ಆರೋಗ್ಯಕರ ಆಹಾರಾಭ್ಯಾಸ


Team Udayavani, Jan 2, 2022, 6:00 AM IST

ಆರೋಗ್ಯಕರ ಆಹಾರಾಭ್ಯಾಸ

ಆರೋಗ್ಯಕರ ಆಹಾರಾಭ್ಯಾಸ ಎಂದರೆ ಪೌಷ್ಟಿಕಾಂಶ ತಣ್ತೀಗಳನ್ನು ಕಟ್ಟುನಿಟ್ಟಾಗಿ ಆಚರಿಸುವುದು, ಅಸಹಜ, ಅವಾಸ್ತವಿಕವಾಗಿ ತೆಳುವಾಗಿರುವುದು ಅಥವಾ ನೀವು ಇಷ್ಟಪಡುವ ಒಳ್ಳೊಳ್ಳೆಯ ಆಹಾರಗಳನ್ನು ವರ್ಜಿಸುವುದು ಎಂದು ಅರ್ಥ ಅಲ್ಲವೇ ಅಲ್ಲ. ಚೆನ್ನಾಗಿರುವುದು, ಹೆಚ್ಚು ಶಕ್ತಿಯುತರಾಗಿರುವುದು, ನಮ್ಮ ಮನೋಭೂಮಿಕೆ ಯನ್ನು ಸ್ಥಿರವಾಗಿಸುವುದು ಮತ್ತು ನಾವು ಎಷ್ಟು ಸಾಧ್ಯವೋ ಅಷ್ಟು ಆರೋಗ್ಯವಂತ ರಾಗಿರುವುದು. ಕ್ಯಾಲೊರಿಗಳ ಎಣಿಕೆ ಅಥವಾ ಆಹಾರ ಪ್ರಮಾಣದ ಬಗ್ಗೆ ಅತಿಯಾಗಿ ಕಾಳಜಿಪಡದೆ ನಿಮ್ಮ ಆಹಾರದ ವಿಚಾರದಲ್ಲಿ ಅದರ ಬಣ್ಣ, ವೈವಿಧ್ಯ ಮತ್ತು ತಾಜಾತನದ ಬಗ್ಗೆ ಆಲೋಚಿಸಿ. ಆರೋಗ್ಯಕರ ಆಹಾರ ಆಯ್ಕೆಯನ್ನು ಈ ಮಾರ್ಗದ ಮೂಲಕ ನಡೆಸುವುದು ಸಾಧ್ಯವಿದೆ. ನೀವು ಇಷ್ಟಪಡುವ ಆಹಾರದ ಮೇಲೆ ಗಮನ ಕೇಂದ್ರೀಕರಿಸಿ, ತಾಜಾ ಕಚ್ಚಾ ಸಾಮಗ್ರಿಗಳಿಂದ ತಯಾರಿಸಬಹುದಾದ ಸುಲಭ ರೆಸಿಪಿಗಳತ್ತ ಚಿಂತನೆ ಹರಿಸಿ.

ಆರೋಗ್ಯಕರ ಆಹಾರ ಸೇವನೆ ಎಂದರೆ ಮಿತಿಯಲ್ಲಿ ಸೇವನೆ. ಕೆಲವು ವಾರಗಳು ಅಥವಾ ತಿಂಗಳುಗಳ ಅವಧಿಗೆ ಮಾತ್ರ ಅಲ್ಲದೆ ಜೀವನಪರ್ಯಂತ ಅಥವಾ ನಾವು ಬಯಸಿದ ದೇಹತೂಕ ಗಳಿಸುವವರೆಗೆ ಅನುಸರಿಸಬಹುದಾದ ಆಹಾರಾಭ್ಯಾಸವನ್ನು ರೂಪಿಸಿ ಅನುಸರಿಸುವುದು ಗುರಿ. ಆದ್ದರಿಂದ ಸಮತೋಲನವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಿತಿಯಲ್ಲಿ ಆಹಾರ ಸೇವನೆಯತ್ತ ಆಲೋಚಿಸಿ. ಕೆಲವು ಗುಂಪಿನ ಆಹಾರವಸ್ತುಗಳ ಮೇಲೆ ನಿಷೇಧ ಹೇರಿಕೊಂಡಾಗ ಅವುಗಳು ಬೇಕು ಎಂಬ ಬಯಕೆ ಉಂಟಾಗುವುದು ಸಹಜ ಮತ್ತು ಇದರಿಂದಾಗಿ ಹೇಗಾದರೂ ತಿಂದುಬಿಡಬೇಕು ಎಂಬ ಹಂಬಲ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಮತ್ತು ಆಗಾಗ ತಿನ್ನದಿರುವ ಮೂಲಕ ಆರಂಭಿಸಿ.

ಆರೋಗ್ಯಕರ ಬೆಳಗಿನ ಉಪಾಹಾರ ನಿಮ್ಮ ಚಯಾಪಚಯ ಕ್ರಿಯೆಗೆ ಹೊಸ ಆರಂಭ ನೀಡಬಹುದು. ದಿನದಲ್ಲಿ ಹಲವು ಬಾರಿ ಸಣ್ಣ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುವ ಮೂಲಕ (ಸಾಮಾನ್ಯವಾಗಿರುವ ಮೂರು ಭರ್ಜರಿ ಭೋಜನಗಳ ಬದಲಾಗಿ) ನಿಮ್ಮ ದೇಹದಲ್ಲಿ ಶಕ್ತಿಯನ್ನು ದಿನದುದ್ದಕ್ಕೂ ಉಳಿಸಿಕೊಳ್ಳಬಹುದು ಮತ್ತು ಚಯಾಪಚಯ ಕ್ರಿಯೆ ಸಶಕ್ತ ಮತ್ತು ಸಕ್ರಿಯವಾಗಿರುವಂತೆ ನೋಡಿಕೊಳ್ಳಬಹುದು. ಬೆಳಗಿನ ಉಪಾಹಾರ ದಿನದ ಅತ್ಯಂತ ಮುಖ್ಯವಾದ ಆಹಾರ. ಪ್ರತೀದಿನ ಲಘುವಾದ ಮಧ್ಯಾಹ್ನದ ಊಟವನ್ನು ಮಾಡಿ. ರಾತ್ರಿಯೂಟವನ್ನು ರಾತ್ರಿ 7 ಅಥವಾ 8ರ ಒಳಗೆ ಮತ್ತು ಮಲಗುವುದಕ್ಕೆ ಕನಿಷ್ಟ 2 ತಾಸು ಮುನ್ನ ಮುಗಿಸುವಂತೆ ಪ್ರಯತ್ನಿಸಿ. ಊಟ -ಉಪಾಹಾರಗಳ ನಡುವೆ ಸಣ್ಣ ಸಣ್ಣ ಲಘು ಉಪಾಹಾರಗಳಿರಲಿ, ಹಿಡಿಯಷ್ಟು ಬೀಜಗಳು ಅಥವಾ ಹಣ್ಣುಗಳು ಆದ್ಯತೆಯಾಗಿರಲಿ.

ಆರೋಗ್ಯಕರ ಆಹಾರಾಭ್ಯಾಸವು ಕಾಬೊìಹೈಡ್ರೇಟ್‌ಗಳು, ಪ್ರೊಟೀನ್‌ಗಳು, ಕೊಬ್ಬುಗಳು, ವಿಟಮಿನ್‌ಗಳು ಮತ್ತು ಖನಿಜಾಂಶಗಳಿಂದ ಸಮತೋಲಿತವಾಗಿರಬೇಕು. ಆರೋಗ್ಯಕರ ಕಾಬೊìಹೈಡ್ರೇಟ್‌ಗಳು ಮತ್ತು ನಾರಿನಂಶ ಅಧಿಕವಿರುವ ಆಹಾರ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ವಿಶೇಷವಾಗಿ ಇಡೀ ಧಾನ್ಯಗಳು, ಬೀನ್ಸ್‌, ಹಣ್ಣು ಮತ್ತು ತರಕಾರಿಗಳಲ್ಲಿ ಈ ಆಯ್ಕೆ ನಡೆಯಲಿ. ಏಕೆಂದರೆ ಇವುಗಳಲ್ಲಿ ಫೈಟೊಕೆಮಿಕಲ್‌ಗ‌ಳು ಮತ್ತು ಆ್ಯಂಟಿ ಓಕ್ಸಿಡೆಂಟ್‌ಗಳು ಸಾಕಷ್ಟು ಪ್ರಮಾಣದಲ್ಲಿದ್ದು, ಇವು ಹೃದ್ರೋಗಗಳು ಮತ್ತು ವಿವಿಧ ಬಗೆಯ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆ ಒದಗಿಸುತ್ತವೆ. ಇಡೀ ಗೋಧಿ, ಸಜ್ಜೆ, ನವಣೆ, ಕ್ವಿನೋವಾ, ಬಾರ್ಲಿ ಇತ್ಯಾದಿಗಳನ್ನು ನಿಮ್ಮ ದೈನಿಕ ಆಹಾರದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಿ. ತಾಜಾ ಕೋಳಿಮಾಂಸ, ಮೀನು, ಟೊಫ‌ು, ಮೊಟ್ಟೆಗಳು, ಬೀನ್ಸ್‌ ಮತ್ತು ಬೀಜಗಳಂತಹ ವಿಟಮಿನ್‌ಗಳ ಗುಣಮಟ್ಟದ ಮೂಲಗಳತ್ತ ದೃಷ್ಟಿ ಹರಿಸಿ. ಕೆಂಪು ಮಾಂಸಕ್ಕಿಂತ ಬಿಳಿ ಮಾಂಸಕ್ಕೆ ಹೆಚ್ಚು ಆದ್ಯತೆ ನೀಡಿ. ಯಾಕೆಂದರೆ ಅನಾರೋಗ್ಯಕರ ಸಾಚ್ಯುರೇಟೆಡ್‌ ಕೊಬ್ಬಿನ ಮುಖ್ಯ ಮೂಲಗಳಲ್ಲಿ ಪ್ರಾಣಿ ಕೊಬ್ಬು ಒಂದಾಗಿದೆ.

ಬೇಳೆಗಳು ಮತ್ತು ಕಾಳುಗಳನ್ನು ಸಸ್ಯಮೂಲದ ಪ್ರೊಟೀನ್‌ ಆಗಿ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಪ್ರತೀ ದಿನವೂ ಎರಡು ಬಾರಿಯ ತರಕಾರಿಗಳು ಮತ್ತು ಒಂದು ಬಾರಿಯ ಹಸುರು ಸೊಪ್ಪು ತರಕಾರಿಗಳನ್ನು ಸೇರಿಸಿಕೊಳ್ಳುವುದರಿಂದ ದೈನಿಕ ಪೌಷ್ಟಿಕಾಂಶ ಅಗತ್ಯಗಳನ್ನು ಪೂರೈಸಿಕೊಳ್ಳಲು ಸುಲಭವಾಗುತ್ತದೆ. ಪ್ರತೀ ತುತ್ತಿಗೂ ಗರಿಷ್ಠ ಪೌಷ್ಟಿಕಾಂಶಗಳು ಸಿಗುವ ಹಾಗೆ ಆಹಾರ ವಸ್ತು, ಹಣ್ಣುಗಳು ವರ್ಣಮಯವಾಗಿರಲಿ. ಪ್ರತೀದಿನವೂ ವಿಭಿನ್ನ ತರಕಾರಿಗಳನ್ನು ಪ್ರಯತ್ನಿಸಿ. ಒಂದು ಲೋಟ ಜ್ಯೂಸ್‌ ಕುಡಿಯುವುದಕ್ಕಿಂತ ಒಂದಿಡೀ ಹಣ್ಣನ್ನು ತಿನ್ನಿ. ಕಾಮನಬಿಲ್ಲಿನಂತೆ ವರ್ಣಮಯವಾಗಿರುವ ಹಣ್ಣು, ತರಕಾರಿಗಳನ್ನು ಸೇವಿಸಲು ಪ್ರಯತ್ನಿಸಿ. ಗಾಢವಾದ ಬಣ್ಣದ ಹಣ್ಣು ತರಕಾರಿಗಳಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿ ಓಕ್ಸಿಡೆಂಟ್‌ಗಳು ಮತ್ತು ನಾರಿನಂಶ ಹೆಚ್ಚು ಸಾಂದ್ರವಾಗಿರುತ್ತವೆ. ಬಣ್ಣಗಳು ವೈವಿಧ್ಯವಾಗಿದ್ದರೆ ಪ್ರಯೋಜನವೂ ವೈವಿಧ್ಯವಾಗಿರುತ್ತದೆ.

ಮ್ಯಾಕ್ರೊನ್ಯೂಟ್ರಿಯೆಂಟ್‌ಗಳು ಮತ್ತು ಮೈಕ್ರೊನ್ಯೂಟ್ರಿಯೆಂಟ್‌ಗಳ ಪೂರೈಕೆಯ ಜತೆಗೆ ಆರೋಗ್ಯವಾಗಿರುವುದಕ್ಕೆ ಮುಂದಿನ ಹೆಜ್ಜೆ ಎಂದರೆ ಅಗತ್ಯವಿರುವಷ್ಟು ದ್ರವಾಂಶ ಪೂರೈಕೆ. ಪ್ರತೀ ದಿನಕ್ಕೆ 10ರಿಂದ 15 ಕಪ್‌ ದ್ರವಾಹಾರ ಕುಡಿಯುವ ಗುರಿ ಇರಿಸಿಕೊಳ್ಳಿ. ಇದು ಸಾದಾ ನೀರು, ಆರೋಗ್ಯಕರ ಸೂಪ್‌ಗ್ಳು, ಎಳನೀರು, ಮಜ್ಜಿಗೆ, ಜೀರಿಗೆ ನೀರು, ಪಾಯಸಗಳು, ಆರೋಗ್ಯಕರ ಸೂ¾ತೀಗಳು ಇತ್ಯಾದಿ ರೂಪದಲ್ಲಿ ಇರಬಹುದು. ಉಪ್ಪಿನ ಸೇವನೆಯ ಪ್ರಮಾಣವನ್ನು ದಿನಕ್ಕೆ 1 ಚಹಾಚಮಚಕ್ಕೆ ಮಿತಿಗೊಳಿಸಿ. ಸಂಸ್ಕರಿಸಿದ ಹಿಟ್ಟುಗಳು ಮತ್ತು ಸಕ್ಕರೆ ಭರಿತ ತಿನಿಸುಗಳನ್ನು ವರ್ಜಿಸಿ. ಸಕ್ಕರೆಯು ಶಕ್ತಿಯ ಮಟ್ಟ ಏರುಪೇರು ಆಗಲು ಕಾರಣವಾಗುತ್ತದೆ ಹಾಗೂ ಆರೋಗ್ಯ ಮತ್ತು ದೇಹತೂಕದ ಸಮಸ್ಯೆಗಳಿಗೆ ಕೊಡುಗೆ ನೀಡುವ ಸಾಧ್ಯತೆಗಳಿವೆ. ಸಿಹಿ ಇಷ್ಟಪಡುವವರು ಹಣ್ಣುಗಳನ್ನು ತಿಂದರೆ ನಾರಿನಂಶ, ವಿಟಮಿನ್‌ಗಳು ಮತ್ತು ಆ್ಯಂಟಿಓಕ್ಸಿಡೆಂಟ್‌ಗಳು ಪೂರೈಕೆಯಾಗುತ್ತವೆ. ಪ್ರತೀ ತುತ್ತನ್ನೂ ಆನಂದಿಸುತ್ತ ಚೆನ್ನಾಗಿ ಜಗಿದು ತಿನ್ನಿ. ಹೊಟ್ಟೆ ತುಂಬಿದೆ ಅನ್ನಿಸಿದಾಗ ಆಹಾರ ಸೇವನೆ ನಿಲ್ಲಿಸಿ. ಯಾಕೆಂದರೆ ಇನ್ನು ಆಹಾರ ಸಾಕು ಎಂದು ಮಿದುಳು ದೇಹಕ್ಕೆ ಸೂಚನೆ ನೀಡುವುದಕ್ಕೆ ಸ್ವಲ್ಪ ಹೊತ್ತು ತೆಗೆದುಕೊಳ್ಳುತ್ತದೆ, ಹೀಗಾಗಿ ನಿಧಾನವಾಗಿ ಆಹಾರ ಸೇವಿಸಿ. ಬಾಯಾರಿಕೆಯನ್ನು ಹಸಿವು ಎಂದು ತಪ್ಪಾಗಿ ಭಾವಿಸಬೇಡಿ, ಕೆಲವೊಮ್ಮೆ ನಮಗೆ ಬೇಕಿರುವುದು ಒಂದು ಲೋಟ ನೀರು ಮಾತ್ರವಾಗಿರುತ್ತದೆ.

ನಿಮಗೆ ಮಾಡುವುದಕ್ಕೆ ಇಷ್ಟವಾದ ಚಟುವಟಿಕೆಗಳನ್ನು ಹುಡುಕಿಕೊಳ್ಳಿ ಮತ್ತು ಅದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ. 40 ನಿಮಿಷಗಳ ಕಾಲ ನಡಿಗೆ, ಒಂದು ತಾಸು ಈಜು ಅಥವಾ ಸೈಕಲ್‌ ಸವಾರಿ, ಎಲಿವೇಟರ್‌ ಉಪಯೋಗಿಸುವುದಕ್ಕಿಂತ ಮೆಟ್ಟಿಲುಗಳನ್ನು ಏರುವುದು-ಇಳಿಯುವುದು ನಿಮ್ಮನ್ನು ಆರೋಗ್ಯವಂತರನ್ನಾಗಿ ಇರಿಸುತ್ತದೆ. ಜತೆಗೆ ಆರೋಗ್ಯಯುತ ಆಹಾರ ಆಯ್ಕೆಗಳನ್ನು ಮಾಡಲು ಪ್ರೇರೇಪಣೆ ನೀಡುತ್ತದೆ. ಟಿವಿ, ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನ್‌ ಪರದೆಯ ಮೇಲೆ ದೃಷ್ಟಿ ನೆಟ್ಟು ಆಹಾರ ಸೇವಿಸುವುದರಿಂದ ಅನ್ಯಮನಸ್ಕತೆ ಉಂಟಾಗಿ ಅಗತ್ಯಕ್ಕಿಂತ ಹೆಚ್ಚು ಆಹಾರ ಹೊಟ್ಟೆ ಸೇರಬಹುದು. ಇತರರ ಜತೆಗೆ ಕುಳಿತು ಊಟ-ಉಪಾಹಾರ ಸೇವಿಸುವುದರಿಂದ ಹಲವಾರು ಸಾಮಾಜಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿವೆ. ಅದರಲ್ಲೂ ಮಕ್ಕಳನ್ನು ಜತೆಸೇರಿಸಿಕೊಂಡು ಆಹಾರ ಸೇವಿಸುವುದರಿಂದ ಅವರಿಗೆ ಉತ್ತಮ ಆಹಾರಾಭ್ಯಾಸ ಅನುಸರಿಸಲು ಪ್ರೇರಣೆ ಸಿಕ್ಕಿದಂತಾಗುತ್ತದೆ.
ಒಂದೇ ಬಗೆಯ ಆಹಾರ ಕ್ರಮ ಎಲ್ಲರಿಗೂ ಸರಿಹೊಂದುವುದಿಲ್ಲ ಎಂಬುದನ್ನು ನೆನಪಿಡಿ.

ಆದರ್ಶ ದೇಹತೂಕ, ರೋಗ ಸ್ಥಿತಿ, ಆಹಾರಾಭ್ಯಾಸಗಳು ಮತ್ತು ಜೀವನಶೈಲಿಯನ್ನು ಆಧರಿಸಿ ಆಹಾರಕ್ರಮವನ್ನು ಬದಲಾಯಿಸಬೇಕಾಗುತ್ತದೆ. ಅಲ್ಲದೆ ಒಂದು ಆಹಾರಕ್ರಮವನ್ನು ಜೀವಮಾನ ಪರ್ಯಂತ ಅನುಸರಿಸುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಕಾಲಾಂತರದಲ್ಲಿ ತೂಕ ಗಳಿಕೆ ಅಥವಾ ತೂಕ ನಷ್ಟದ ಆಧಾರದಲ್ಲಿ ಅದನ್ನು ಬದಲಾಯಿಸಬೇಕಾಗುತ್ತದೆ. ಅದೇರೀತಿ ಕಡಿಮೆ ಕ್ಯಾಲೊರಿಗಳ ಆಹಾರ ಕ್ರಮವು ಸಮತೋಲಿತವಲ್ಲದ ಕಾರಣ ಮತ್ತು ದೇಹದ ಅಗತ್ಯಗಳನ್ನು ಪೂರೈಸದ ಕಾರಣ ದೀರ್ಘ‌ಕಾಲದಲ್ಲಿ ಅದರಿಂದ ನಾವು ಆರೋಗ್ಯವಂತರಾಗಿ ಇರಲು ಸಾಧ್ಯವಿಲ್ಲ. ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌, ಅಟಿನ್ಸ್‌ ಡಯಟ್‌, ಮೆಡಿಟರೇನಿಯನ್‌ ಡಯಟ್‌, ಪಾಲಿಯೊ ಡಯಟ್‌ ಮತ್ತು ಕೆಟೋ ಡಯಟ್‌ನಂತಹ ವಿವಿಧ ಪಥ್ಯಾಹಾರಗಳನ್ನು ಅವುಗಳ ಪರಿಣಾಮಗಳನ್ನು ತಿಳಿಯದೆ ಅನುಸರಿಸಲಾಗುತ್ತಿದೆ. ನಿಮ್ಮ ಕುಟುಂಬ ವೈದ್ಯರು ಮತ್ತು ನೋಂದಾಯಿತ ಪಥ್ಯಾಹಾರ ತಜ್ಞರನ್ನು ಕಂಡು ಸಮಾಲೋಚಿಸುವ ಮೂಲಕ ನಿಮಗೆ ಸರಿಯಾದ ಆಹಾರಕ್ರಮವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಆಹಾರ ದಿನಚರಿಯನ್ನು ದಾಖಲಿಸಿ ಇರಿಸಿಕೊಂಡರೆ ಎಷ್ಟು, ಏನು ನಿಮ್ಮ ಹೊಟ್ಟೆ ಸೇರುತ್ತದೆ ಎಂಬ ವಿಚಾರದಲ್ಲಿ ನಿಜವಾಗಿ ನಿಮ್ಮ ಕಣ್ಣುಗಳು ತೆರೆಯಲು ಸಾಧ್ಯ. ಇದರಿಂದ ನಿಮ್ಮ ಆಹಾರಕ್ರಮ ಎಷ್ಟು ಆರೋಗ್ಯಯುತವಾಗಿದೆ ಎಂಬ ಅರಿವು ಕೂಡ ಉಂಟಾಗುವುದಕ್ಕೆ ಸಾಧ್ಯವಿದೆ. ಸಾಧ್ಯವಾದಷ್ಟು ಪೌಷ್ಟಿಕಾಂಶಯುಕ್ತ ಆಹಾರವಸ್ತುಗಳನ್ನು ಸೇವಿಸುವ ಮೂಲಕ ನೀವು ಆರೋಗ್ಯಯುತ ಜೀವನಕ್ರಮವನ್ನು ಸೃಷ್ಟಿಸುತ್ತೀರಿ ಮತ್ತು ಅದರಿಂದ ನೀವು ನಿಮ್ಮ ಅತ್ಯುತ್ತಮ ದೇಹತೂಕವನ್ನು ಗಳಿಸಲು ಸಾಧ್ಯವಿದೆಯಲ್ಲದೆ ಜೀವನಪರ್ಯಂತ ಆರೋಗ್ಯವಾಗಿರಲು ಸಾಧ್ಯ.

-ಅರುಣಾ ಮಲ್ಯ
ಹಿರಿಯ ಪಥ್ಯಾಹಾರ ತಜ್ಞೆ
ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.