Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Team Udayavani, Dec 28, 2024, 3:23 PM IST
ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು 70 ಅಡಿ ಎತ್ತರ ಸೇತುವೆಯಿಂದ ಗಂಗಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಜಿಗಿದಿರುವ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಬ್ರಜ್‌ಘಾಟ್ ನಲ್ಲಿ ಶುಕ್ರವಾರ(ಡಿ.27) ರಂದು ನಡೆದಿದೆ.
ಶುಕ್ರವಾರ ಬೆಳಿಗ್ಗೆ ಸುಮಾರು 8.30ಕ್ಕೆ ಬ್ರಜ್‌ಘಾಟ್ ಗೆ ಬಂದ ಯುವತಿಯೊಬ್ಬಳು ಇಲ್ಲಿನ ಗಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಅದರಂತೆ ಸುಮಾರು ಎಪ್ಪತ್ತು ಅಡಿ ಎತ್ತರದಲ್ಲಿರುವ ಸೇತುವೆ ಮೇಲೆ ನಿಂತ ಯುವತಿ ಅಲ್ಲಿದ್ದ ತಡೆಬೇಲಿಯನ್ನು ಹತ್ತಿ ಕೆಲ ಹೊತ್ತು ನಿಂತಿದ್ದಾಳೆ ಆದರೆ ಅಲ್ಲೇ ಕೆಳಗಿದ್ದ ಸ್ಥಳೀಯರು ಯುವತಿ ನದಿಗೆ ಹಾರಲು ಯತ್ನಿಸಿರುವುದನ್ನು ಗಮನಿಸಿದ್ದಾರೆ ಅದರಂತೆ ಯುವತಿಯ ರಕ್ಷಣೆಗೆ ತಯಾರಾಗಿ ನಿಂತಿದ್ದರು ಸೇತುವೆಯ ಮೇಲಿದ್ದ ಯುವತಿ ಕೆಲಹೊತ್ತು ಕಾದು ಬಳಿಕ ಎಪ್ಪತ್ತು ಅಡಿ ಎತ್ತರದಿಂದ ಗಂಗಾ ನದಿಗೆ ಜಿಗಿದಿದ್ದಾಳೆ, ಯುವತಿ ಹಾರುತ್ತಿದ್ದಂತೆ ನದಿ ದಡದಲ್ಲಿದ್ದ ರಕ್ಷಣಾ ತಂಡ ಕೂಡಲೇ ಬೋಟ್ ದೋಣಿ ಮೂಲಕ ತೆರಳಿ ಯುವತಿಯನ್ನು ಕ್ಷಣ ಮಾತ್ರದಲ್ಲಿ ರಕ್ಷಣೆ ಮಾಡಿದ್ದಾರೆ.
ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಯುವತಿ ಬದುಕುಳಿದಿದ್ದಾಳೆ ಎಂದು ರಕ್ಷಣಾ ತಂಡ ಮಾಹಿತಿ ನೀಡಿದೆ.
70 फीड ऊंचे पुल से युवती ने लगाई छलांग” 16 जनवरी को युवती का होना है विवाह, गोताखोरों ने युवती को गंगा में डूबने से बचाया, घटना का वीडियो सोशल मीडिया पर हुआ वायरल !!
हापुड़ में पुल पर काफी देर तक बैठी रही युवती, अचानक गंगा में लगाई छलांग, गोताखोरों ने झटके से ऐसे बचा ली जान !! pic.twitter.com/d2vePXaejJ
— जनाब खान क्राइम रिपोर्टर (@janabkhan08) December 28, 2024
ಜನವರಿಯಲ್ಲಿ ಮದುವೆ:
ರಕ್ಷಣೆ ಮಾಡಿದ ಬಳಿಕ ಯುವತಿಯನ್ನು ರಕ್ಷಣಾ ತಂಡ ವಿಚಾರಿಸಿದಾಗ ತನಗೆ ಮುಂಬರುವ ಜನವರಿ 16ರಂದು ಮದುವೆ ನಿಶ್ಚಯವಾಗಿತ್ತು ಆದರೆ ಕುಟುಂಬದ ನಡುವೆ ನಡೆದ ವೈಮನಸ್ಸಿನಿಂದ ನಾನು ಆತ್ಮಹತ್ಯೆ ಮಾಡಿ ಕೊಳ್ಳಲು ನಿರ್ಧರಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ. ಯುವತಿಯಿಂದ ಮಾಹಿತಿ ಪಡೆದು ಬಳಿಕ ಸಂಬಂಧಿಕರನ್ನು ಕರೆಸಿ ಅವರ ಜೊತೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಇಂದ್ರಕಾಂತ್ ಯಾದವ್ ತಿಳಿಸಿದ್ದಾರೆ.
ಸದ್ಯ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಗಂಗಾ ನದಿಗೆ ಹಾರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.