ದಿಗಂತ್-ಐಂದ್ರಿತಾ ಈಗಾಗಲೇ ಪೋಷಕರಾಗಿದ್ದಾರಂತೆ!
Team Udayavani, Feb 23, 2021, 8:55 AM IST
ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ನಟ ದಿಗಂತ್ – ಐಂದ್ರಿತಾ ಜೋಡಿ ಪೋಷಕರಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಈ ಸುದ್ದಿಯ ಬಗ್ಗೆ ದಿಗಂತ್ – ಐಂದ್ರಿತಾ ಜೋಡಿ ಕೂಡ ಪ್ರತಿಕ್ರಿಯೆ ಕೊಡದಿದ್ದರಿಂದ, ಕೆಲವರು ಈ ಸುದ್ದಿ ನಿಜವೆಂದು ಭಾವಿಸಿದರೆ, ಇನ್ನು ಕೆಲವರು ಗಾಸಿಪ್ ಇರಬಹುದು ಎಂದು ಸುಮ್ಮನಾಗಿದ್ದರು. ಆದರೆ ಇದೀಗ ಈ ಸುದ್ದಿಯ ಬಗ್ಗೆ ಸ್ವತಃ ಐಂದ್ರಿತಾ ಬಾಯಿಬಿಟ್ಟಿದ್ದಾರೆ.
“ನಾನು-ದಿಗಂತ್ ಈಗಾಗಲೇ ಅಪ್ಪ-ಅಮ್ಮ ಆಗಿದ್ದೀವಿ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ಐಂದ್ರಿತಾ ರೇ, ಒಂದಷ್ಟು ಸ್ಪಷ್ಟನೆ ನೀಡಿದ್ದಾರೆ. “ನಾನು-ದಿಗಂತ್ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ನಾನು ಮತ್ತು ದಿಗಂತ್ ಈಗಾಗಲೇ ಪೋಷಕರಾಗಿದ್ದೇವೆ’ ಎಂದಿದ್ದಾರೆ ಐಂದ್ರಿತಾ ರೇ.
ಇದನ್ನೂ ಓದಿ:ವ್ಹೀಲ್ ಚೇರ್ ಮೇಲೆ ಕಪಿಲ್ ಶರ್ಮಾ…ಫೋಟೊ ಕ್ಲಿಕ್ಕಿಸಿದವರ ವಿರುದ್ಧ ಸಿಡಿಮಿಡಿ
ಅಲ್ಲದೆ “ನಾನು ದಿಗಂತ್ ಎರಡು ನಾಯಿಗಳನ್ನು ನಮ್ಮ ಮಕ್ಕಳಂತೆಯೇ (ಡಾಗ್ ಪೇರೆಂಟ್ಸ್) ಸಾಕುತ್ತಿದ್ದೇವೆ. ಇನ್ನು ಮುಂದೆಯೂ ಹೀಗೆ ಇರಬೇಕು ಎಂದು ಕೊಂಡಿದ್ದೇವೆ’ ಎಂದಿದ್ದಾರೆ ನಟಿ ಐಂದ್ರಿತಾ ರೇ. ಒಟ್ಟಾರೆ ಈ ಮೂಲಕ ಕಳೆದ ಕೆಲದಿನಗಳಿಂದ ದಿಗಂತ್ – ಐಂದ್ರಿತಾ ಬಗ್ಗೆ ಹರಿದಾಡುತ್ತಿದ್ದ ಅಂತೆ-ಕಂತೆ ಸುದ್ದಿಗಳಿಗೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.