Desi Swara: ದುಬೈ -ರಕ್ತದಾನ ಶಿಬಿರ: 500 ಮಂದಿ ನೋಂದಾವಣೆ
Team Udayavani, Aug 24, 2024, 3:38 PM IST
ದುಬೈ: ಭಾರತದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರತೀ ವರ್ಷ ದುಬೈಯಲ್ಲಿ ಆಯೋಜಿಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರ ಈ ಬಾರಿಯೂ ಸಹ ಕಾನ್ಸುಲೆಟ್ ಜೆನರಲ್ ಅಫ್ ಇಂಡಿಯಾ ಮತ್ತು ಎಫ್.ಒ.ಐ. ಈವೆಂಟ್ಸ್‌ನ ಸಂಯೋಗದಲ್ಲಿ ಆ.11ರಂದು ದುಬೈ ಹೆಲ್ತ್ ಅಥಾರಿಟಿ ಹೆಡ್ ಕ್ವಾಟ್ರಸ್ ಜಡಾಫ್ ದುಬೈ ರಕ್ತದಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಕಳೆದ ಹದಿನೆಂಟು ವರ್ಷಗಳಿಂದ ಹಲವು ಬಾರಿ ವಿವಿಧ ಸಂದರ್ಭಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಎಫ್.ಒ.ಐ. ಈವೆಂಟ್ಸ್‌ನ ಮುಖ್ಯಸ್ಥರಲ್ಲಿ ಓರ್ವರಾಗಿರುವ ಭಾಗ್ಯರಾಜ್ ರಾವ್ ಅವರ ಜತೆಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಸಮಾಜ ಸೇವಕರ ತಂಡ ಪೂರ್ವಭಾವಿ ತಯಾರಿಯೊಂದಿಗೆ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ದುಬೈ ಲತಿಫಾ ಹಾಸ್ಪಿಟಲ್ ಮತ್ತು ಹೆಲ್ತ್ ಅಥಾರಿಟಿ ಆರೋಗ್ಯ ಸಿಬಂದಿ ವರ್ಗದವರ ಮೇಲ್ವಿಚಾರಣೆಯಲ್ಲಿ ನಡೆಯಿತು. ರಕ್ತದಾನ ಶಿಬಿರಕ್ಕೆ ಐನೂರು ಮಂದಿ ರಕ್ತದಾನಿಗಳು ಹೆಸರು ನೋಂದಾಯಿಸಿ ಕೊಂಡಿದ್ದರು. ಬ್ಲಿಡ್ ಬ್ಯಾಂಕ್‌ನ ಅಗತ್ಯಕ್ಕೆ ಅನುಗುಣವಾಗಿ ನೂರ ಎಂಬತ್ತು ಮಂದಿಯ ರಕ್ತವನ್ನು ಸಂಗ್ರಹಿಸಿ ಕೊಳ್ಳಲಾಯಿತು.
ಡೆಪ್ಯೂಟಿ ಕಾನ್ಸೂಲ್ ಜೆನರಲ್ ಯತಿನ್ ಪಟೇಲ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ತಮ್ಮ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ರಕ್ತದಾನ ಶಿಬಿರದ ಸಂದರ್ಭದಲ್ಲಿ ಭಾರತದ ವಿವಿಧ ಭಾಗಗಳ ಅನಿವಾಸಿ ಭಾರತೀಯರು ಭಾಗವಹಿಸುತ್ತಾರೆ. ಪ್ರತೀ ಶಿಬಿರದಲ್ಲಿ ಉಪಹಾರದ ವ್ಯವಸ್ಥೆ ಇರುತ್ತದೆ. ಈ ಬಾರಿ ಮಣಿಪುರ ರಾಜ್ಯ ಶೈಲಿಯ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ರಕ್ತದಾನದಂತ ಮಹಾದಾನ, ಪವಿತ್ರ ದಾನದ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರಿಗೆ ಕಾನ್ಸುಲೆಟ್ ಜೆನರಲ್ ಆಫ್ ಇಂಡಿಯಾ ಮತ್ತು ಎಫ್.ಒ.ಐ. ಈವೆಂಟ್ಸ್ ತಮ್ಮ ಪ್ರಶಂಸೆಯನ್ನು ಸಲ್ಲಿಸಿದ್ದಾರೆ.
ವರದಿ: ಬಿ. ಕೆ. ಗಣೇಶ್ ರೈ, ದುಬೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.