ದ.ಕ.: ಸಾವಿರದ ಗಡಿ ದಾಟಿದ ಪ್ರಕರಣ; ಶುಕ್ರವಾರ 97 ಮಂದಿಗೆ ಸೋಂಕು
Team Udayavani, Jul 4, 2020, 7:38 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಶುಕ್ರವಾರ ಒಂದೇ ದಿನ 97 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಒಟ್ಟು ಪ್ರಕರಣ 1010ಕ್ಕೆ ಏರಿಕೆಯಾಗಿದೆ. ಮಡಿಕೇರಿಯ ವ್ಯಕ್ತಿಯೋರ್ವ ಕೋವಿಡ್ ದಿಂದ ಮೃತಪಟ್ಟಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿರುವುದು ಇನ್ನಷ್ಟು ಆತಂಕ ಉಂಟು ಮಾಡಿದೆ. ಇದೇ ವೇಳೆ, ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 97 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಈ ಪೈಕಿ 3 ಮಂದಿ ಸೌದಿ, ದುಬಾೖಯಿಂದ ಆಗಮಿಸಿದವರಾದರೆ, 28 ಮಂದಿ ಇನ್‌ಫ್ಲೂಯೆನಾl ಲೈಕ್ ಇಲ್‌ನೆಸ್‌ನಿಂದ ಬಳಲುತ್ತಿರುವವರು. 41 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 25 ಮಂದಿಗೆ ಈ ಹಿಂದೆ ಸೋಂಕಿಗೊಳಗಾದವರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ.
ಸಿಸಿಬಿ ಪೊಲೀಸರಿಗೂ ಕೋವಿಡ್
ಜಿಲ್ಲೆಯಲ್ಲಿ ನಾಲ್ವರು ಸಿಸಿಬಿ ಪೊಲೀಸರಿಗೂ ಕೊರೊನಾ ದೃಢಪಟ್ಟಿದೆ. ಕೊರೊನಾ ವಾರಿಯರ್ಗಳಾಗಿ ಕೆಲಸ ಮಾಡುವ ವೈದ್ಯರು, ಪೊಲೀಸರು, ಅಧಿಕಾರಿಗಳಿಗೂ ಕೊರೊನಾ ಸೋಂಕು ಹಬ್ಬುತ್ತಿರುವುದು ಇನ್ನಷ್ಟು ಆತಂಕವನ್ನುಂಟು ಮಾಡಿದೆ.
ಓರ್ವ ಸಾವು
ಮಡಿಕೇರಿ ಮೂಲದ 47 ವರ್ಷದ ವ್ಯಕ್ತಿ ಜು. 2ರಂದು ಖಾಸಗಿ ಆಸ್ಪತ್ರೆ ಯಿಂದ ವೆನಾÉಕ್ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಅವರು ಅಧಿಕ ರಕ್ತದೊತ್ತಡ, ಮಧುಮೇಹ, ಮೇದೋ ಜೀರಕ ಉರಿಯೂತ, ಮೂತ್ರಪಿಂಡದ ವೈಫಲ್ಯ ಮತ್ತು ಆಲ್ಕೋಹಾಲಿಕ್ ಲಿವರ್ ರೋಗ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರ ಗಂಟಲ ದ್ರವ ಮಾದರಿ ಪರೀಕ್ಷೆಯಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ.
26 ಮಂದಿ ಡಿಸ್‌ಚಾರ್ಜ್
ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ಮಂದಿ ಕೊರೊನಾಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಐವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 57 ವರ್ಷದ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
427 ವರದಿ ಬರಲು ಬಾಕಿ
ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 425 ಮಂದಿಯ ಗಂಟಲು ದ್ರವ ಮಾದರಿ ವರದಿ ಲಭ್ಯವಾಗಿದ್ದು, 97 ಪಾಸಿಟಿವ್, 328 ನೆಗೆಟಿವ್ ಆಗಿದೆ. 427 ಮಂದಿಯ ವರದಿ ಬರಲು ಬಾಕಿ ಇದೆ.
ವೈದ್ಯ ಕುಟುಂಬದ ನಾಲ್ವರಿಗೆ ಸೋಂಕು
ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ ಕೆಲವು ದಿನಗಳ ಹಿಂದೆ ಸೋಂಕು ದೃಢಪಟ್ಟ ಬಿ.ಸಿ.ರೋಡು ಕೈಕಂಬದ ವೈದ್ಯರ ಮನೆಯ ನಾಲ್ವರು ಸದಸ್ಯರಿಗೆ ಸೋಂಕು ಕಂಡುಬಂದಿದೆ.
ವೈದ್ಯರ ತಂದೆ, ತಾಯಿ, ಪತ್ನಿ ಹಾಗೂ ಪುತ್ರನಿಗೆ ಸೋಂಕು ದೃಢ ಪಟ್ಟಿದೆ. ಜತೆಗೆ ಫರಂಗಿಪೇಟೆಯ ಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದೆ.
ಚೊಕ್ಕಬೆಟ್ಟು-ಕೃಷ್ಣಾಪುರ ಇಬ್ಬರಿಗೆ ಸೋಂಕು
ಸುರತ್ಕಲ್: ಶುಕ್ರವಾರ ಸುರತ್ಕಲ್ ಸುತ್ತಮುತ್ತ ಕೋವಿಡ್ ಸೋಂಕು ದೃಢಪಟ್ಟಿದೆ. ಕೃಷ್ಣಾಪುರ 5ನೇ ವಿಭಾಗದಲ್ಲಿ 51ರ ಹರೆಯದ ವ್ಯಕ್ತಿಗೆ ಚೊಕ್ಕಬೆಟ್ಟುವಿನಲ್ಲಿ 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.