“ಸುವರ್ಣ ಮೆಲುಕು’ ಸಂಚಿಕೆ ಅನಾವರಣ
ಬೊಳುವಾರು ಯಕ್ಷಗಾನ ಸಂಘದ ಸುವರ್ಣ ಮಹೋತ್ಸವ
Team Udayavani, Apr 9, 2019, 6:00 AM IST
ನಗರ: ಮೂಲ ಆಯಾಮಕ್ಕೆ ಸಮಸ್ಯೆಯಾಗದಂತೆ ಯಕ್ಷಗಾನದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವ ಅಗತ್ಯ ಬಂದಾಗ ಸಿದ್ಧರಾಗುವ ಜತೆಗೆ ಯಕ್ಷಗಾನವನ್ನು ಉಳಿಸುವ ಪ್ರಯತ್ನ ಆಗಬೇಕು ಎಂದು ಪ್ರಾಂಶುಪಾಲ, ಕಲಾವಿದ ಎಂ.ಎಲ್. ಸಾಮಗ ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ನೆನಪು ಕಾಣಿಕೆ “ಸುವರ್ಣ ಮೆಲುಕು’ ಸಂಚಿಕೆಯನ್ನು ಅನಾವರಣಗೊಳಿಸಿದರು.
ಆಂಜನೇಯ ಸಂಘವು ಯಕ್ಷಗಾನದ ಬೆಳವಣಿಗೆಗೆ ನಿರಂತರ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸಿದ ಅವರು, ಯಕ್ಷಗಾನ ಕಲಾ ಪ್ರಕಾರಗಳಲ್ಲಿ ಪ್ರಕಟವಾದಷ್ಟು ಪುಸ್ತಕಗಳು ಬೇರೆ ಯಾವುದೇ ಕಲೆಗಳಲ್ಲಿ ಪ್ರಕಟವಾಗಿಲ್ಲ. ಯಕ್ಷಗಾನ ಕಲೆ ಅಷ್ಟು ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಯಕ್ಷಕಲಾ ರಂಗದ ಕಾರ್ಯದರ್ಶಿ ನಾರಾಯಣ ಹೆಗ್ಡೆ ಮಾತನಾಡಿ, ಸಮರ್ಥ ನಾಯಕತ್ವ ಹೊಂದಿರುವುದರಿಂದ ಶ್ರೀ ಆಂಜನೇಯ ಯಕ್ಷಗಾನ ಸಂಘ ಬೆಳೆಯಲು ಸಾಧ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸ್ವರ್ಣೋದ್ಯಮಿ, ಆಂಜನೇಯ ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿ, ಆಂಜನೇಯ ಯಕ್ಷಗಾನ ಸಂಘವು ಯಕ್ಷಗಾನವನ್ನು ಪುತ್ತೂರಿನಲ್ಲಿ ಮುಖ್ಯವಾಹಿನಿಗೆ ತಂದಿದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ವಾಣಿ ಪೆರಿಯೋಡಿ ಶುಭಾಶಂಸನೆಗೈದರು. ಸುವರ್ಣ ಮೆಲುಕು ಸಂಚಿಕೆಯ ಸಂಪಾದಕ ನಾ. ಕಾರಂತ ಪೆರಾಜೆ ಅವರನ್ನು ಗೌರವಿಸಲಾಯಿತು. ಸಂಘದ ಕೋಶಾ ಕಾರಿ ದುಗ್ಗಪ್ಪ ಎನ್., ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈ ಸುವರ್ಣ ಸಂಭ್ರಮದ ಮೆಲುಕು ಹಾಕಿದರು. ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ. ಸೀತಾರಾಮ ರೈ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ ಸ್ವಾಗತಿಸಿ, ಶುಭಾ ಅಡಿಗ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಪೂರ್ವದಲ್ಲಿ ಯಕ್ಷಗಾನ ಹಾಡುಗಳ ಗಾನಾರ್ಚನೆ ನಡೆಯಿತು. ಬಳಿಕ ತಾಳಮದ್ದಳೆ-ಭಾವಸಂವಾದ ಜರಗಿತು.
ಸಮ್ಮಾನ
ಹಿರಿಯ ವೇಷಧಾರಿ ಗುಂಡಿ ಮಜಲು ಗೋಪಾಲ ಕೃಷ್ಣ ಭಟ್ ಅವರನ್ನು ಸಮ್ಮಾನಿಸಲಾಯಿತು. ಶೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಟಿ. ಪ್ರೇಮಲತಾ ರಾವ್ ಸನ್ಮಾನ ಪತ್ರ ವಾಚಿಸಿದರು. ಗುಂಡ್ಯಡ್ಕ ಈಶ್ವರ ಭಟ್ ಅಭಿನಂದನ ಮಾತುಗಳನ್ನಾಡಿ, ಗೋಪಾಲಕೃಷ್ಣ ಭಟ್ ಅವರು ತೆಂಕುತಿಟ್ಟಿನ ಪ್ರಬುದ್ಧ ಕಲಾವಿದರಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದು ಪರಿಪೂರ್ಣರಾಗಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.