ಕುರುಬ ಸಮುದಾಯ ಪ್ರಗತಿಗೆ ಯತ್ನ: ರಾಧಿಕಾ
Team Udayavani, Jan 23, 2022, 3:08 PM IST
ಹುಣಸಗಿ: ಕುರುಬ ಸಮುದಾಯ ಸರ್ವ ರೀತಿಯಿಂದಲೂ ಪ್ರಗತಿ ಸಾಧಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹುಣಸಗಿ ತಾಲೂಕು ಮಾಹಿಳಾ ಘಟಕದ ನೂತನ ಅಧ್ಯಕ್ಷೆ ರಾಧಿಕಾ ಸಿದ್ದನಗೌಡ ಬಿರಾದಾರ ಹೇಳಿದರು.
ವಜ್ಜಲ್ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ನೂತನ ತಾಲೂಕು ಘಟಕ ರಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುರುಬ ಸಮಾಜದ ಶೈಕ್ಷಣಿಕ, ಆರ್ಥಿಕವಾಗಿ ಸದೃಢವಾಗಬೇಕಿದೆ. ಅಲ್ಲದೆ ಮಹಿಳೆಯರು ಕೂಡ ಸಮಾಜದ ಮುಖ್ಯವಾಹಿನಿಗೆ ಬರುವುದು ಅವಶ್ಯ ಇದೆ. ಸ್ವಾಲಂಬಿ ಜೀವನದೊಂದಿಗೆ ತಕ್ಕಮಟ್ಟಿಗೆ ಸಮಾಜ ಸೇವೆ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಮಾತನಾಡಿ, ಸಂಸ್ಕಾರ, ಸಂಪ್ರದಾಯ ಹಾಗೂ ಗುರುಮಾರ್ಗದರ್ಶನದಲ್ಲಿ ಕುರುಬ ಸಮಾಜ ಮುನ್ನಡೆಯಬೇಕು. ಸರಕಾರಿ ಸೌಲಭ್ಯ ಹಾಗೂ ಅಧಿಕಾರ ಪಡೆಯಲು ಶಿಕ್ಷಣದ ಜತೆಗೆ ಸಮಾಜದ ಒಗ್ಗಟ್ಟು ಅವಶ್ಯ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ನೂತನ ತಾಲೂಕು ಘಟಕಕ್ಕೆ ರಾಧಿಕಾ ಬಿರಾದಾರ ಅಧ್ಯಕ್ಷರನ್ನಾಗಿ ಹಾಗೂ ಶಿವಬಸಮ್ಮ ಯಮನೂರಪ್ಪ ತೊಗರಿ ಕಾರ್ಯಾಧ್ಯಕ್ಷೆಯನ್ನಾಗಿ ನೇಮಿಸಲಾಯಿತು. ನೂತನವಾಗಿ ಆಯ್ಕೆಯಾದ ಕಕ್ಕೇರಾ ಹಾಗೂ ಕೆಂಭಾವಿ ಪುರಸಭೆ ಸದಸ್ಯರಿಗೆ ಮತ್ತು ವಜ್ಜಲ್ ಗ್ರಾಪಂ ಅಧ್ಯಕ್ಷ ಪ್ರಧಾನೆಪ್ಪ ಮೇಟಿ ಅವರನ್ನು ಸನ್ಮಾನಿಸಲಾಯಿತು.
ಕಾಗಿನೆಲೆ ಮಹಾಸಂಸ್ಥಾನ ಮಠದ ಲಿಂಗಬೀರ ದೇವರು, ಬಂಡೆಪ್ಪನಳ್ಳಿಯ ಮುದುಕಪ್ಪ ಮುತ್ಯಾ, ಕೆಂಚರಾಯ ಮುತ್ಯಾ, ಜೋಗೆಪ್ಪ ಪೂಜಾರಿ ಕೂಡ್ಲಿಗಿ, ನಿಂಗಪ್ಪ ಪೂಜಾರಿ ವಜ್ಜಲ್, ರೇವಣಸಿದ್ದಪ್ಪ ಪೂಜಾರಿ, ಜಿಲ್ಲಾಧ್ಯಕ್ಷ ವಿಶ್ವನಾಥ ನಿಲಹಳ್ಳಿ, ಸುರಪುರ ತಾಲೂಕು ಅಧ್ಯಕ್ಷ ಕಾಳಪ್ಪ ಕವಾತಿ, ಮುಖಂಡ ಯಲ್ಲಪ್ಪ ಕುರಕುಂದಿ ರವಿಚಂದ್ರ ಸಾಹುಕಾರ, ಭೀಮರಾಯ ಮೂಲಿಮನಿ, ಪರಶುರಾಮ ಚೌದ್ರಿ, ನಂದುಕುಮಾರ್, ಯಮನೂರಪ್ಪ, ಪರಮಣ್ಣ ಗಿಂಡಿ, ಸಿದ್ದಣ್ಣ ಅಬ್ಯಾಳ, ಸಾಬಣ್ಣ ಗಿಂಡಿ, ಬಸವರಾಜ ಮೇಟಿ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.