ಮದುವೆ ಮನೆಯಲ್ಲಿ ಗುಂಡಿನ ಸದ್ದು! ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಯಿತು ಮದುವೆ
Team Udayavani, Jan 10, 2021, 3:59 PM IST
ಅಂಕೋಲಾ: ಮದುವೆ ಹೆಣ್ಣಿನ ಮನೆಯಲ್ಲಿ ಗುಂಡಿನ ದಾಳಿ ನಡೆದ ಘಟನೆ ಶನಿವಾರ ನಸುಕಿನಲ್ಲಿ ತಾಲೂಕಿನ ಅವರ್ಸಾದ ಸಕಲಬೇಣಾದಲ್ಲಿ ನಡೆದಿದೆ.
ರಾಮನಗುಳಿ ಯುವತಿ ವಿವಾಹ ಯಲ್ಲಾಪುರದ ವರನ ಜತೆ ಅವರ್ಸಾದ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ನಡೆಯಬೇಕಿತ್ತು. ಎರಡು ದಿನ ಮುಂಚಿತವಾಗಿ ವಧುವಿನ ಕಡೆಯವರು ಅವರ್ಸಾಕ್ಕೆ ಬಂದಿದ್ದು; ವಧುವಿನ ಚಿಕ್ಕಮ್ಮನ ಮನೆಯಲ್ಲಿ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು.
ಮದುವೆ ದಿನ ಬೆಳ್ಳಂಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ವಧು ಇದ್ದ ಮನೆಯ ಹೊರಭಾಗದಿಂದ ಆಗುಂತಕನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ಗುಂಡು ಮನೆಯ ಕಿಟಕಿ ಭಾಗದಲ್ಲಿ ತಾಗಿ ಮನೆಯೊಳಗೆ ಪ್ರವೇಶಿಸಿದೆ. ನಂತರ ಆತ ಪರಾರಿಯಾಗಿದ್ದಾನೆ.
ಕಳೆದ ಕೆಲ ದಿನಗಳಿಂದ ಈಕೆಯನ್ನು ಮದುವೆ ಆಗುವುದಾಗಿ ಪೀಡಿಸುತ್ತಿದ್ದ ರಾಜೇಶ ಗಾಂವಕರ ಎಂಬಾತನ ಮೇಲೆ ಮನೆಯವರು ಅನುಮಾನ ಪಟ್ಟಿದ್ದು, ಈತನೇ ಈ ಕೃತ್ಯ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕಳೆದ ಐದಾರು ದಿನದ ಹಿಂದೆ ಈತ ಕಾಣೆಯಾಗಿರುವ ದೂರು ಕೂಡ ದಾಖಲಾಗಿದೆ.
ಇದನ್ನೂ ಓದಿ:ನಾನು ಒರಿಜಿನಲ್ ಜನಸಂಘದವನು, ಹಾಫ್ ಚಡ್ಡಿ ಹಾಕುತ್ತಿದ್ದೆ: ರಮೇಶ ಜಾರಕಿಹೊಳಿ
ಈತನು ವಧುವನ್ನು ಹಲವು ಬಾರಿ ಕಾಡಿಸುತ್ತಿದ್ದನೆಂದು ಸಂಬಂಧಿಗಳು ತಿಳಿಸಿದ್ದಾರೆ. ಈ ನಡುವೆ ಗುಂಡಿನ ದಾಳಿಯಿಂದ ಬೆದರಿದ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಲಾಗಿತ್ತು.
ಮದುವೆಯೂ ಪೊಲೀಸ್ ಬಂದೋಬಸ್ತ್ನಲ್ಲೇ ನೆರವೇರಿತು. ಘಟನೆ ಸಂಬಂಧ ವಧುವಿನ ಕುಟುಂಬದವರು ಅಂಕೋಲಾ
ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳಕ್ಕೆ ಮತ್ತು
ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.