ಲಕ್ಷಾಂತರ ರೂ. ಖರ್ಚು ಮಾಡಿ ಬರಡು ಭೂಮಿಯಲ್ಲಿ ವನ ನಿರ್ಮಿಸಿದ ಶಿಕ್ಷಕ!


Team Udayavani, Jun 5, 2022, 4:26 PM IST

ಲಕ್ಷಾಂತರ ರೂ. ಖರ್ಚು ಮಾಡಿ ಬರಡು ಭೂಮಿಯಲ್ಲಿ ವನ ನಿರ್ಮಿಸಿದ ಶಿಕ್ಷಕ!

ಚನ್ನಪಟ್ಟಣ: ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಪರಿಸರದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದವರು.ಈಗ ಸೇವೆಯಿಂದ ನಿವೃತ್ತಿಯಾಗಿದ್ದರೂ,ಅವರ ಪರಿಸರ ಕಾಳಜಿಮಾತ್ರ ನಿಂತಿಲ್ಲ. ಬಂದ ಪಿಂಚಣಿ ಹಣದಲ್ಲಿ ಪರಿಸರಕ್ಕಾಗಿ ಲಕ್ಷಾಂತರರೂ. ಹಣ ಖರ್ಚುಮಾಡಿದ್ದಾರೆ. ಅಷ್ಟಕ್ಕೂ ಪರಿಸರದ ಬಗ್ಗೆ ಕಾಳಜಿಹೊಂದಿರುವ ವ್ಯಕ್ತಿಯಾಗಿದ್ದಾರೆ. ಇದು ವಿಶ್ವ ಪರಿಸರ ದಿನಾಚರಣೆ ವಿಶೇಷ ವರದಿ.

ಸ್ವಂತ ಖರ್ಚಿನಲ್ಲಿ ಪರಿಸರ ಪ್ರೇಮ: ಇದು ನಿಜವಾದ ಪರಿಸರ ಪ್ರೇಮಿಯೊಬ್ಬರ ಕಥೆ ಲಕ್ಷಾಂತರ ರೂ. ಖರ್ಚು ಮಾಡಿ ಪರಿಸರ ಕಾಳಜಿ. ಹೌದು…. ಬರಡು ಭೂಮಿಯಾಗಿದ್ದ ಜಾಗದಲ್ಲಿ ಸುತ್ತಲೂ ಬೆಳೆದಿರುವ ಮರಗಿಡಗಳು. ಪ್ರತಿನಿತ್ಯ ಇದೇ ಜಾಗದಲ್ಲಿ ಪ್ರಾಣಿ, ಪಕ್ಷಿಗಳು ಬಂದು ಇಲ್ಲಿ ಆಶ್ರಯ ಪಡೆಯುತ್ತವೆ. ಈ ಸುಂದರ ವನ ನಿರ್ಮಾಣ ಮಾಡೋದಿಕ್ಕೆ ಶ್ರಮಪಟ್ಟಿದ್ದು, ಬೇರೆ ಯಾರು ಅಲ್ಲ ಇವರೇ ನೋಡಿ ಭೂಹಳ್ಳಿ ಪುಟ್ಟಸ್ವಾಮಿ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಭೂಹಳ್ಳಿ ಗ್ರಾಮ ದವರಾದ ಪುಟ್ಟಸ್ವಾಮಿ 32 ವರ್ಷ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.

ಒಂದು, ಎರಡಲ್ಲ ಬರೋಬ್ಬರಿ 12ಕ್ಕೂ ಹೆಚ್ಚು ಉದ್ಯಾನಗಳಲ್ಲಿ ವಿವಿಧ ಜಾತಿಯ ಸಾವಿರಾರು ಗಿಡ ನೆಟ್ಟು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಬರಡು ಭೂಮಿಯನ್ನು ವನವಾಗಿಸಿದರು. ಚನ್ನಪಟ್ಟಣತಾಲೂಕಿನ ಭೂಹಳ್ಳಿಯಲ್ಲಿ ಬರಡು ಭೂಮಿಯಾಗಿದ್ದ 3 ಎಕರೆ ಪ್ರದೇಶದಲ್ಲಿ ಇವರು ಕವಿವನ ನಿರ್ಮಿಸಿದ್ದಾರೆ. ನೂರಾರು ಬಗೆಯ ಗಿಡಮರಗಳು ಬೆಳೆದು ಬರಡಾಗಿದ್ದ ಪ್ರದೇಶ ಇಂದು ಅರಣ್ಯವಾಗಿದೆ.

ಇದನ್ನೂ ಓದಿ:13 ಲಕ್ಷ ಗಿಡ ಬೆಳೆಸಿದ ಸಾಮಾಜಿಕ ಅರಣ್ಯ ಇಲಾಖೆ

ಬುದ್ಧೇಶ್ವರ ಪ್ರತಿಮೆ: ಕವಿವನ ಹಲವು ಬಗೆಯ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿದೆ. ಪಕ್ಷಿಗಳಿಗೆಆಹಾರದ ಸಲುವಾಗಿ ಸೀಬೆ, ಸಪೋಟ, ಸೀತಾಫ‌ಲ,ನೇರಳೆ ಸಹಿತ ಹತ್ತಾರು ಹಣ್ಣಿನ ಗಿಡ ನೆಟ್ಟು ಪಕ್ಷಿ ಸಂಕುಲದ ಉಳಿವಿಗೆ ಪಣ ತೊಟ್ಟಿದ್ದಾರೆ. ಇದರಜೊತೆಗೆ ಇನ್ನೊಂದು ಆಕರ್ಷಣೆ ಎಂದರೆ, 11 ಅಡಿ ಎತ್ತರದ ಬುದ್ಧೇಶ್ವರ ಪ್ರತಿಮೆಯನ್ನು ಇಟ್ಟಿದ್ದಾರೆ. ಹತ್ತಾರು ವನಗಳ ನಿರ್ಮಾತೃ ಪುಟ್ಟಸ್ವಾಮಿ ಅವರ ಸೇವೆ ಕೇವಲ ಒಂದು ವನ ಬೆಳೆಸಲಷ್ಟೇ ಸೀಮಿತವಾಗಿಲ್ಲ. ಚನ್ನಪಟ್ಟಣ ನಗರದ ಸಾರ್ವಜನಿಕ ಉದ್ಯಾನಗಳನ್ನು ಹಸಿರುಮಯವಾಗಿಸಲು ಅವಿರತವಾಗಿ ದುಡಿಯುತ್ತಿದ್ದಾರೆ. ಖಾಲಿ ಜಾಗ ಇರುವ ಕಡೆಯೆಲ್ಲ ಸಸಿ ನೆಟ್ಟು, ಪೋಷಿಸುತ್ತಾ ಬಂದಿದ್ದಾರೆ. ರಸ್ತೆ ಬದಿಗಳಲ್ಲಿಯೂ ಗಿಡ-ಮರಗಳನ್ನು ಬೆಳೆಸುತ್ತಾ ಬಂದಿದ್ದಾರೆ.

ಜೀವೇಶ್ವರ ವನ ನಿರ್ಮಾಣ: ಚನ್ನಪಟ್ಟಣ-ಸಾತನೂರು ರಸ್ತೆಯ ಮಹದೇಶ್ವರ ದೇವಾಲಯದ ಆವರ ಣದಲ್ಲಿ ಪಾಳು ಬಿದ್ದಿದ್ದ ಮೂರು ಎಕರೆ ಸರ್ಕಾರಿ ಜಾಗದಲ್ಲಿ ಜೀವೇಶ್ವರ ವನವನ್ನು ನಿರ್ಮಾಣಮಾಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ರೂಢಿಸಿ ಕೊಂಡ ಪರಿಸರ ಪ್ರೇಮ ತಮ್ಮ ನಿವೃತ್ತಿ ಅಂಚಿನವರೆಗೂ ಕೂಡ ರೂಢಿಸಿಕೊಂಡು ಬಂದಿದ್ದಾರೆ. ಒಟ್ಟಾರೆ ಕಾಡು ಬೆಳೆಸುವುದರಿಂದ ನಮಗಷ್ಟೇ ಅಲ್ಲದೆ, ಇಡೀ ಜೀವರಾಶಿಗೆ ಅನುಕೂಲದೆ. ನಾನು ಈಗ ನಿವೃತ್ತಿಜೀವನವನ್ನು ನಡೆಸುತ್ತಿದ್ದೇನೆ. ನನಗೆ ಬರುವ ನಿವೃತ್ತಿವೇತನದಿಂದ ಉದ್ಯಾನಗಳಲ್ಲಿ ಗಿಡ ನೆಟ್ಟು, ಪೋಷಣೆ ಮಾಡುತ್ತಿದ್ದೇನೆ ಎನ್ನುವ ಪರಿಸರ ಪ್ರೇಮಿ ಪುಟ್ಟಸ್ವಾಮಿ ಅವರನ್ನು ನಿಜಕ್ಕೂ ಶ್ಲಾಘಿಸಬೇಕು.

40 ಲಕ್ಷಕ್ಕೂ ಹೆಚ್ಚು ಹಣ ಖರ್ಚು :  ಇದುವರೆಗೂ ಪರಸರ ಸಂರಕ್ಷಣೆಗಾಗಿ ಸುಮಾರು 40ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಗಿಡಗಳನ್ನ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪರಿಸರ ಪ್ರೇಮಿ ಭೂವಳ್ಳಿ ಪುಟ್ಟಸ್ವಾಮಿ ಅವರ ಸಾಧನೆ ಅಜರಾಮರ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡಿ ದೊಡ್ಡ ದೊಡ್ಡ ಮರಗಳನ್ನ ಕೊಳ್ಳೆ ಹೊಡೆಯುತ್ತಿರುವಾಗ ತಮ್ಮ ಸ್ವಂತ ಹಣದಲ್ಲಿ ಸಸಿ ನೆಟ್ಟುಪರಿಸರ ಪ್ರೇಮವನ್ನ ಮೆರೆಯುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಪುಟ್ಟಸ್ವಾಮಿ.

 

-ಎಂ. ಶಿವಮಾಧು

ಟಾಪ್ ನ್ಯೂಸ್

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

CM–Chennapatana

Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ

HDD–BSY

By Election: ಸಿ.ಪಿ.ಯೋಗೇಶ್ವರ್‌ ಬಾಯಿ ಮಾತಿನ ಭಗೀರಥ: ಎಚ್‌.ಡಿ.ದೇವೇಗೌಡ ವಾಗ್ದಾಳಿ

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.