Fighter trailer; ಸಮಾಜದ ಒಳಿತಿಗಾಗಿ ‘ಫೈಟರ್’ ಹೊಡೆದಾಟ
Team Udayavani, Oct 2, 2023, 3:08 PM IST
ಸಾಮಾನ್ಯವಾಗಿ “ಫೈಟರ್’ ಎಂದರೆ ಅಖಾಡದಲ್ಲಿ ಹೊಡೆದಾಡುವವ ಅಥವಾ ಎದುರಾಳಿಗಳ ಜೊತೆ ಗುದ್ದಾಡುವವನು. ಆದರೆ ವಿನೋದ್ ಪ್ರಭಾಕರ್ ನಟನೆಯ “ಫೈಟರ್’ ಟ್ರೇಲರ್ ನೋಡಿದರೆ ಅದಕ್ಕೊಂದು ಬೇರೆ ರೀತಿಯಾದ ಅರ್ಥ ಸಿಗುತ್ತದೆ. ಈ “ಫೈಟರ್’ ನ್ಯಾಯಕ್ಕಾಗಿ, ಸಮಾಜದ ಒಳಿತಿಗಾಗಿ, ದುಷ್ಟರನ್ನು ಸದೆ ಬಡಿಯುವ, ಅಬಲರಿಗೆ ದೊಡ್ಡ ಶಕ್ತಿಯಾಗಿ ನಿಲ್ಲುವ, ರೈತರ ಪಾಲಿನ ಆಪ್ತರಕ್ಷಕನಾಗಿರುವ ವ್ಯಕ್ತಿ.
ಹೌದು. ದಿನನಿತ್ಯ ಅನೇಕ ಸಮಸ್ಯೆಗಳು, ಸಂಘರ್ಷಗಳು ಸಮಾಜದಲ್ಲಿ ಘಟಿಸುತ್ತಲೇ ಇರುತ್ತದೆ. ಅದನ್ನೆಲ್ಲಾ ಎದುರಿಸಲು ನಿಮ್ಮೊಳಗೊಬ್ಬ “ಫೈಟರ್’ ಇರಬೇಕು ಎಂಬುದೇ ಈ ಚಿತ್ರದ ಸಾರಾಂಶ ಎಂಬ ಒನ್‌ಲೈನ್ ಅಂಶ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ನೂತನ್ ಉಮೇಶ್.
ಪ್ರಸ್ತುತ ಸಮಾಜದಲ್ಲಿ ಅನ್ನದಾತನಿಗೆ ಆಗುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಅದನ್ನೆಲ್ಲಾ ಸರಿಯಾದ ಮಾರ್ಗದಲ್ಲಿ ಪರಿಹರಿಸಲು ಒಬ್ಬ ವ್ಯಕ್ತಿಯಾಗಿ, ಒಂದು ಶಕ್ತಿಯಾಗಿ ನಿಲ್ಲಬಲ್ಲವನೇ “ಫೈಟರ್’ ಎಂದು ಸಾರುತ್ತದೆ ಚಿತ್ರದ ಟ್ರೇಲರ್. ಪಕ್ಕಾ ಮಾಸ್, ಜತೆಗೊಂದಿಷ್ಟು ಲವ್, ಸೆಂಟಿಮೆಂಟ್ ಅಂಶವನ್ನೊಳಗೊಂಡ ಈ ಚಿತ್ರದ ಟ್ರೇಲರ್ ಔಟ್ ಆ್ಯಂಡ್ ಔಟ್ ಎಂಟರ್‌ಟೈನ್ಮೆಂಟ್ ಕಥಾಹಂದರ ಎಂಬುದು ಗೋಚರ ವಾಗುತ್ತದೆ.
ಟ್ರೇಲರ್‌ನಲ್ಲಿ ನಾಯಕ ವಿನೋದ್ ಪ್ರಭಾ ಕರ್ ಹಲವು ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾವನಾ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಕಾಣಿಸಿಕೊಂಡಿದ್ದಾ. “ಆಕಾಶ್ ಎಂಟರ್ ಪ್ರೈಸಸ್’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Cold Weather: ಕೊನೆಗೂ ಚಳಿ ಶುರು ಆಯ್ತು ಗುರು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.