C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್.ಕೆ.ಪಾಟೀಲ್
Team Udayavani, Dec 22, 2024, 6:45 AM IST
ಪ್ರಧಾನ ವೇದಿಕೆ (ಮಂಡ್ಯ): ಇಂದಿನ ರಾಜಕೀಯ ವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಸಾರ್ವ ಜನಿಕ ಟೀಕೆಗಳು ವ್ಯಕ್ತವಾಗುತ್ತವೆ. ತಪ್ಪು ಗಳಾದಾಗ ಸಾಹಿತಿಗಳು ಅದನ್ನು ಖಂಡಿಸಿ ರಾಜಕಾರಣಿಗಳನ್ನು ಜಾಗೃತಗೊಳಿಸ ಬೇಕು. ಸಾಹಿತ್ಯ ಕ್ಷೇತ್ರ ರಾಜಕೀಯ ಮಾಡದೆ ರಾಜಕಾರಣಕ್ಕೆ ಸೂಕ್ತ ಮಾರ್ಗ ದರ್ಶನ ನೀಡಬೇಕು. ಸಾಹಿತ್ಯದ ಹಲವು ಕ್ಷೇತ್ರಗಳಿಗೆ ಪ್ರಶಸ್ತಿಗಳನ್ನು ನೀಡಲು ರಾಜಕೀಯ ವ್ಯವಸ್ಥೆಯೂ ಒಂದು ಭಾಗವಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಸಾಹಿತ್ಯದಲ್ಲಿ ರಾಜಕೀಯ
ರಾಜಕೀಯ ಸಾಹಿತ್ಯದಲ್ಲಿ’ ಕುರಿತ ಗೋಷ್ಠಿ ಯಲ್ಲಿ ತಮ್ಮ ಆಲೋಚನೆಯ ಹಲವು ವಿಷಯಗಳನ್ನು ರಾಜಕೀಯ ಮುಖಂಡರು ಮಂಡಿಸಿದರು. ಈ ವೇಳೆ ಮಾತನಾಡಿದ ಎಚ್.ಕೆ.ಪಾಟೀಲ್, ಉತ್ತಮ ಸಾಹಿತ್ಯ ರಾಜಕಾರಣಕ್ಕೆ ದಿಕ್ಸೂಚಿ ಇದ್ದಂತೆ. ರಾಜಕಾರಣ ಬಿಟ್ಟು ಸಾಹಿತ್ಯದ ರಚನೆ ಸಾಧ್ಯವಿಲ್ಲ. ವಿಧಾನಸಭೆ, ಪರಿಷತ್ತಿನಲ್ಲಿ ಉತ್ತಮವಾಗಿ ಮಾತನಾಡುವ ಭಾಷಣ ಗಳು ಸಾಹಿತ್ಯದ ಭಾಗ ಯಾಕಾಗಬಾರದು ಎಂದರು.
ರಾಜಕಾರಣದಲ್ಲಿರುವ ಬಹುತೇಕರು ಸಾಹಿತ್ಯದ ಒಲವು ಹೊಂದಿ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯದಲ್ಲಿ ರಾಜಕಾರಣ ವನ್ನು ಪ್ರತ್ಯೇಕಿಸಿ ಅಸ್ಪೃಶ್ಯತೆಯಂತೆ ನೋಡುವ ಮನಸ್ಥಿತಿ ಬದಲಿಸಬೇಕಿದೆ ಎಂದರು. ರಾಜಕಾರಣ ಹಾಗೂ ಸಾಹಿತ್ಯದ ಸಂಬಂಧ ಹಾಲು-ತುಪ್ಪದಂತೆ. 12ನೇ ಶತಮಾನದಲ್ಲಿ ಬಸವೇಶ್ವರರು, ರಾಜಕಾರಣಿಯಾಗಿ ಶ್ರೇಷ್ಠ ವಚನ ಸಾಹಿತ್ಯದ ಮೂಲಕ ಬೆಳಕು ಚೆಲ್ಲಿದ್ದಾರೆ. ರಕ್ತಪಾತ ರಹಿತ ರಾಜಕಾರಣ ಅಗತ್ಯವಿದೆ ಎಂದು ಹೇಳಿದರು.
ಸಿ.ಟಿ. ರವಿ ಗೈರು
ಗೋಷ್ಠಿಯಲ್ಲಿ ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವುಗಳು ಕುರಿತು ಸಿ.ಟಿ.ರವಿ ಮಾತನಾಡಬೇಕಿತ್ತು. ಆದರೆ, ಅವರು ಗೈರುಹಾಜರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.