Desi Swara: ಇಟಲಿ ಕನ್ನಡ ಸಂಘ- ಕರ್ನಾಟಕ ರಾಜ್ಯೋತ್ಸವ ಆಚರಣೆ
Team Udayavani, Dec 14, 2024, 3:45 PM IST
ಇಟಲಿ: ಇಲ್ಲಿಯ ಟೂರಿನ್ ನಲ್ಲಿ ಡಿ.1ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರ ಮದಲ್ಲಿ ಕರ್ನಾಟಕ ಸರಕಾರದ ಅನಿವಾಸಿ ಭಾರ ತೀಯ ಸಮಿತಿಯ ಉಪಾಧ್ಯಕ್ಷರಾದ ಡಾ| ಆರತಿ ಕೃಷ್ಣ ಅವರು ಭಾಗವಹಿಸಿದ್ದರು. ವ್ಯಾಪಾರ, ಉದ್ಯೋಗ, ಉನ್ನತ ಶಿಕ್ಷಣ ಕಾರಣಗಳಿಗೆ ಇಟಲಿಯಲ್ಲಿ ಸುಮಾರು 4000 ಜನರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. 2013ರಲ್ಲಿ ಇಟಲಿ ಕನ್ನಡ ಸಂಘವನ್ನು ಸ್ಥಾಪಿಸಿ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ.
ಪ್ರತೀ ವರ್ಷ ದೀಪಾವಳಿ, ಯುಗಾದಿ ಮುಂತಾದ ಹಬ್ಬ, ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯ ಜತೆಗೆ ಇಟಲಿ ಕನ್ನಡ ಸಂಘದ ಅಧ್ಯಕ್ಷರಾದ ಹೇಮೇಗೌಡ ರುದ್ರಪ್ಪ , ಸ್ಟಾನ್ಲಿ ಡಿ’ಸೋಜಾ ಉಪಾಧ್ಯಕ್ಷರು ಮತ್ತು ಶಾಂತಿ ಯೋಗ ಶಾಲೆಯ ಯೋಗ ಗುರುಗಳಾದ ಜೇಮ್ಸ್‌ರವರು ಉಪಸ್ಥಿತರಿದ್ದರು.
ಸಭೆಯ ಬಳಿಕ ಉಪಾಧ್ಯಕ್ಷರು ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು. ಇಟಲಿಯಲ್ಲಿ ಸುಮಾರು ಮೂರರಿಂದ ನಾಲ್ಕು ಸಾವಿರ ಕನ್ನಡಿಗರಿದ್ದು ಹೆಚ್ಚಾಗಿ ವಿದ್ಯಾಭ್ಯಾಸ ಮತ್ತು ವಾಪಾರ ಕಾರಣಗಳಿಂದ ಬಂದು ಹೋಗುತ್ತಿರುತ್ತಾರೆ ಎಂದು ತಿಳಿಸಿದರು.
ಮುಖ್ಯವಾಗಿ ಇಟಲಿ ಹಾಗೂ ಇನ್ನಿತರ ಯುರೋಪ್ ರಾಷ್ಟ್ರಗಳಲ್ಲಿ ಕನ್ನಡಿಗರು ಎದುರಿಸುವ ಸಮಸ್ಯೆಗಳನ್ನು ಹೇಳಿಕೊಂಡರು.
ಇಟಲಿಗೆ ತೆರಳುವಾಗ ಮತ್ತು ಅನಂತರ ”Marriage certificate’ ಮತ್ತು ‘One and same certificate’ ‘ ಪಡೆಯಲು ಬಹಳ ಸಮಸ್ಯೆಯಾಗುತ್ತಿದ್ದು ಆನ್‌ಲೈನ್ ಮುಖಾಂತರ ಪಡೆಯುವ ಅಥವಾ ನವೀಕರಿಸುವ ವ್ಯವಸ್ಥೆಯಾದಲ್ಲಿ ಅನುಕೂಲವಾಗುತ್ತದೆ ಮತ್ತು ಇತ್ತೀಚಿಗೆ ಐರೋಪ್ಯ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
ಕೌಶಲ ತರಬೇತಿ ಜತೆಗೆ ಸರಕಾರದ ವತಿಯಿಂದ ಭಾಷೆ ತರಬೇತಿ ನೀಡಿದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗುವುದೆಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಉಪಾಧ್ಯಕ್ಷರು ಸಮಿತಿಯ ಅಧ್ಯಕ್ಷರೂ ಆದ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಚರ್ಚಿಸಿದರು.
ಕೋವಿಡ್ ಸಮಯದ ಸಹಾಯ ಸ್ಮರಣೆ
2019-20ರಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾರಣ ಉದ್ಯೋಗ ಮತ್ತು ಪ್ರವಾಸಕ್ಕೆಂದು ತೆರಳಿದ್ದ ಸುಮಾರು 150ಕ್ಕೂ ಹೆಚ್ಚು ಕನ್ನಡಿಗರು ಪ್ರಯಾಣ ನಿರ್ಬಂಧ ಮತ್ತು ವಿಮಾನಯಾನ ಸ್ಥಗಿತಗೊಂಡ ಕಾರಣ ಇಟಲಿಯಲ್ಲೇ ಸಿಲುಕಿದ್ದ ಸಂದರ್ಭದಲ್ಲಿ ಡಾ| ಆರತಿ ಕೃಷ್ಣರನ್ನು ಸಂಪರ್ಕಿಸಿದಾಗ ತಾವು ಅಧಿಕಾರದಲ್ಲಿ ಇಲ್ಲದಿದ್ದರೂ ವಂದೇ ಭಾರತ್ ಮಿಷನ್ ಮುಖಾಂತರ ಆದ್ಯತೆಯ ಮೇರೆಗೆ ಕನ್ನಡಿಗರಿಗೆ ತ್ವರಿತವಾಗಿ ತಾಯ್ನಾಡು ತಲುಪುವಂತೆ ಮಾಡಿದ್ದ ಸಹಾಯವನ್ನು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.