗೆ ನೀಡುವ ರಾಷ್ಟ್ರ ಆಗಿದ್ದು, ವಾರ್ಷಿಕವಾಗಿ 450 ದಶಲಕ್ಷ ಡಾಲರ್‌ಗಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಆದರೆ ಆರೋಗ್ಯ ಸಂಸ್ಥೆಗೆ ಚೀನಾದ ಕೊಡುಗೆ ಯುಎಸ್‌ನ ಹತ್ತನೇ ಒಂದು ಭಾಗವಾಗಿದೆ.”ವಿಶ್ವ ಆರೋಗ್ಯ ಸಂಸ್ಥೆಯ 1946ರ ಸಂವಿಧಾನದ ಠೇವಣಿದಾರನಾಗಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವುದಾಗಿ ಅಮೆರಿಕ ಹೇಳಿದೆ. ಅಮೆರಿಕದ ಈ ಕೋರಿಕೆ ಜುಲೈ 6, 2021ರಿಂದ ಈ ನಿರ್ಧಾರ ಜಾರಿಗೆ ಬರುತ್ತದೆ ಎಂದು ವಿಶ್ವಸಂಸ್ಥೆ ಪ್ರಧಾನಿ ಕಾರ್ಯದರ್ಶಿಯವರ ವಕ್ತಾರ ಸ್ಟಿಫನ್ ಡುಜಾರಿಕ್ ಹೇಳಿದ್ದಾರೆ.
ಅಂತಹ ವಾಪಸಾತಿಗೆ ಎಲ್ಲ ಷರತ್ತುಗಳನ್ನು ಪೂರೈಸಲಾಗಿದೆಯೇ ಎಂಬುದನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ವಿಶ್ವಸಂಸ್ಥೆ ಜತೆಗೂಡಿ ಸಮಾಲೋಚನೆ ಮಾಡಿ ಕ್ರಮಕೈಗೊಳ್ಳುತ್ತಾರೆ ಎಂದು ಡುಜಾರಿಕ್ ಹೇಳಿದರು. ಜೂನ್ 21, 1948 ರಿಂದ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯ ಸಂವಿಧಾನದ ಭಾಗದ ತರಹ ಇತ್ತು. ಇದರ ಭಾಗವಹಿಸುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಅಸೆಂಬ್ಲಿಯೂ ಅಂಗೀಕರಿಸಿದ್ದು, ಈಗ ಅಮೆರಿಕಕ್ಕೆ ಕೆಲವು ಷರತ್ತುಗಳನ್ನು ನಿಗದಿಪಡಿಸಿದೆ.
ಈ ಷರತ್ತುಗಳಲ್ಲಿ ಒಂದು ವರ್ಷದ ನೋಟಿಸ್ ನೀಡುವುದು ಸೇರಿದೆ, ಅಂದರೆ ಮುಂದಿನ ವರ್ಷ ಜುಲೈ 6 ರವರೆಗೆ ಈ ವಾಪಸಾತಿ ಕ್ರಮ ಜಾರಿಗೆ ಬರುವುದಿಲ್ಲ. ಏಕೆಂದರೆ ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯ ಬಳಿಕ ಟ್ರಂಪ್ ಆಡಳಿತ ಕೊನೆಗೊಂಡರೆ, ಹೊಸ ಸರಕಾರ ಇದರಿಂದ ಹಿಂದೆ ಸರಿಯುಯವ ಸಾಧ್ಯತೆ ಇದೆ. ಹಾಗಾಗಿ ಸದ್ಯ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.