ಹಿಕ್ಕೆಯ ಒಡಲಲ್ಲಿ ವನ್ಯ ಬದುಕಿನ ರಹಸ್ಯ!


Team Udayavani, May 27, 2018, 6:00 AM IST

3.jpg

ಕರಡಿಯನ್ನು ಸಂರಕ್ಷಿಸಬೇಕಾದರೆ ಅದು ಆಹಾರಕ್ಕಾಗಿ ಆಶ್ರಯಿಸಿರುವ ಹಲವಾರು ಜಾತಿಯ ಮರಗಳನ್ನು ಗುರುತಿಸಿ ಕಾಪಾಡಬೇಕಾಗುತ್ತದೆ. ಆ ಮರಗಳ ಜಾತಿಯನ್ನು ತಿಳಿದುಕೊಳ್ಳಲು ಕರಡಿಗಳ ಹಿಕ್ಕೆಯೇ ನಮಗೆ ದಾರಿ ದೀಪ. ಬಹುಶಃ ಒಂದು ಹಿಕ್ಕೆಯ ಗುಡ್ಡೆ ಸಾವಿರ ಪದಗಳಿಗೆ ಸಮಾನ ಎಂದೇ ಹೇಳಬಹುದು. ಹಿಕ್ಕೆಗಳನ್ನು ಅಭ್ಯಸಿಸುವುದು ಪತ್ತೇದಾರಿ ಕೆಲಸದ ಹಾಗೆ. 

ವನ್ಯಜೀವಿ ಸಂಶೋಧನೆಯಲ್ಲಿ ಪ್ರಾಣಿಗಳ ಆಹಾರ ಪದ್ಧತಿ ತಿಳಿದುಕೊಳ್ಳಲು ಪ್ರಮುಖವಾಗಿ ಇರುವ ಸಾಧನವೆಂದರೆ ಅವುಗಳ ಹಿಕ್ಕೆ. ತಮ್ಮದೇ ಆದ ಗಾತ್ರ, ಆಕಾರ, ಬಣ್ಣ (ನೀಲಿ ತಿಮಿಂಗಿಲದ ಹಿಕ್ಕೆ ಕಡುಗೆಂಪು ಬಣ್ಣದ್ದು!), ವಾಸನೆಗಳಲ್ಲಿ ಇರುವ ಪ್ರಾಣಿಗಳ ಹಿಕ್ಕೆಗಳು ವನ್ಯಜೀವಿ ವಿಜ್ಞಾನದ ಬಹು ಮುಖ್ಯವಾದ ಸಾಧನ. ವನ್ಯಜೀವಿ ವಿಜ್ಞಾನಿಗಳಿಗೆ ಪ್ರಾಣಿಗಳ ಹಿಕ್ಕೆಯೆಂದರೆ ಚಿನ್ನದ ಗಣಿಯಿದ್ದಂತೆ. ಅವುಗಳಲ್ಲಿ ಅಗಾಧವಾದ ಮಾಹಿತಿ ಅಡಗಿರುತ್ತದೆ. ಆಗಲೇ ಅಯ್ಯೋ, ಥೋ, ಛೀ ಅಂತ ಮೂಗು ಸಿಂಡರಿಸುತ್ತಿದ್ದೀರಾ? ಮುಂದೆ ಓದಿ ನೀವೇ ನಿರ್ಧರಿಸಿ, ಹಿಕ್ಕೆಯ ಮೌಲ್ಯವನ್ನು.

ಯಾವುದೇ ಒಂದು ಪ್ರಾಣಿ ಸಂತತಿ ಒಂದು ನಿರ್ದಿಷ್ಟ ಪ್ರದೇಶ ದಲ್ಲಿ ಇದೆಯೇ ಇಲ್ಲವೇ ಎಂಬ ಮಾಹಿತಿಯನ್ನು ಹಿಕ್ಕೆಗಳ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ. ಪ್ರಾಣಿಗಳ ಆಹಾರ ಪದ್ಧತಿ, ಯಾವ ಯಾವ ಋತುಗಳಲ್ಲಿ ಏನೇನು ತಿನ್ನುತ್ತವೆ, ಯಾವ ಆಹಾರದೆಡೆ ಒಲವು ತೋರುತ್ತವೆ, ಎಲ್ಲೆಲ್ಲಿ ಚಲಿಸುತ್ತವೆ, ಹೀಗೆ ಇನ್ನಿತರ ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ ಅವುಗಳ ಹಿಕ್ಕೆಗಳಿಂದ ಮಾಹಿತಿ ಸಂಗ್ರಹಿಸಬಹುದು. ಸಸ್ಯಾಹಾರಿಗಳಾಗಿದ್ದರೆ ಅವುಗಳು ಅವಲಂಬಿತವಾಗಿರುವ ಮರಗಿಡಗಳ ಬಗ್ಗೆಯೂ ಕೂಡ ತಿಳಿಯುತ್ತದೆ. ಈ ಮಾಹಿತಿಯಿಂದ ಪ್ರಾಣಿಗಳ ಸಂರಕ್ಷಣೆಗೆ ಅವುಗಳು ಅಧೀನವಾಗಿರುವ ಮರಗಿಡಗಳ ರಕ್ಷಣೆಯ ಬಗ್ಗೆ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. 

ಕೆಲವೊಮ್ಮೆ ಗಿಡಮರ ಮತ್ತು ವನ್ಯಜೀವಿಗಳ ಮಧ್ಯೆಯಿರುವ ಸಂಬಂಧಗಳನ್ನು ತಿಳಿಯಲು ಮಿಶ್ರ ಆಹಾರ ಪದ್ಧತಿ ಅನುಸರಿಸುವ ಕರಡಿ, ನರಿ, ಕತ್ತೆ ಕಿರುಬದಂತಹ ಪ್ರಾಣಿಗಳು ಬಹು ಉಪಯೋಗಿ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ನಮ್ಮ ಒಣ ಕಾಡುಗಳಲ್ಲಿ ಜೇನು ಗೊಂಪಳೆ ಅಥವಾ ಸೆಳ್ಳೆ ಮರವು ಹಳದಿ ಬಣ್ಣದ, ಕಡಲೇಕಾಯಿ ಬೀಜ ಗಾತ್ರದ, ಪುಟ್ಟ ಗೊಂಚಲುಗಳಲ್ಲಿ ಹಣ್ಣನ್ನು ಬಿಡುತ್ತದೆ. ಈ ಹಣ್ಣು ತಿನ್ನಲು ಬಹಳ ಅಂಟಂಟು. 

ಜೇನು ಗೊಂಪಳೆ ಬಹು ಸುಂದರವಾದ ಮರ. ತೆಳುವಾದ, ಬೂದು ಬಣ್ಣದ ಒಣಗಿದ ತೊಗಟೆ. ಈ ಒಣಗಿದ ತೊಗಟೆ ತಂತಾನೇ ಬಿಟ್ಟುಕೊಂಡು ಮರದ ಒಳಗಿನ ತಿಳಿ ಹಸಿರು ಮಿತ ಬೂದು ಬಣ್ಣದ ಹಸಿ ತೊಗಟೆ ಕಂಡುಬರುತ್ತದೆ. ವರ್ಷಪೂರ್ತಿ ನಡೆಯುವ ಈ ಪ್ರಕ್ರಿಯೆ ಈ ಮರವನ್ನು ಸುಲಭವಾಗಿ ಗುರುತಿ ಸಲು ನೆರವಾಗುತ್ತದೆ. ಸುಮಾರು ಹತ್ತು ಮೀಟರ್‌ ಎತ್ತರಕ್ಕೆ ಬೆಳೆಯುವ ಈ ಪುಟ್ಟ ಮರದ ಹಣ್ಣುಗಳು ಬೇಸಿಗೆ ಮುಗಿಯುವ ಸಮಯದಲ್ಲಿ ಕರಡಿಗಳ ಹಿಕ್ಕೆಗಳಲ್ಲಿ ತುಂಬಿರುತ್ತವೆ. ಈ ಋತು ವಿನಲ್ಲಿ ಈ ಮರದ ಹಣ್ಣುಗಳು ಬಹುಶಃ ಕರಡಿಗಳಿಗೆ ಬಹು ಉಪಯೋಗಿ ಪೋಷಕಾಂಶಗಳನ್ನು ಕೊಡುತ್ತಿರಬಹುದು. ಆದರೆ ಈ ಬಹುಉಪಯೋಗಿ ಮರವನ್ನು ಉರುವಲು ಸೌದೆಗಾಗಿ ಕೂಡ ಸಾಕಷ್ಟು ಕಟಾವು ಮಾಡಲಾಗುತ್ತದೆ. ಹಾಗಾಗಿ ಕರಡಿಯ ಸಂರಕ್ಷಣಾ ರಹಸ್ಯದ ಹಿಂದೆ ಜೇನುಗೊಂಪಳೆ ಮರದ ಉಳಿವು ಕೂಡ ಅಡಗಿದೆ. ಹೀಗೆ ಕರಡಿಯನ್ನು ಸಂರಕ್ಷಿಸಬೇಕಾದರೆ ಅದು ಆಹಾರಕ್ಕಾಗಿ ಆಶ್ರಯಿಸಿರುವ ಹಲವಾರು ಜಾತಿಯ ಮರಗಳನ್ನು ಗುರುತಿಸಿ ಕಾಪಾಡಬೇಕಾಗುತ್ತದೆ. ಆ ಮರಗಳ ಜಾತಿಯನ್ನು ತಿಳಿದುಕೊಳ್ಳಲು ಕರಡಿಗಳ ಹಿಕ್ಕೆಯೇ ನಮಗೆ ದಾರಿ ದೀಪ. ಬಹುಶಃ ಒಂದು ಹಿಕ್ಕೆಯ ಗುಡ್ಡೆ ಸಾವಿರ ಪದಗಳಿಗೆ ಸಮಾನ ಎಂದೇ ಹೇಳಬಹುದು. ಹಿಕ್ಕೆಗಳನ್ನು ಅಭ್ಯಸಿಸುವುದು ಪತ್ತೇದಾರಿ ಕೆಲಸದ ಹಾಗೆ. 

ವನ್ಯಜೀವಿಗಳು ಮನುಷ್ಯರಷ್ಟು ಲೋಭಿಗಳಲ್ಲ, ಕೇವಲ ಮರ ಗಿಡಗಳನ್ನು ತಮ್ಮ ಆಹಾರಕ್ಕಾಗಿ ಉಪಯೋಗಿಸಕೊಳ್ಳುವುದಿಲ್ಲ. ತಾವು ತಿಂದ ಹಣ್ಣಿನ ಬೀಜಗಳನ್ನು ದೂರ ತೆಗೆದುಕೊಂಡುಹೋಗಿ ಹಿಕ್ಕೆಗಳ ಮೂಲಕ ಭೂಮಿಗೆ ಹಿಂದಿರುಗಿಸುತ್ತವೆ. ಇದರಿಂದ ಒಂದೇ ಒಂದು ಕರಡಿ, ಆನೆ, ಕಡವೆ, ಜಿಂಕೆ, ಅಥವಾ ಕಾಡುಕುರಿ ವರ್ಷದಲ್ಲಿ ಸಾವಿರಾರು ಮರಗಿಡಗಳ ಬೀಜಪ್ರಸರಣದಲ್ಲಿ ತೊಡಗಿರುತ್ತವೆ. ಪ್ರಾಣಿ, ಬೀಜದೊಡನೆ ಹಿಕ್ಕೆಹಾಕಿದರೆ ಅದರ ಹಿಕ್ಕೆಯೇ ಮೊಳಕೆಯೊಡೆದ ಬೀಜಕ್ಕೆ ಮೊದಲ ಗೊಬ್ಬರ. ಬಹುಶಃ ಆ ಹಿಕ್ಕೆಯೇ ಬೀಜವನ್ನು ಬಿಸಿಲು, ಮಳೆ ಇನ್ನಿತರ ನೈಸರ್ಗಿಕ ಶಕ್ತಿಗಳಿಂದ ಮತ್ತು ಬೀಜವನ್ನು ತಿನ್ನಲಿಚ್ಛಿಸುವ ಅಳಿಲು, ಮುಳ್ಳು ಹಂದಿ, ಹೆಗ್ಗಣಗಳಂತಹ ಪ್ರಾಣಿಗಳಿಂದ ರಕ್ಷಿಸುತ್ತದೆ. ಹಾಗಾಗಿ ಹಿಕ್ಕೆ ಕೆಲವು ಪ್ರಬೇಧದ ಗಿಡಗಳಿಗೆ ಸಾಕು ತಾಯಿ ಎಂದೇ ಹೇಳ ಬಹುದು. ಹೀಗೆ, ತಾವು ಅವಲಂಬಿತವಾಗಿರುವ ಮರಗಿಡಗಳಿಗೆ ವನ್ಯಜೀವಿಗಳು ತಮ್ಮ ಉಪ್ಪಿನ ಋಣವನ್ನು, ಅಥವಾ ಹಣ್ಣಿನ ಋಣವನ್ನು ಹಿಂದಿರುಗಿಸುತ್ತವೆ ಎನ್ನಬಹುದೇ? ಉದಾಹರಣೆಗೆ, ಒರಿಸ್ಸಾದ ಬಕ್ಸಾ ಹುಲಿ ಸಂರಕ್ಷಣಾ ಪ್ರದೇಶ ದಲ್ಲಿ ಬೆಟ್ಟ ಕಣಿಗಲು ಮರದ ಶೇಖಡಾ 70ರಷ್ಟು ಬೀಜಗಳನ್ನು ಪ್ರಸರಣ ಮಾಡುವುದು ಆನೆಗಳು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಹಣ್ಣಿನ ಗಟ್ಟಿಯಾದ ಹೊರ ಕರಟು ಆನೆಯ ಹೊಟ್ಟೆಯೊಳಗೆ ಮೆತ್ತಗಾಗಿ ಆಚೆ ಬಂದಾಗಲೇ ಬೀಜ ಮೊಳಕೆ ಯೊಡೆದು ಗಿಡವಾಗುವುದು. ಆನೆಯ ಹೊಟ್ಟೆಯೊಳಗಿಂದ ಅದರ ಲದ್ದಿಯ ಮೂಲಕ ಹೊರ ಬರಬೇಕಾದರೆ ಕೆಲ ದಿನಗಳು ಕಳೆದಿರುತ್ತವೆ. ಆ ಸಮಯದಲ್ಲಿ ಆನೆ ಅನೇಕ ಕಿಲೋಮೀಟರು ದೂರವೇ ಕ್ರಮಿಸಿಬಿಟ್ಟಿರುತ್ತದೆ ಮತ್ತು ಬೀಜವು ಲದ್ದಿಯ ಮೂಲಕ ಕಾಡಿನ ಇನ್ನೊಂದು ಪ್ರದೇಶದಲ್ಲಿ ಹೊರಬರುತ್ತದೆ. ಲದ್ದಿ ಹಾಕಿದ ಕಾಡಿನ ಪ್ರದೇಶದಲ್ಲಿ ಬೆಟ್ಟ ಕಣಿಗಲು ಮರದ ಸಂತತಿ ಬೆಳೆಯುತ್ತದೆ. ಆನೆಗಳು ಕಾಡಿನಲ್ಲಿ ಇಂತಹ ಪ್ರಮುಖ ಪಾತ್ರ ವಹಿಸುವುದರಿಂದಲೇ ಅವುಗಳನ್ನು “ಭೂಹರವಿನ ವಾಸ್ತುಶಿಲ್ಪಿಗಳು’ ಎಂದು (landscape architects) ಕರೆಯಲಾಗುತ್ತದೆ. ದುರಾದೃಷ್ಟವಶಾತ್‌ ಬಕ್ಸಾ ಪ್ರದೇಶದಲ್ಲಿ, ನಮ್ಮ ದೇಶದ ಸಾಂಸ್ಕೃತಿಕ ಪ್ರಾಣಿಯೆಂದು ಘೋಷಿತವಾಗಿರುವ ಆನೆಗಳ ಸಂತತಿ ವಿನಾಶದ ಹಂತಕ್ಕೆ ತಲುಪಿದೆ. ಹಾಗಾಗಿ ಮುಂದೊಂದು ದಿನ ಬೆಟ್ಟ ಕಣಿಗಲು ಮರದ ಬೀಜ ಪ್ರಸರಣದ ಬಹು ಪ್ರಮುಖ ಮಧ್ಯವರ್ತಿ ಇಲ್ಲವಾದರೆ ಈ ಮರವು ಸಂಖ್ಯೆಯಲ್ಲಿ ಗಣನೀ ಯವಾಗಿ ಕಡಿಮೆಯಾಗುವುದು ಬಹು ಸಾಧ್ಯ. 

ಆದರೆ ಪ್ರಕೃತಿಯ ನಿಯಮಗಳೇ ಬೇರೆ. ಅಲ್ಲಿರುವ ವಿವಿಧ ಪ್ರಾಣಿ, ಪಕ್ಷಿ, ಮರಗಿಡಗಳ ಮಧ್ಯೆಯಿರುವ ಎಲ್ಲಾ ಸಂಬಂಧಗಳನ್ನು ನಾವು ತಿಳಿದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಪ್ರಾಣಿ ಸಂಖ್ಯಾ ಶಾಸ್ತ್ರಜ್ಞ ಪಾಲ್‌ ಎರ್ಲಿಚ್‌ ಹೇಳುವಂತೆ, ಪರಿಸರವೊಂದು ವಿಮಾನವಿದ್ದಂತೆ, ನಾವೆಲ್ಲರೂ ಅದರಲ್ಲಿನ ಪ್ರಯಾಣಿಕರು. ವಿಮಾನದಲ್ಲಿರುವ ತಿರುಪುಗಳನ್ನು ಒಂದೊಂದಾಗಿ ತೆಗೆಯುತ್ತಾ ಹೋದರೆ ಯಾವುದೋ ಒಂದು ನಿರ್ದಿಷ್ಟ ತಿರುಪು ತೆಗೆದಾಗ ವಿಮಾನ ಅಪಘಾತಕ್ಕೆ ಗುರಿಯಾಗುವುದು ನಿಶ್ಚಿತ. ಪ್ರತಿಯೊಂದು ನಾಶಗೊಂಡ ವನ್ಯಜೀವಿ ಪ್ರಭೇದವು ವಿಮಾನದಿಂದ ತೆಗೆಯ
ಲಾದ ಒಂದೊಂದು ತಿರುಪಿದ್ದಂತೆ ಎಂದವರು ಹೇಳುತ್ತಾರೆ. 

“ಫ್ರೆಂಡ್‌ ರಿಕ್ವೆಸ್ಟ್‌’
ಕಾಡಿನ ಹಾದಿಯಲ್ಲಿ ನಡೆದರೆ ಹುಲ್ಲು, ತರಗಲು, ಧೂಳಿನ ಮಧ್ಯೆ ಯಿರುತ್ತದೆ ಚಿರತೆ ಮತ್ತು ಹುಲಿಗಳ ಬಚ್ಚಲ ಮನೆ. ಅಲ್ಲಿ ಚಿರತೆ, ಹುಲಿಗಳು ಉಗುರಿನಿಂದ ಕೆರೆದ ಗುರುತಿನ ತುದಿಯಲ್ಲಿ ನಮಗೆ ಸಿಗುವುದು ವೈಜ್ಞಾನಿಕ ಮಾಹಿತಿಯನ್ನು ಅಡ ಗಿಸಿಟ್ಟಿಕೊಂಡಿರುವ ಭಂಡಾರ. ಮಾಂಸಾಹಾರಿ ಪ್ರಾಣಿಗಳ ಹಿಕ್ಕೆಗ ಳಾದರೆ ಅವುಗಳ ಇರುವಿಕೆ ನಮಗೆ ಹತ್ತಾರು ಹೆಜ್ಜೆಗಳ ದೂರದಲ್ಲೇ ತಿಳಿಯುತ್ತದೆ. ಮಸಾಲೆ ದೋಸೆ ಮಾಡುವ ಹೋಟೆಲ್‌ನಿಂದ ಬರುವ ಘಮಘಮಿಸುವ ವಾಸನೆಯಂತೆ, ಮಾಂಸಾಹಾರಿ ಪ್ರಾಣಿಗಳ ಹಿಕ್ಕೆಯ ಕಟುವಾದ ವಾಸನೆ ಕಾಡಿನ ಹಾದಿಯಲ್ಲಿ ನಡೆಯುತ್ತಿರುವವರ ಮೂಗಿಗೆ ಬಡಿಯುತ್ತದೆ. ಗುಂಪುಗಳಲ್ಲಿ ವಾಸಿಸುವ ಕಾಡು ನಾಯಿಗಳ ಹಿಕ್ಕೆ ಬಹು ಘಾಟು. ಕಾಡಿನಲ್ಲಿ ಒಂದೆರೆಡು ರಸ್ತೆಗಳು ಕೂಡುವ ಜಾಗದಲ್ಲಿ ಇತರ ಎಲ್ಲ ಪ್ರಾಣಿಗಳಿಗೂ ಕಾಣುವಂತೆ ಮಲವಿಸರ್ಜಿಸುವುದು ಇವುಗಳ ವಿಶೇಷತೆ. 

ಹೆಚ್ಚಾಗಿ ಒಂಟಿಯಾಗಿ ಓಡಾಡುವ ಹುಲಿ, ಚಿರತೆಗಳಂತಹ ದೊಡ್ಡ ಮಾಜಾìಲಗಳು ತಮ್ಮ ಇರುವಿಕೆಯನ್ನು ತಮ್ಮ ಜಾತಿಯ ಇತರ ಪ್ರಾಣಿಗಳಿಗೆ ಅಥವಾ ಇತರ ಜಾತಿಯ ವನ್ಯ ಜೀವಿಗಳಿಗೆ ತಿಳಿಸಲು ಹಿಕ್ಕೆಗಳನ್ನು ಮಾಹಿತಿಯಾಗಿ ಬಿಟ್ಟಿರುತ್ತವೆ. ಗಂಡು ಪ್ರಾಣಿಯಾದರೆ ಇತರ ಗಂಡು ಹುಲಿ ಅಥವಾ ಚಿರತೆಗಳಿಗೆ ಇದು ತನ್ನ ಪ್ರದೇಶ. ಬೇರೆ ಗಂಡು ಹುಲಿ, ಚಿರತೆಗಳಿಗೆ ಇಲ್ಲಿ ಸ್ವಾಗತವಿಲ್ಲವೆಂದು ತಿಳಿಸಿದರೆ, ಹೆಣ್ಣು ಮಾಜಾìಲ ತಾನು ಬೆದೆಯಲ್ಲಿದ್ದೇನೆ ಎಂದು “ಫ್ರೆಂಡ್‌ ರಿಕ್ವೆಸ್ಟ್‌’ ಬಿಟ್ಟಿರುತ್ತವೆ. ಗಂಡು ಮಾಜಾìಲಕ್ಕೆ ಆ ಫೇಸ್‌ಬುಕ್‌ “ರಿಕ್ವೆಸ್ಟ್‌’ ಇಷ್ಟವಾದರೆ “ಅಕ್ಸೆ±r…’ ಮಾಡಿಕೊಳ್ಳುತ್ತದೆ. ಹೀಗೆ ಸಾಮಾಜಿಕ ಮಾಧ್ಯಮ, ಇಮೇಲ್‌, ಮೊಬೈಲ್‌, ದೂರವಾಣಿ, ಇನ್ನಿತರ ಯಾವುದೇ ಆಧುನಿಕ ಸಾಧನಗಳಿಲ್ಲದೆ ಹುಲಿ, ಚಿರತೆ, ಸೀಳುನಾಯಿಯಂತಹ ವನ್ಯಜೀವಿಗಳು ತಮ್ಮ ತಮ್ಮ ಜಾತಿಯ ಇತರ ಪ್ರಾಣಿಗಳೊಂದಿಗೆ ತಮ್ಮ ಹಿಕ್ಕೆಗಳ ಮೂಲಕವೇ ಸಂಪರ್ಕದಲ್ಲಿರುತ್ತವೆ. ಇದೊಂದು ನಿಸರ್ಗದ ಕೌತುಕ. 

ವಿಜ್ಞಾನಿಗಳು ಇಂದು ಇದೇ ಹಿಕ್ಕೆಗಳಿಂದ ಆನೆ, ಚಿರತೆ, ಕಾಡು ನಾಯಿ, ಹುಲಿ ಇನ್ನಿತರ ವನ್ಯಜೀವಿಗಳಲ್ಲಿ ನಿರ್ದಿಷ್ಟ ಪ್ರಾಣಿಗಳನ್ನು ಗುರುತಿಸಲು ಪ್ರಾರಂಭಿಸಿದ್ದಾರೆ. ಪ್ರಾಣಿಗಳ ಹಿಕ್ಕೆಗಳಲ್ಲಿರುವ ಡಿ.ಎನ್‌.ಎ ತೆಗೆದು ಒಂದು ಪ್ರದೇಶದಲ್ಲಿರುವ ಪ್ರಾಣಿಗಳ ಸಂಖ್ಯೆ ಮತ್ತು ಸಾಂದ್ರತೆಯನ್ನು ಸಹ ಅಂದಾಜಿಸಲು ಪ್ರಾರಂಭಿಸಿ¨ªಾರೆ. ಆದರೆ ಈ ತಂತ್ರವಿಧಾನ ಇನ್ನೂ ಹೆಚ್ಚು ಪರಿಷ್ಕರಣೆಗೊಳ್ಳಬೇಕಾಗಿದೆ. ಆದರೆ ವನ್ಯಜೀವಿಗಳ ಅತಿ ಕಡಿಮೆ ಸಾಂಧ್ರತೆಯಿರುವ ಪ್ರದೇಶಗಳಲ್ಲಿ ಅವುಗಳ ಸಂಖ್ಯೆಯನ್ನು ಅಂದಾಜಿಸಲು ಈ ತಂತ್ರಜ್ಞಾನ ಬಹು ಉಪಯೋಗಿ. ಅದರೊಡನೆ ವನ್ಯಜೀವಿಗಳ ಅನುವಂಶಿಕ ವೈವಿಧ್ಯತೆಯನ್ನು ಸಹ ಇದೇ ವಿಧಿವಿಜ್ಞಾನದಿಂದ ತಿಳಿಯಲು ಪ್ರಯತ್ನಿಸುತ್ತಿ¨ªಾರೆ. ಇದರೊಟ್ಟಿಗೆ ವನ್ಯಜೀವಿಗಳ ಮಾನಸಿಕ ಒತ್ತಡಗಳನ್ನು ಹಿಕ್ಕೆಯ ಡಿ.ಎನ್‌.ಎದಿಂದ ಸಹ ತಿಳಿದುಕೊಳ್ಳಬಹುದು. ಉದಾಹರಣೆಗೆ, ಕಾಡಿನಲ್ಲಿರುವ ಚಿರತೆಗಳ ಮಾನಸಿಕ ಒತ್ತಡ ಮತ್ತು ಕಬ್ಬಿನಗ¨ªೆಗಳಲ್ಲಿ ವಾಸಿಸುವ ಚಿರತೆಗಳ ಮೇಲಿನ ಒತ್ತಡವನ್ನು ಅವುಗಳ ಡಿ.ಎನ್‌.ಎಗೆ ಹೋಲಿಸಿ ತಿಳಿದುಕೊಳ್ಳಬಹುದು. ಹಿಕ್ಕೆಗಳಿಂದ ಪ್ರಾಣಿಗಳಲ್ಲಿ
ರುವ ಪರಾವಲಂಬಿ ಕೀಟಗಳು, ರೋಗ ಉಂಟುಮಾಡುವ ವೈರಸ್‌ ಇತರ ಮಾಹಿತಿಗಳನ್ನು ಸಹಾ ಕ್ರೋಢೀಕರಿಸಬಹುದು. 

ಇತ್ತೀಚೆಗೆ ಹುಲಿಗಳ ಮೂತ್ರದಿಂದ ಕೂಡ ವಿಜ್ಞಾನಿಗಳು ಡಿ.ಎನ್‌.ಎ ತೆಗೆದು ಅವುಗಳ ಸಂಖ್ಯೆಯನ್ನು ಅಂದಾಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಲಿ, ಚಿರತೆಗಳಂತಹ ಮಾರ್ಜಾಲಗಳು ಕಾಡಿನಲ್ಲಿ ಮರಗಳ ಕಾಂಡ, ದೊಡ್ಡ ಬಂಡೆಗಳು, ಪೊದೆಗಳ ಮೇಲೆ ಅವುಗಳ ಮೂತ್ರವನ್ನು ಸಿಂಪಡಿಸಿ ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತವೆ. ಹಾಗಾಗಿ ಮೂತ್ರವನ್ನು ಉಪಯೋಗಿಸಿ ಅಮೆರಿಕದ ಒಂಟಾರಿಯೊದ ಒಂದು ಮೃಗಾಲಯದಲ್ಲಿನ ಹುಲಿ ಗಳ ಮೇಲೆ ಅಧ್ಯಯನ ನಡೆಸಿ ಅವುಗಳ ಸಾಂಧ್ರತೆ ಮತ್ತು ಅವುಗಳ ಲಿಂಗವನ್ನು ಗುರುತಿಸುವ ವಿಧಿಶಾಸ್ತ್ರವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಆದರೆ ಕಾಡಿನಲ್ಲಿ ಈ ವಿಧಾನವನ್ನು ಉಪ ಯೋಗಿಸಲು, ನಮೂನೆಯನ್ನು ಸಂಗ್ರಹಿಸಲು ಸ್ವಲ್ಪ ಕಷ್ಟವಾಗ ಬಹುದು. ಆದರೆ, ಈ ವಿಧಾನವನ್ನು ಮನುಷ್ಯರ ಸಂಖ್ಯೆಯನ್ನು ಅಂದಾಜಿಸಲು, ಉಪಯೋಗಿಸಲು ನಮ್ಮ ರಸ್ತೆಗಳಲ್ಲಿ ನಮೂನೆ ಸಿಗುವುದು ಖಂಡಿತ ಕಷ್ಟವಾಗುವುದಿಲ್ಲ. ಆದರೆ ನಮೂನೆಯೆಲ್ಲಾ ಗಂಡಸರದೇ ಆಗಿರುವ ಸಾಧ್ಯತೆಯೇ ಅತೀ ಹೆಚ್ಚು!

ಲೇಖನ ಸಂಬಂಧಿ ವಿಡಿಯೋ ನೋಡಲು ಈ ಲಿಂಕ್‌ ಟೈಪ್‌ ಮಾಡಿ: bit.ly/2IP9Wrs

ಚಿತ್ರ: ಸಂಜಯ್ ಗುಬ್ಬಿ , ಶಿವ

ಟಾಪ್ ನ್ಯೂಸ್

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.