Desi Swara@100: ಯಾವ ಮೋಹನ ಮುರಳಿ ಕರೆಯಿತು…


Team Udayavani, Nov 27, 2023, 3:06 PM IST

Desi Swara@100: ಯಾವ ಮೋಹನ ಮುರಳಿ ಕರೆಯಿತು…

“ಕೃಷ್ಣ ನಾನೊಂದು ಪ್ರಶ್ನೆ ಕೇಳಬಹುದೇ…’,” ರಾಧೆ ಅದಕ್ಯಾಕೆ ಇಷ್ಟೊಂದು ಕೋರಿಕೆ,ಗೊತ್ತಿದ್ದರೆ ಖಂಡಿತ ಹೇಳುವೆ…’
” ಕೃಷ್ಣ ನೀನೇಕೆ ನನಗೆ ಇಷ್ಟು ಇಷ್ಟವಾದೆ…??’ ” ರಾಧೆ ನಿನ್ನೊಳಗೆ ನಾನಿರುವೆ ಅದಕ್ಕೆ…’ ” ಹಾಗಾದರೆ ಕೃಷ್ಣ ನೀನು ನನ್ನ ಅಷ್ಟೊಂದು ಪ್ರೀತಿಸುವೆಯಾ..??’ ಕುತೂಹಲ ತುಂಬಿದ ಧ್ವನಿಯಲ್ಲಿ ಕೇಳಿದಳು…. “ಛೇ ರಾಧೆ ನಾನ್ಯಾವಾಗ ನಿನ್ನನ್ನು ಪ್ರೀತಿಸುತ್ತಿರುವೆ ಎಂದೂ ಹೇಳಿರುವೆ…’ ಕೆಣಕುವಂತೆ ಉತ್ತರ ಕೊಟ್ಟ ಕೃಷ್ಣ. ” ಕೃಷ್ಣ ಸುಮ್ಮನೆ ನನ್ನನ್ನು ಸತಾಯಿಸಬೇಡ, ನಿಜ ಹೇಳು ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೇ…??’ ಕಣ್ಣ ತುಂಬಾ ಕಂಬನಿ ತುಂಬಿ ಕೇಳುವಳು.

” ಅಯ್ಯೋ ರಾಧೆ ಇಷ್ಟು ಚಿಕ್ಕ ವಿಷಯಕ್ಕೆ ಯಾರಾದರೂ ಅಳುತ್ತಾರ. ನಿನ್ನ ಪ್ರಶ್ನೆಗೆ ಉತ್ತರ ಬೇಕಲ್ಲವಾ ಸರಿ ಹೇಳುವೆ ಕೇಳು…., ನನ್ನ ನಾನು ಎಷ್ಟು ಪ್ರೀತಿಸುವೇನೋ ಅದಕ್ಕೂ ಮಿಗಿಲಾಗಿ ನಿನ್ನ ಪ್ರೀತಿಸುವೆ…ಪ್ರೇಮಿಸುವೆ…ಆರಾಧಿಸುವೆ…ನನ್ನ ಹೃದಯದ ಅರಮನೆಯಲ್ಲಿ ಎಂದಿಗೂ ಬಿಡುಗಡೆ ಸಿಗದಂತೆ ಪ್ರೀತಿಯಲ್ಲಿ ಬಂಧಿಸಿರುವೆ ನಿನ್ನ…ದೇವಕನ್ಯೆ…ಗಂಧರ್ವಕನ್ಯೆ…ಅಂದದ ರಾಶಿಯ ಅಪ್ಸರೆಯರೇ ಬಂದರು ನನ್ನ ಸಂಯಮ ಎಂದಿಗೂ ಕದಡದು. ನನ್ನ ತನು – ಮನ ಎಂದಿಗೂ ನಿನ್ನ ಸನಿಹಕ್ಕೆ ಮಾತ್ರ ಕಂಪಿಸುವುದು. ನನ್ನ ಹೃದಯ ಎಂದಿಗೂ ನಿನಗೆ ಮಾತ್ರ ಮೀಸಲು….ಅರ್ಥವಾಯಿತೇ ರಾಧೆ ‘ ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿ ತುಂಬಿದ ಧ್ವನಿಯಲ್ಲಿ ಹೇಳಿದ…

ಕೃಷ್ಣ ನಾನೆಷ್ಟು ಪುಣ್ಯವಂತೆ. ನಿನ್ನ ಪ್ರೀತಿ ಪಡೆಯಲು, ನಿನ್ನ ಈ ಪ್ರೀತಿಗೆ ನಿಜವಾಗಲೂ ನಾನು ಅರ್ಹಳೆ ಎಂದು ತಿಳಿಯದು ನನಗೆ ಕೃಷ್ಣ. ಆದರೇ ಒಂದು ಸತ್ಯ ಹೇಳುವೆ ಕೇಳು, ಕೃಷ್ಣ ನನಗೆ ಈ ಕ್ಷಣ ಸಾವು ಬಂದರು ಖುಷಿಯಾಗಿ ನಿನ್ನ ಮಡಿಲಲ್ಲಿ ಉಸಿರು ಚೆಲ್ಲುವೆ. ತೃಪ್ತಿಯ ನಗೆ ಬೀರಿ ಹೇಳಿದಳು…..

” ಛೇ ರಾಧೆ ಹೀಗೇಕೆ ಹೇಳುವೆ, ನಿಜವಾದ ಪ್ರೀತಿಗೆ ಎಂದಿಗೂ ಸೋಲಿಲ್ಲ. ನಮ್ಮದು ನಿಜವಾದ ಪ್ರೀತಿ. ಎಂದಿಗೂ ಯಾರು ನಮ್ಮನ್ನು ದೂರ ಮಾಡಲಾಗದು ಆ ಸಾವು ಕೂಡ…’ “ಹೌದಾ…ಹಾಗಾದರೆ ನಿಜವಾದ ಪ್ರೀತಿ ಎಂದರೇನು…??’ ಕೃಷ್ಣ ಇದೆ ಕೊನೆ ಪ್ರಶ್ನೆ ಮತ್ತೆ ಕೇಳಲಾರೆ ಎಂದು ಕೇಳಿದಳು.

” ಸರಿ ಹೇಳುವೆ ಕೇಳು…ಆದರೆ ನನಗೆ ಈ ನಿನ್ನ ಪ್ರೀತಿ ತುಂಬಿರುವ ಭಕ್ತಿಯ, ಪರಾಕಾಷ್ಠೆ ತುಂಬಿರುವ ಸಿಹಿ ಮಧುವನ್ನು ಸವಿಯಲು ಕೊಡುವುದಾದರೆ ಹೇಳುವೆ ಆಗಬಹುದಾ ರಾಧೆ…’ ಎಂದೂ ಆಸೆ ತುಂಬಿದ ಮುಖಭಾವ ಹೊತ್ತು ಕೇಳಿದ…” ಆಗಲಿ ಕೃಷ್ಣ ಈ ತನು ಮನ ಎಂದಿಗೂ ನಿನ್ನದೇ ಅಲ್ಲವಾ…’ ಎಂದೂ ನಾಚಿಕೆಯ ಧ್ವನಿಯಲ್ಲಿ ಹೇಳಿದಳು…ಅವಳ ಒಪ್ಪಿಗೆ ಕೇಳಿ ಅವನ ಮುಖದಲ್ಲಿ ತುಂಟ ಮುಗುಳುನಗೆ ಮೂಡಿತು.

“ಸರಿ ಹೇಳುವೆ ಕೇಳು…ರಾಧೆ ಪ್ರೀತಿ ಎಂದರೇ ಸಮುದ್ರದಷ್ಟು ವಿಶಾಲ. ಮುಳುಗಿದಷ್ಟು ಆಳ. ಅರಿಯದಷ್ಟು ಅರ್ಥ.
ಪ್ರೀತಿ ಅಂದರೆ ಒಂದು ಸುಂದರ ಮೌನವಿದ್ದಂತೆ. ಆ ಮೌನವನ್ನು ಅರಿಯುವುದು ಒಂದು ಕಡೆ ಕಷ್ಟವೂ ಹೌದು….ಸುಖವೂ ಹೌದು. ನಾವು ಯಾರನ್ನು ಪ್ರೀತಿಸುತ್ತಿವೋ ಅವರ “ಮನಸ್ಸು’, “ಮೌನ’ ಇವೆರಡು ಅರ್ಥ ಮಾಡಿಕೊಂಡಿರುತ್ತಾರೋ ಅವರಿಗೆ ಪ್ರೀತಿ ಎಂದರೇನು ಎಂದು ಅರ್ಥವಾಗಿರುತ್ತೆ. ನೀ ನನಗೆ ಸಿಗದಿದ್ದರೂ ಪರವಾಗಿಲ್ಲ ಆದರೇ ಎಲ್ಲಿದ್ದರು ಹೇಗಿದ್ದರೂ ನಿನ್ನ ಮುಖದಲ್ಲಿ ಎಂದೂ ಮಾಸದ ಮುಗುಳುನಗೆ ಯಾವಾಗಲೂ ನಿನ್ನೊಂದಿಗೆ ಇರಲಿ ಎಂದು ಬಯಸುವುದೇ ಈ ನಿಜವಾದ ಪ್ರೀತಿ…,

ಹರಿಯುವ ಗಂಗೆಯಷ್ಟು ಪವಿತ್ರ ಈ ಪ್ರೀತಿ…..’ ಅವನ ಉತ್ತರ ಕೇಳಿ ಮಾತು ಬರದಂತಾಯಿತು ಅವಳಿಗೆ. ಸುಮ್ಮನೆ ಮೌನದಿ ಬಿಗಿದಪ್ಪಿದಳು ಅವನನ್ನು…ಅವಳ ಅಪ್ಪುಗೆಯನ್ನೇ ಒಪ್ಪಿಗೆ ಎಂದೂ ತಿಳಿದು ಅವಳ ಮೃದುವಾದ ಕೈಗಳನ್ನು ಬಂಧಿಸಿ ಅವಳು ಸಾಕು ಎನ್ನುವವರೆಗೂ ಮುದ್ದಿಸಿ ಕೊನೆಗೆ ಅವಳ ಹಣೆಗೆ ಹೂ ಮುತ್ತು ನೀಡಿ, ನನ್ನ ಉಸಿರಿರುವ ವರೆಗೂ ನಿನ್ನ ಹೆಜ್ಜೆಗೆ ಹೆಜ್ಜೆ ಬೆಸೆದು ನಿನ್ನ ನೆರಳಿಗೂ ನೆರಳಂತೆ ಅಪ್ಪಿ ಕಣ್ಣಾರೆಪ್ಪೆಯಂತೆ ಸದಾ ಕಾವಲಾಗಿರುವೆ ಎಂದೂ ಅಪ್ಪುಗೆಯನ್ನು ಬಿಗಿಯಾಗಿಸಿದ….’

*ಮಹಾಲಕ್ಷ್ಮಿ ಸುಬ್ರಹ್ಮಣ್ಯ, ಶಾರ್ಜಾ

ಟಾಪ್ ನ್ಯೂಸ್

Raichuru-hospi

ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

Untitled-1

Mysuru: ಕೆಆರ್‌ಎಸ್‌ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್‌

Dali-dhanajaya

Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ

Navy-Submarin

Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ಮರೀನ್‌ ಸೇರ್ಪಡೆ

Sensex-High

Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Raichuru-hospi

ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

Untitled-1

Mysuru: ಕೆಆರ್‌ಎಸ್‌ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್‌

Dali-dhanajaya

Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.