ಕಾವೇರಿದ ಬಿಸಿಲು; ರಾಜಕಾರಣಿಗಳಿಗೆ ದಿಗಿಲು
ಬಿರುಬಿಸಿಲಿನ ಬವಣೆ ಮಧ್ಯೆ ನಡೆದಿದೆ ಅಬ್ಬರದ ಪ್ರಚಾರ
Team Udayavani, Apr 3, 2019, 6:00 AM IST
ರಾಯಚೂರು: ಕಳೆದ ವರ್ಷ ವಿಧಾನಸಭಾ ಚುನಾವಣೆಯನ್ನು ರಣಬಿಸಿಲಲ್ಲೇ ಎದುರಿಸಿದ್ದ ಹೈದರಾಬಾದ್-ಕರ್ನಾಟಕ ಭಾಗದ ಜನತೆ ಈ ಬಾರಿ ಲೋಕಸಭಾ ಚುನಾವಣೆಯನ್ನೂ ಅಂಥದ್ದೇ ಸ್ಥಿತಿಯಲ್ಲಿ ಎದುರಿಸುವಂತಾಗಿದೆ. ಹೈ-ಕ ಜಿಲ್ಲೆಗಳಲ್ಲಿ ಈಗಾಗಲೇ ಬಿಸಿಲಿನ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟಿದ್ದು, ಚುನಾವಣೆ ವೇಳೆಗೆ ಅದು 42-44 ಡಿಗ್ರಿ ಆಸುಪಾಸು ತಲುಪುವ ಸಾಧ್ಯತೆ ಇದೆ. ಬಿಸಿಲಿನ ಪ್ರತಾಪಕ್ಕೆ ಹೆದರಿ ಏಪ್ರಿಲ್, ಮೇನಲ್ಲಿ ಹೈ-ಕ ಭಾಗದ ಸರ್ಕಾರಿ ಕಚೇರಿಗಳ ಸಮಯ ಬದಲಿಸಲಾಗುತ್ತದೆ. ಅಲ್ಲದೆ, ಸರ್ಕಾರವೇ ಈ ಭಾಗದ ಬಿಸಿಲಿನ ಸಮಸ್ಯೆ ಅರಿತು ಹೆಲ್ಮೆಟ್ ಧರಿಸಲು ವಿನಾಯಿತಿ ನೀಡಿದೆ. ಇಂತಹ ಹೊತ್ತಲ್ಲಿಯೇ ಲೋಕಸಭಾ ಚುನಾವಣಾ ಅಖಾಡ ಸಿದ್ಧಗೊಳ್ಳುತ್ತಿದ್ದು, ಅ ಧಿಕಾರಿಗಳಿಗೆ,
ಅಭ್ಯರ್ಥಿಗಳಿಗೆ, ಅವರ ಬೆಂಬಲಿಗರಿಗೆ ಸಂಕಟ ಎದುರಾಗಿದೆ.
0.8 ಡಿಗ್ರಿ ತಾಪಮಾನ ಹೆಚ್ಚಳ: ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ 0.5ರಿಂದ 0.8 ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಹವಾಮಾನ ತಜ್ಞರು. ಕಳೆದ ಮುಂಗಾರು, ಹಿಂಗಾರು ಸಂಪೂರ್ಣ
ಕೈಕೊಟ್ಟಿರುವ ಪರಿಣಾಮ ಉಷ್ಣಾಂಶದ ಪ್ರಮಾಣ ಕಡಿಮೆ ಆಗಿಲ್ಲ. ಅದು ಚಳಿಗಾಲದ ಮೇಲೂ ಪರಿಣಾಮ ಬೀರಿದ್ದು, ಈ ಬಾರಿ ಹೇಳಿಕೊಳ್ಳುವ ಚಳಿ ಇರಲಿಲ್ಲ. ಒಂದೆರಡು ಬಾರಿ ಚಂಡಮಾರುತಗಳ ತಂಪುಗಾಳಿ ಬೀಸಿ ಚಳಿಯ ಅನುಭವ ಆಗಿದ್ದು ಬಿಟ್ಟರೆ ಚಳಿಗಾಲ ಅಷ್ಟೊಂದು
ಪರಿಣಾಮಕಾರಿಯಾಗಿರಲಿಲ್ಲ. ಬೇಸಿಗೆ ಮೇಲೂ ಅದರ ಪರಿಣಾಮ ಬೀರುವ ಸಾಧ್ಯತೆ ಇದ್ದು, 0.5ರಿಂದ 0.8 ಡಿಗ್ರಿ ಸೆಲ್ಸಿಯಸ್ ಸರಾಸರಿ
ಬಿಸಿಲಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಬಾರಿ ಏಪ್ರಿಲ್‌ನಲ್ಲಿ ಸರಾಸರಿ ಬಿಸಿಲಿನ ಪ್ರಮಾಣ 49 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ಬಾರಿ ಅದು ಇನ್ನೂ ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ.
ಸಂಜೆ ಹೊತ್ತಲ್ಲಿ ನಡೆಯಲಿವೆ ಸಮಾವೇಶಗಳು: ಬಿಸಿಲಿನ ಪ್ರಖರತೆಗೆ ಜನರನ್ನು ಕರೆ ತರುವುದು ಸುಲಭವಲ್ಲ ಎಂಬುದು ರಾಜಕೀಯ ನಾಯಕರಿಗೆ ಮನವರಿಕೆ ಆಗಿದೆ. ಹೀಗಾಗಿ, ಸಮಾವೇಶ, ಸಭೆ ಸಮಾರಂಭಗಳನ್ನು, ಪ್ರಚಾರ ಕಾರ್ಯಗಳನ್ನು ಸಂಜೆ ಹೊತ್ತಲ್ಲಿಯೇ ಹೆಚ್ಚಾಗಿ ನಡೆಸುವ ಯೋಜನೆ ರೂಪಿಸುತ್ತಿದ್ದಾರೆ. ಇದರಿಂದ ಖರ್ಚೂ ಕಡಿಮೆ ಆಗಲಿದೆ ಎಂಬ ಲೆಕ್ಕಾಚಾರ ಅಭ್ಯರ್ಥಿಗಳದ್ದು.
ಕರಾವಳಿಯಲ್ಲೂ ಸೆಕೆಯ ಕಿರಿಕಿರಿ
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲೂ ಸೆಕೆ ಏರುತ್ತಿದ್ದು, ಮಧ್ಯಾಹ್ನದ ವೇಳೆ 36 ಡಿ.ಸೆ.ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಹೀಗಾಗಿ, ನಗರಗಳ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನದ
ವೇಳೆ ಜನ ಸಂಚಾರ ಕೂಡ ವಿರಳವಾಗಿರುತ್ತವೆ. ಈ ಭಾಗದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಏರಿದ್ದು, ಬಿಸಿಲಿನ ತಾಪಕ್ಕೆ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಹೈರಾಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ರೀತಿಯ ಉರಿ ಬಿಸಿಲು ಕರಾವಳಿಯಲ್ಲಿತ್ತು. 2017ರ ಮಾ.2ರಂದು 39.6 ಡಿ.ಸೆ.ಗರಿಷ್ಠ ತಾಪಮಾನ ದಾಖಲಾಗಿತ್ತು. ಇದಾದ ಬಳಿಕ, 2016ರಲ್ಲಿಯೂ ಮಾ.12ರಂದು 36.8 ಡಿ.ಸೆ. ತಾಪಮಾನ ದಾಖಲಾಗಿತ್ತು. ಇದೀಗ 2019ರಲ್ಲಿಯೂ ಸುಮಾರು 37 ಡಿ.ಸೆ.ನಷ್ಟು ತಾಪಮಾನ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ
ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಚುನಾವಣೆ ಹೊತ್ತಲ್ಲಿ 43 ಡಿಗ್ರಿ ತಾಪಮಾನ?
ಕಳೆದ ಬಾರಿ ಮೇನಲ್ಲಿ 43 ಡಿಗ್ರಿ ಸೆಲ್ಸಿಯಸ್ ಅತಿ ಹೆಚ್ಚು ಬಿಸಿಲಿನ ಪ್ರಮಾಣ ದಾಖಲಾಗಿತ್ತು. ಆದರೆ, ಈ ಬಾರಿ ಈಗಲೇ 41 ಡಿಗ್ರಿ ಸೆಲ್ಸಿಯಸ್ ಗಡಿ ತಲುಪಿರುವ ಕಾರಣ ಚುನಾವಣೆ ಹೊತ್ತಿಗೆ 42ರಿಂದ 43 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಹವಾಮಾನ ತಜ್ಞರು.
ಕಲಬುರಗಿಯಲ್ಲಿ 42.8 ಡಿ.ಸೆ. ತಾಪಮಾನ: ಮಂಗಳವಾರ ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 42.8 ಡಿ.ಸೆ.ತಾಪಮಾನ ದಾಖಲಾಯಿತು.
ಕಳೆದ ವರ್ಷ ಮಳೆಗಾಲ ಸರಿಯಾಗಿ ಆಗದ ಪರಿಣಾಮ ಈ ಬಾರಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಮಾರ್ಚ್‌ನ ಸರಾಸರಿ ಬಿಸಿಲಿನ ಪ್ರಮಾಣ ಈಗಲೇ ದಾಖಲಾಗಿದೆ. ಏಪ್ರಿಲ್‌ನಲ್ಲಿ ಅದು ಮತ್ತಷ್ಟು ಹೆಚ್ಚಾಗಬಹುದು. ಮೇನಲ್ಲಿ ದಾಖಲಾಗುತ್ತಿದ್ದ 42ರಿಂದ 43 ಡಿಗ್ರಿ ಸೆಲ್ಸಿಯಸ್ ಬಿಸಿಲು ಈ ಬಾರಿ ಏಪ್ರಿಲ್‌ನಲ್ಲಿಯೇ ದಾಖಲಾಗಬಹುದು.
●ಸತ್ಯನಾರಾಯಣ, ಸಹ ಸಂಶೋಧನಾ ನಿರ್ದೇಶಕ, ಹವಾಮಾನ ವಿಭಾಗ, ಕೃಷಿ ವಿವಿ
●ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.