ಮೀನುಗಾರಿಕಾ ಹಾರ್ಬರ್‌ ನಿರ್ಮಾಣವನ್ನು ಕೂಡಲೇ ಪೂರ್ತಿಗೊಳಿಸಲು ಬಿಎಂಎಸ್‌ ಒತ್ತಾಯ

Team Udayavani, Oct 28, 2020, 3:40 PM IST

ಮೀನುಗಾರಿಕಾ ಹಾರ್ಬರ್‌ ನಿರ್ಮಾಣವನ್ನು ಕೂಡಲೇ ಪೂರ್ತಿಗೊಳಿಸಲು ಬಿಎಂಎಸ್‌ ಒತ್ತಾಯ

ಕಾಸರಗೋಡು: ಕಾಸರಗೋಡಿನ ಮೀನುಗಾರಿಕಾ ಹಾರ್ಬರ್‌ ನಿರ್ಮಾಣವನ್ನು ಕೂಡಲೇ ಪೂರ್ತಿಗೊಳಿಸಿ ಅದನ್ನು ತೆರೆದುಕೊಡಬೇಕೆಂದು ಒತ್ತಾಯಿಸಿ ಕೇರಳ ಫಿಶರೀಸ್‌ ಸಚಿವರಿಗೆ ಮನವಿ ಸಲ್ಲಿಸುವ ಸಲುವಾಗಿ ಭಾರತೀಯ ಮತ್ಸ್ಯ ಕಾರ್ಮಿಕ ಸಂಘ (ಬಿಎಂಎಸ್‌)ನ ನೇತೃತ್ವದಲ್ಲಿ ಕಾಸರಗೋಡು ಕಸಬಾ ಕಡಪ್ಪುರದಲ್ಲಿ ಮತ್ಸ್ಯ ಕಾರ್ಮಿಕರು ಸಹಿ ಸಂಗ್ರಹ ನಡೆಸಿದರು.

ಕಾಸರಗೋಡಿನಲ್ಲಿ ಮೀನುಗಾರಿಕಾ ಹಾರ್ಬರ್‌ ನಿರ್ಮಿಸುವ ಸಲುವಾಗಿ 2010ರಲ್ಲಿ ಕಾಮಗಾರಿ ಕಾರ್ಯಾರಂಭಗೊಂಡು ಹತ್ತು ವರ್ಷ ಕಳೆದಿದ್ದರೂ ಇದುವರೆಗೆ ಅದು ಪೂರ್ತಿಗೊಂಡಿಲ್ಲ. ಸಾವಿರಾರು ಮಂದಿ ಮತ್ಸ್ಯ ಕಾರ್ಮಿಕರಿಗೆ ಉಪಯುಕ್ತವಾಗಬಹುದಾಗಿದ್ದ ಹಾರ್ಬರ್‌ ಕೆಲವು ಸ್ಥಾಪಿತ ಹಿತಾಸಕ್ತಿಗಳ ನಿಗೂಢ ಕೈವಾಡದಿಂದಾಗಿ ಇಂದು ಕಾಮಗಾರಿ ಪೂರ್ತಿಗೊಳ್ಳದೆ ಕೋಟ್ಯಾಂತರ ರೂಪಾಯಿ ವ್ಯಯಿಸಿ ಪ್ರಾರಂಭಿಸಿದ ಕಾಮಗಾರಿಯು ಅರ್ಧದಲ್ಲಿಯೇ ಸ್ಥಗಿತಗೊಂಡಿದೆ.

2010ರ ನಂತರ ಜಿಲ್ಲೆಯ ಹಲವೆಡೆ ಪ್ರಾರಂಭಿಸಿದ ಹಲವು ಹಾರ್ಬರ್‌ಗಳ ನಿರ್ಮಾಣವು ಈಗಾಗಲೇ ಪೂರ್ತಿಗೊಂಡು ಉದ್ಘಾಟನೆಗೊಂಡಿದೆ. ಕಾಸರಗೋಡು ಕಡಪ್ಪುರದಲ್ಲಿ ಕಾರ್ಯಾವೆಸಗುವ ಸಾವಿರಾರು ಮತ್ಸ್ಯ ಕಾರ್ಮಿಕರು ಜಿಲ್ಲೆಯ ಹೊರಗಡೆ ಹಾಗೂ ಇತರ ರಾಜ್ಯಗಳಿಗೆ ತೆರಳಿ ಮೀನುಗಾರಿಕೆ ನಡೆಸುತ್ತಿದ್ದಾರೆ. ನಿರ್ಮಾಣ ಕಾಮಗಾರಿಯ ಮುಕ್ಕಾಲು ಭಾಗವು ನಡೆದಿದ್ದರೂ ಕಾಮಗಾರಿ ಪೂರ್ತಿಗೊಳಿಸಿ ತೆರೆದು ಕೊಡಲು ಸಾಧ್ಯವಾಗದಿರುವುದು ಅಧಿಕಾರಿಗಳ ಅನಾಸ್ಥೆಯೇ ಕಾರಣವಾಗಿದೆ. ಅದುದರಿಂದ ಇದನ್ನು ಕೂಡಲೇ ಪೂರ್ತಿಗೊಳಿಸಿ ಅದನ್ನು ತೆರೆದು ಕೊಡಬೇಕೆಂದು ಒತ್ತಾಯಿಸಿ ಸಹಿಯನ್ನೊಳಗೊಂಡ ಮನವಿಯನ್ನು ಕೇರಳ ಫಿಶರೀಸ್‌ ಸಚಿವರಿಗೆ ಮನವಿಯನ್ನು ಸಲ್ಲಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಎರಡನೇ ಹಂತದ ಕೋವಿಡ್ ತಡೆಗೆ ಯತ್ನ: ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ

ಕಾರ್ಯಕ್ರಮದಲ್ಲಿ ಭಾರತೀಯ ಮತ್ಸ್ಯ ಕಾರ್ಮಿಕ ಸಂಘ (ಬಿಎಂಎಸ್‌)ನ ಕಾಸರಗೋಡು ಜಿಲ್ಲಾಧ್ಯಕ್ಷ ರಮೇಶ್‌, ಕಸಬ ಕಾರ್ಯದರ್ಶಿ ಆರ್‌.ಶರತ್‌, ಬಿಎಂಎಸ್‌ ಕಾಸರಗೋಡು ಮುನ್ಸಿಪಲ್‌ ಸಮಿತಿ ಅಧ್ಯಕ್ಷ ಬಾಲಕೃಷ್ಣನ್‌ ನೆಲ್ಲಿಕುನ್ನು, ಕಾರ್ಯದರ್ಶಿ ಶಿವನ್‌ ತಾಳಿಪಡ್ದು, ಹರೀಶ್‌ ಕಡಪ್ಪುರ, ಕೆ.ಎ.ಜನಾರ್ದನನ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.