![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 17, 2021, 11:15 PM IST
ಹೊಸದಿಲ್ಲಿ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 4ನೇ ಸಲ ಚಾಂಪಿಯನ್ ಆಗುವುದರೊಂದಿಗೆ 2021ರ ಐಪಿಎಲ್‌ಗೆ ತೆರೆ ಬಿದ್ದಿದೆ.
ಈ ನಡುವೆ ಪ್ರಸಕ್ತ ಕೂಟದ ಸ್ಟಾರ್ ಇಲೆವೆನ್ ತಂಡಗಳನ್ನು ಪ್ರಕಟಿಸಲಾಗುತ್ತಿದೆ. ಮಾಜಿ ಆಟಗಾರ, ಹಾಲಿ ವಿಮರ್ಶಕ ಆಕಾಶ್ ಚೋಪ್ರಾ ಕೂಡ ಐಪಿಎಲ್ ಸಾಧಕರ ತಂಡವೊಂದನ್ನು ಆರಿಸಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಅವರನ್ನು ಈ ತಂಡದ ಕೀಪರ್ ಆಗಿ ನೇಮಿಸಿದ್ದಾರೆ.
4 ವಿಶ್ವಕಪ್ ಆಟಗಾರರು
ಆಕಾಶ್ ಚೋಪ್ರಾ ಆರಿಸಿದ ಈ ತಂಡದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಯಾದ ಭಾರತದ ನಾಲ್ವರು ಆಟಗಾರರಷ್ಟೇ ಸ್ಥಾನ ಸಂಪಾದಿಸಿದ್ದಾರೆ. ಉಳಿದ ಮೂವರೆಂದರೆ ರವೀಂದ್ರ ಜಡೇಜ, ವರುಣ್ ಚಕ್ರವರ್ತಿ ಮತ್ತು ಜಸ್‌ಪ್ರೀತ್ ಬುಮ್ರಾ.
ಚೋಪ್ರಾ ಐಪಿಎಲ್ ಇಲೆವೆನ್
ಋತುರಾಜ್ ಗಾಯಕ್ವಾಡ್, ಫಾ ಡು ಪ್ಲೆಸಿಸ್, ಕೆ.ಎಲ್. ರಾಹುಲ್ (ವಿ.ಕೀ.), ಗ್ಲೆನ್ ಮ್ಯಾಕ್ಸ್‌ವೆಲ್, ರಾಹುಲ್ ತ್ರಿಪಾಠಿ, ಶಿಮ್ರನ್ ಹೆಟ್‌ಮೈರ್, ರವೀಂದ್ರ ಜಡೇಜ, ಯಜುವೇಂದ್ರ ಚಹಲ್, ವರುಣ್ ಚಕ್ರವರ್ತಿ, ಹರ್ಷಲ್ ಪಟೇಲ್, ಜಸ್‌ಪ್ರೀತ್ ಬುಮ್ರಾ.
You seem to have an Ad Blocker on.
To continue reading, please turn it off or whitelist Udayavani.