ಹೆಸ್ಕಾಂ ಕಚೇರಿಗೆ ತೆರಳುವ ಮಾರ್ಗ ಹೊಂಡಗುಂಡಿ : ಗ್ರಾಹಕರು ನೀರಿನಲ್ಲಿ ಜಾರಿ ಬೀಳುವ ಸಾಧ್ಯತೆ
Team Udayavani, Sep 24, 2020, 12:50 PM IST
ಕುಮಟಾ: ಪಟ್ಟಣದ ಹೆಗಡೆ ಸರ್ಕಲ್ ಬಳಿಯಿರುವ ತಾಲೂಕು ವಿದ್ಯುತ್ ನಿರ್ವಹಣಾ ಘಟಕಕ್ಕೆ ತೆರಳುವ ರಸ್ತೆ ಸಂಪೂರ್ಣ
ಹೊಂಡಗುಂಡಿಯಾಗಿದ್ದು, ವಿದ್ಯುತ್ ಬಿಲ್ ಪಾವತಿಸಲು ಬರುವ ಗ್ರಾಹಕರು ಕೊಳಚೆ ನೀರಿನಲ್ಲಿ ಜಾರಿ ಬೀಳುವ ಸಾಧ್ಯತೆ
ಅಧಿಕವಾಗಿದೆ.
ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆಗೆ ನಿಗಮದ ಆವರಣದ ತುಂಬ ನೀರು ತುಂಬಿಕೊಂಡಿದ್ದು, ಅಲ್ಲಲ್ಲಿ ಹೊಂಡಮಯವಾಗಿದೆ. ಪ್ರತಿದಿನ ನೂರಾರು ಜನ ಇಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಆಗಮಿಸುವುದರಿಂದ ಹೊಂಡಮಯ ಆವರಣದಲ್ಲಿ ಬೀಳುವ ಸಾಧ್ಯತೆ ಹೆಚ್ಚಿದೆ. ಇನ್ನು ದ್ವಿಚಕ್ರ ವಾಹನ ಸವಾರರು ಈ ಭಾಗದಲ್ಲಿ ಸಂಚರಿಸಬೇಕಾದರೆ ಆಯತಪ್ಪಿ ಬಿದ್ದ ಉದಾಹರಣೆಯೂ ಸಾಕಷ್ಟಿದೆ. ಹೆಸ್ಕಾಂ ಶೀಘ್ರ ತಗ್ಗು, ಹೊಂಡಗಳಿಂದ ಕೂಡಿದ ಪ್ರದೇಶಕ್ಕೆ ಮಣ್ಣು ತುಂಬಿ ನೀರು ನಿಲ್ಲದಂತೆ ಸೂಕ್ತ ಕ್ರಮವಹಿಸಬೇಕಾಗಿದ್ದು, ಆ ಮೂಲಕ ವಾಹನ ಸವಾರರಿಗೆ
ಹಾಗೂ ಹೆಸ್ಕಾಂ ಗ್ರಾಹಕರಿಗೆ ಸೂಕ್ತ ಸ್ಥಳದ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹೆಸ್ಕಾಂ ಕಚೇರಿ ಆವಾರದಲ್ಲಿ ನೀರು ತುಂಬಿ, ಮಣ್ಣಿನ ಗುಂಡಿಯಾಗುತ್ತಿರುವುದು ಸತ್ಯ. ಕಚೇರಿ ತಗ್ಗಿನ ಭಾಗದಲ್ಲಿರುವುದರಿಂದ ರಸ್ತೆ ಬದಿಯ ನೀರು ಇಲ್ಲಿಗೆ ಬಂದು ಶೇಖರಣೆಗೊಳ್ಳುತ್ತಿದೆ. ಈ ಬಗ್ಗೆ ಶೀಘ್ರ ಕ್ರಮವಹಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.
– ಎಂ. ಪಠಾಣ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ, ಕುಮಟಾ
ಹೆಸ್ಕಾಂ ಕಚೇರಿ ಆವಾರದಲ್ಲಿ ನೀರು ನಿಂತು ಕೊಚ್ಚೆ ಗುಂಡಿಯಾಗಿರುವುದರಿಂದ ಓಡಾಡುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಪ್ರತೀ ಮಳೆಗಾಲದ ಸಮಯದಲ್ಲೂ ಇಲ್ಲಿ ನೀರು ತುಂಬಿಕೊಂಡಿರುತ್ತದೆ. ಇದರಿಂದ ವೃದ್ಧರಿಗೆ ಹಾಗೂ ಮಹಿಳೆಯರಿಗೆ ಹೆಸ್ಕಾಂ ಕಚೇರಿಯಲ್ಲಿ ವ್ಯವಹರಿಸಲು ಓಡಾಟ ನಡೆಸುವುದು ಕಷ್ಟಸಾಧ್ಯ. ಶೀಘ್ರದಲ್ಲೇ ಸಂಬಂಧಿಸಿದ ಇಲಾಖೆ ಕಚೇರಿಯ ಆವಾರದಲ್ಲಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.
– ಚಂದ್ರಹಾಸ ನಾಯ್ಕ, ಚಿತ್ರಗಿ ಹೆಸ್ಕಾಂ ಗ್ರಾಹಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.