![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 3, 2020, 10:39 PM IST
ಬೆಂಗಳೂರು: ಕೊರೊನಾ ನಿರ್ವಹಣೆಗೆ ಅಗತ್ಯ ನೆರವುಗಳನ್ನು ನೀಡಿದ ಅಜೀಂ ಪ್ರೇಮ್ ಜಿ ಪ್ರತಿಷ್ಠಾನಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.
ಸಚಿವರು ಈ ಹಿಂದೆ ಬೆಂಗಳೂರಿನ ಬ್ರಾಡ್ ವೇ ರಸ್ತೆಯ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನದಿಂದ ನೆರವು ಕೇಳಿದ್ದರು. ಹೀಗಾಗಿ, ಪ್ರತಿಷ್ಠಾನ ಡಾಕ್ಟರ್ ಫಾರ್ ಯು ಹೆಸರಿನ ತಂಡದ ಸಿಬ್ಬಂದಿಯನ್ನು ಆಸ್ಪತ್ರೆಗೆ ರವಾನಿಸಿದೆ.
ಇದರೊಂದಿಗೆ ಸೋಂಕು ಪರೀಕ್ಷೆಗೆ ನೆರವಾಗುವ ಐದು ಉಪಕರಣಗಳನ್ನು ಬೆಂಗಳೂರು ಮೆಡಿಕಲ್ ಕಾಲೇಜು, ನಿಮ್ಹಾನ್ಸ್, ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳಿಗೆ ನೀಡಿದೆ. 3 ಆರ್‌ಟಿಪಿಸಿಆರ್ ಯಂತ್ರ, 4 ಆರ್‌ಎನ್‌ಎ ಯಂತ್ರಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜಿಗೆ ನೀಡಿದೆ. ಜತೆಗೆ ಬಿಬಿಎಂಪಿ ಪೂರ್ವ ವಲಯಕ್ಕೆ 800, ಮಹದೇವಪುರಕ್ಕೆ 500, ಬೊಮ್ಮನಹಳ್ಳಿಗೆ 800 ಮತ್ತು ದಾಸರಹಳ್ಳಿಗೆ 655 ಸೇರಿ ಒಟ್ಟು 4,755 ಪಲ್ಸ್ ಆಕ್ಸಿಮೀಟರ್‌ಗಳನ್ನು (ರಕ್ತದ ಆಮ್ಲಜನಕ ಪ್ರಮಾಣ ಅಳೆಯುವ ಸಾಧನ) ನೀಡಿದೆ. ಈ ರೀತಿ ಕೊರೊನಾ ನಿರ್ವಹಣೆಗೆ ಕೈಗೂಡಿಸಿದ ಪ್ರತಿಷ್ಠಾನಕ್ಕೆ ಸಚಿವರು ಅಭಿನಂದನೆ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.