Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?
ಗಂಟಲು ಸೀಳಿದ ಸ್ಥಿತಿಯಲ್ಲಿ ಮಾಲಾ ಅವರ ಶವ ಪತ್ತೆ...
Team Udayavani, Oct 5, 2024, 3:37 PM IST
ಪುಣೆ: ಉತ್ತರ ಕನ್ನಡ ಮೂಲದ ಮಾಜಿ ಕ್ರಿಕೆಟ್ ಆಟಗಾರ ಸಲೀಲ್ ಅಂಕೋಲಾ ಅವರ ತಾಯಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪುಣೆಯ ಫ್ಲ್ಯಾಟ್ ನಲ್ಲಿ ಶುಕ್ರವಾರ (ಅ.04) ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲಾ ಅಶೋಕ್ ಅಂಕೋಲಾ (77ವರ್ಷ) ಅವರ ಶವ ಡೆಕ್ಕನ್ ಜಿಮ್ಕಾನಾ ಪ್ರದೇಶದ ಪ್ರಭಾತ್ ರಸ್ತೆಯಲ್ಲಿರುವ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದೆ. ಶುಕ್ರವಾರ ಮಧ್ಯಾಹ್ನ ಮನೆಕೆಲಸದಾಕೆ ಮನೆಗೆ ಬಂದು ಬಾಗಿಲಿನ ಬೆಲ್ ಮಾಡಿದರೂ ಯಾವ ಪ್ರತಿಕ್ರಿಯೆ ಬಾರದಿದ್ದಾಗ, ಸಂಬಂಧಿಕರಿಗೆ ವಿಷಯ ತಿಳಿಸಿದ್ದರು.
ಆ ಬಳಿಕ ಬಾಗಿಲು ತೆರೆದು ನೋಡಿದಾಗ ಗಂಟಲು ಸೀಳಿದ ಸ್ಥಿತಿಯಲ್ಲಿ ಮಾಲಾ ಅವರ ಶವ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಸ್ವಯಂ ಆಗಿ ಗಂಟಲು ಸೀಳಿಕೊಂಡಂತಿದೆ. ಆದರೆ ನಾವು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಮಾಲಾ ಅಂಕೋಲಾ ಅವರು ಕೆಲವು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಗಿಲ್ ಮಾಹಿತಿ ನೀಡಿದ್ದಾರೆ. ಸಲೀಲ್ ಅಂಕೋಲಾ ಅವರು 1989 ರಿಂದ 1997ರವರೆಗೆ ಒಂದು ಟೆಸ್ಟ್ ಹಾಗೂ 20 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಇವರು ಕೆಲವು ಸಿನಿಮಾ ಹಾಗೂ ಟಿವಿ ಸೀರಿಯಲ್ ಗಳಲ್ಲೂ ನಟಿಸಿದ್ದರು.
ಸಲೀಲ್ ಅಂಕೋಲಾ ಪ್ರಣೀತಾ ಬ್ಯಾನರ್ಜಿಯನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು. ವಿಪರೀತ ಕುಡಿತದ ಚಟದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಲೀಲ್ ಅವರನ್ನು ಪುಣೆಯ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇದರ ಪರಿಣಾಮ ದಂಪತಿ 2011ರಲ್ಲಿ ವಿಚ್ಛೇದನ ಪಡೆದಿದ್ದರು. 2013ರಲ್ಲಿ ಪುಣೆಯ ಗೀತಾ ಸೊಸೈಟಿ ನಿವಾಸದಲ್ಲಿ ಪ್ರಣೀತಾ ನೇಣಿಗೆ ಶರಣಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM: ಕಾಂಗ್ರೆಸ್ ಡ್ರಗ್ಸ್ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ
Threats: ವಡೋದರಾ, ರಾಜ್ಕೋಟ್ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ, ಹೈ ಅಲರ್ಟ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IFFI: ಗೋವಾದಲ್ಲಿ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನ.20ರಿಂದ ಆರಂಭ
PM: ಕಾಂಗ್ರೆಸ್ ಡ್ರಗ್ಸ್ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ
Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.