Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

ವಿನಾಶದಂಚಿನಲ್ಲಿ ತೋಳ-ನರಿಯ ಮೂಲ ತಳಿಗಳ ಸಂತತಿ

Team Udayavani, Nov 5, 2024, 2:55 PM IST

12

ಗದಗ: ಹೆಚ್ಚುತ್ತಿರುವ ಅರಣ್ಯ ನಾಶ, ನಗರೀಕರಣದ ಪರಿಣಾಮ ಜಿಲ್ಲೆಯ ಗಜೇಂದ್ರಗಡ, ನರಗುಂದ ಸೇರಿ ಪಕ್ಕದ ಕೊಪ್ಪಳ ಭಾಗದಲ್ಲಿ ತೋಳ-ನಾಯಿ, ನರಿ-ನಾಯಿ ರೂಪಾಂತರಿ ಮಿಶ್ರ ತಳಿಗಳು ಮೊಟ್ಟ ಮೊದಲ ಬಾರಿ ಪತ್ತೆಯಾಗಿವೆ.

ಕೊಪ್ಪಳ ಹಾಗೂ ಗದಗ ಜಿಲ್ಲೆಯ ಗಡಿಭಾಗದಲ್ಲಿ ತೋಳ ಹಾಗೂ ನರಿಗಳ ಸಂಖ್ಯೆ ಹೆಚ್ಚಿವೆ. ಆಹಾರ ಅರಸಿ ಬರುಚ ಕುರಿಗಾಹಿಗಳ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡುವುದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಧಾವಿಸುತ್ತಿರುವ ತೋಳ ಹಾಗೂ ನರಿಗಳು, ಅಲ್ಲಿರುವ ನಾಯಿಗಳ ಸಂಪರ್ಕಕ್ಕೆ ಬಂದು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ತೋಳ-ನಾಯಿ, ನರಿ-ನಾಯಿ ಮಿಶ್ರ ತಳಿಗಳ ಜನನಕ್ಕೆ ಕಾರಣವಾಗುತ್ತಿದೆ.

ತೋಳ-ನಾಯಿ, ನರಿ-ನಾಯಿ ಹೈಬ್ರಿಡ್‌ ತಳಿಗಳು ಹೆಚ್ಚಾಗಿ ಬೀದಿ ನಾಯಿಗಳ ಸ್ವರೂಪದಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಕಾಣಸಿಗುತ್ತಿವೆ. ಇದು ತೋಳ ಮತ್ತು ನರಿಯ ಮೂಲ ತಳಿಗಳ ಸಂತತಿ ಮರೆಯಾಗುವ ಅಪಾಯದಂಚಿನಲ್ಲಿವೆ ಎನ್ನುತ್ತಿದ್ದಾರೆ ವನ್ಯಜೀವಿ ಸಂರಕ್ಷಕರು.

ಖಾತ್ರಿಪಡಿಸಿದ ವನ್ಯಜೀವಿ ತಜ್ಞರು: ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯ ಸಂಶೋಧಕರಾದ ಪಂಕಜ್‌ ಬಿಷ್ಣೋಯ್‌, ನೀಲಕಾಂತ್‌ ಬೋರಾ, ಕಾರ್ತಿಕ್‌ ಎನ್‌.ಜಂಡ್‌, ಸುಜಿತ್‌ ಎಸ್‌.ನರ್ವಾಡೆ ಅವರನ್ನೊಳಗೊಂಡ ತಂಡ 2023, ಅ.12ರಂದು ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸಮೀಪ ಶಂಕಿತ ತೋಳ-ನಾಯಿ ಮಿಶ್ರತಳಿ ಇರುವುದನ್ನು ಚಿತ್ರ ಸಹಿತ ಖಾತ್ರಿಪಡಿಸಿದೆ. ಬೀದಿನಾಯಿಗಳು ಹುಲ್ಲುಗಾವಲಿನ ಪರಭಕ್ಷಕ ಭಾರತೀಯ ಬೂದು ತೋಳದೊಂದಿಗೆ ಹಾಗೂ ನರಿಯೊಂದಿಗೆ ಸಂತಾನೋತ್ಪತ್ತಿ ಮಾಡಿದಾಗ ಮಿಶ್ರ ತಳಿ ತೋಳ-ನಾಯಿ, ನರಿ-ನಾಯಿ ಉತ್ಪತ್ತಿಯಾಗುತ್ತವೆ. ಈ ಪರಸ್ಪರ ಕ್ರಿಯೆಗಳು ಜಾತಿಗಳ ನಡುವೆ ಜೀನ್‌ ವಿನಿಮಯಕ್ಕೆ ಕಾರಣವಾಗಬಹುದು ಹಾಗೂ ಇದು ಋಣಾತ್ಮಕವಾಗಿ ಪರಿಣಾಮ ಬೀರಬಹುದು ಎನ್ನುತ್ತಾರೆ ಡೆಕ್ಕನ್‌ ಕನ್ಸ್‌ರ್ವೇಶನ್‌ ಫೌಂಡೇಷನ್‌ ಸಂಸ್ಥಾಪಕ ಇಂದ್ರಜೀತ್‌ ಘೋರ್ಪಡೆ.

ನೋಡಲು ಹೇಗಿರುತ್ತವೆ?: ತೋಳ-ನಾಯಿ ಮಿಶ್ರತಳಿಯು ಬೂದು ಬಣ್ಣದ್ದಾಗಿದ್ದು, ಇತರ ನಾಯಿಗಳಿಗಿಂತ ನಯವಾದ ಮತ್ತು ತೆಳ್ಳಗಿನ ದೇಹ ಹೊಂದಿ ರುತ್ತವೆ. ಕಣ್ಣುಗಳು ಬಾದಾಮಿ ಆಕಾರದ ಲ್ಲಿದ್ದು, ತಲೆಯ ಗಾತ್ರ ಚಿಕ್ಕದಾಗಿರುತ್ತದೆ. ಎದೆ ಮತ್ತು ಪಾದಗಳು ತೋಳಗಳಂತೆ ಇರುತ್ತದೆ. ನರಿ-ನಾಯಿ ಮಿಶ್ರ ತಳಿಗಳು ನರಿ ಮಖದ ಹೋಲಿಕೆ ಕಂಡು ಬರುತ್ತವೆ.

ಕೌಜುಗ ಹಕ್ಕಿ ಸೇರಿ ನೆಲದಲ್ಲಿ ಮೊಟ್ಟೆ ಇಡುವ ಪಕ್ಷಿಗಳು ಸಂತತಿ ಕಡಿಮೆ ಯಾಗಲು ಕೂಡ ಮಿಶ್ರತಳಿಯ ನಾಯಿಗಳೇ ಕಾರಣ. ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕಿದೆ. ಅಂದಾಗ ಮಾತ್ರ ತೋಳ ಮತ್ತು ನರಿಯ ಮೂಲ ತಳಿಗಳ ಸಂತತಿ ಉಳಿಯಲು ಸಾಧ್ಯ. ●ಇಂದ್ರಜಿತ್‌ ಘೋರ್ಪಡೆ, ಡೆಕ್ಕನ್‌ ಕನ್ಸ್‌ರ್ವೇಷನ್‌ ಫೌಂಡೇಷನ್‌ ಸಂಸ್ಥಾಪಕ

ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.