ಫ್ರಾನ್ಸ್ : ನಿಕೋಟಿನ್ ನಿರ್ಬಂಧ
Team Udayavani, Apr 29, 2020, 3:07 PM IST
ಫ್ರಾನ್ಸ್ : ಸಿಗರೇಟ್‌ನಲ್ಲಿರುವ ನಿಕೋಟಿನ್ ಅಂಶವು ಜನರಲ್ಲಿ ಕೋವಿಡ್ ಸೋಂಕು ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ ಎಂದು ಫ್ರಾನ್ಸ್ ಸಂಶೋಧಕರು ತಿಳಿಸಿದ್ದರು. ಈ ಬೆನ್ನಲ್ಲೇ ಸರಕಾರವು ನಿಕೋಟಿನ್ ಉತ್ಪನ್ನಗಳ ಮಾರಾಟದ ಮೇಲೆ ನಿರ್ಬಂಧ ಹೇರಿದೆ.
ದೇಶದಲ್ಲಿನ ಲಾಕ್‌ಡೌನ್ ಸಡಿಲಗೊಳ್ಳುವವರೆಗೂ ನಿಕೋಟಿನ್ ಮಾರಾಟದ ಮೇಲೆ ನಿಬಂಧನೆ ಹೇರಿರುವ ಸರಕಾರ ಕೇವಲ ಒಂದು ತಿಂಗಳ ಅಗತ್ಯದಷ್ಟು ಮಾತ್ರ ಮಾರಾಟ ನಡೆಸುವಂತೆ ಸೂಚಿಸಿದೆ. ಅದೂ ಪರಿಸ್ಥಿತಿ ಮತ್ತು ಸಂದರ್ಭವನ್ನು ಪರಿಶೀಲಿಸಿ ನಿಕೋಟಿನ್ ಅಂಶ ಇರುವ ಔಷಧ ಪದಾರ್ಥಗಳನ್ನು ನೀಡಬೇಕೆಂದು ತಿಳಿಸಿದೆ.
ದುರ್ಬಳಕೆಯ ಸಾಧ್ಯತೆ
ನಿಕೋಟಿನ್ ಸೋಂಕು ತಗುಲದಂತೆ ತಡೆಯುತ್ತದೆ ಎಂಬ ಮಾಹಿತಿ ದುರ್ಬಳಕೆ ಆಗುವ ಸಾಧ್ಯತೆ ಇದೆ. ಜನರ ತಪ್ಪು ಗ್ರಹಿಕೆಗೂ ಕಾರಣವಾಗಬಹುದು. ಪರಿಣಾಮವಾಗಿ ಇನ್ನಿತರ ಆರೋಗ್ಯ ಸಮಸ್ಯೆಗಳು ಎದುರಾಗಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ಸುತ್ತೋಲೆ ಹೊರಡಿಸಿದೆ.
2 ವಿಭಿನ್ನ ವರದಿ
ಪ್ಯಾರಿಸ್‌ನ ಉನ್ನತ ಆಸ್ಪತ್ರೆಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಸುಮಾರು 500 ಕೋವಿಡ್-19 ರೋಗಿಗಳನ್ನು ಪರೀಕ್ಷಿಸಿದ್ದು, ಶೇ.5ರಷ್ಟು ಮಾತ್ರ ಧೂಮಪಾನಿಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ಕಳೆದ ತಿಂಗಳು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಇದೇ ರೀತಿಯ ಸಂಶೋಧನೆ ವರದಿ ಪ್ರಕಟವಾಗಿದ್ದು, ಚೀನದ 1,000(ಶೇ.26) ಜನಸಂಖ್ಯೆಯ ಪೈಕಿ ಶೇ12.6 ರಷ್ಟು ಧೂಮಪಾನ ವ್ಯಸನಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು ಎಂದಿದೆ.
ಈ ಎಲ್ಲ ಅಂಶವನ್ನು ಮನದಲ್ಲಿರಿಸಿಕೊಂಡು ಫ್ರಾನ್ಸ್ ಈ ನಿರ್ಧಾರ ಕೈಗೊಂಡಿದ್ದು, ಸಂಪೂರ್ಣವಾಗಿ ಸಂಶೋಧನ ಮಾಹಿತಿ ಹೊರ ಬರುವವರೆಗೂ ನಿಕೋಟಿನ್ ಮಾರಾಟದ ಮೇಲೆ ಮಿತಿ ಇರಲಿದೆ ಎಂದು ಹೇಳಿದೆ.
ಫ್ರಾನ್ಸ್‌ನಲ್ಲಿ ಪ್ರತಿ ವರ್ಷ ತಂಬಾಕಿನಿಂದಾಗಿ 70 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇದನ್ನೂ ಗಮನಿಸುವುದು ಒಳಿತು ಎಂದಿರುವ ಫ್ರಾನ್ಸ್ ಆರೋಗ್ಯ ಸಚಿವ ಆಲಿವಿಯರ್‌ವೊರಾನ್, ಕೋವಿಡ್ ಹತ್ತಿಕ್ಕಲು ನಿಕೋಟಿನ್ ಉತ್ಪನ್ನಗಳನ್ನು ಖರೀದಿಸಬೇಡಿ. ಆದಷ್ಟು ಅವುಗಳಿಂದ ದೂರ ಇರಿ. ಅದೇ ಒಳಿತು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.