Daily Horoscope: ಕೆಲವು ಗೊಂದಲಗಳ ಬಳಿಕ ಸಮಾಧಾನದ ಕ್ಷಣಗಳು, ಅನಿರೀಕ್ಷಿತವಾಗಿ ಗುರುದರ್ಶನ
Team Udayavani, Oct 29, 2023, 7:44 AM IST
ಮೇಷ: ಶಿಸ್ತಿನ ಜೀವಕ್ಕೆ ಹೊರೆಯಾಗದ ಕೆಲಸಗಳು. ವಿರಾಮದ ದಿನವಾದರೂ ಕೆಲಸ, ವ್ಯವಹಾರಗಳ ಚಿಂತೆ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಚಿಂತನೆ. ಬಂಧುಮಿತ್ರರ ಆಗಮನ. ಆಸ್ತಿ ಖರೀದಿ ಮಾತುಕತೆ ಅಂತಿಮ ಹಂತದಲ್ಲಿ. ಸೋದರಿಯ ಮನೆಯಲ್ಲಿ ಶುಭ ಕಾರ್ಯಕ್ರಮ.
ವೃಷಭ: ಆನಂದೋತ್ಸಾಹಗಳ ದಿನ. ಮುಂದಿನ ವಾರ ಹೆಚ್ಚು ಮುನ್ನಡೆ ಸಾಧಿಸುವ ಸಂಕಲ್ಪದೊಂದಿಗೆ ದಿನದ ಆರಂಭ. ಹಳೆಯ ಒಡನಾಡಿಗಳ ಭೇಟಿ. ಹತ್ತಿರದ ದೇವಾಲಯ ದರ್ಶನ. ಬಂಧುವರ್ಗದಲ್ಲಿ ವಿವಾಹ ಮಾತುಕತೆ. ಕೃಷಿಕರಿಗೆ ಹೊಸ ಮಾಹಿತಿ ಲಭ್ಯ.
ಮಿಥುನ: ಕೆಲವು ಗೊಂದಲಗಳ ಬಳಿಕ ಸಮಾಧಾನದ ಕ್ಷಣಗಳು. ಮನೆಯಲ್ಲಿ ಸಣ್ಣ ಮಟ್ಟಿನ ದೇವತಾರಾಧನೆ. ಅನಿರೀಕ್ಷಿತವಾಗಿ ಗುರುದರ್ಶನ. ಕಿರಿಯರ ಕ್ಷೇಮ ಚಿಂತನೆ. ತೋಟಗಾರಿಕೆಯಲ್ಲಿ ಕಾಲ ಯಾಪನೆ. ಸಾಹಿತ್ಯಾಧ್ಯಯನ, ಧ್ಯಾನ, ಜಪ, ಸತ್ಸಂಗದಲ್ಲಿ ಪಾಲುಗೊಳ್ಳುವ ಅವಕಾಶ.
ಕರ್ಕಾಟಕ: ವಿರಾಮದ ದಿನವಾದರೂ ಕಾರ್ಯ ಸಾಮರ್ಥ್ಯವನ್ನು ವೃದ್ಧಿಗೊಳಿಸುವ ಪ್ರಯತ್ನ. ಮಾರ್ಗದರ್ಶಿ ಪುಸ್ತಕಗಳ ಓದು. ಕಾಲದ ಸದುಪಯೋಗಕ್ಕಾಗಿ ಗೃಹಾಲಂಕಾರದತ್ತ ಗಮನ. ಗುರು ಸಾನ್ನಿಧ್ಯದಲ್ಲಿ ಶಾಸ್ತ್ರಕೋವಿದರ ದರ್ಶನದಿಂದ ಸಾರ್ಥಕ್ಯದ ಭಾವ.
ಸಿಂಹ: ಆರಾಮದಲ್ಲಿ ಕಾಲಕಳೆಯುತ್ತಿರುವಂತೆ ಕಂಡರೂ ಕ್ರಿಯಾಶೀಲ ಮನಸ್ಸು ಕಾರ್ಯನಿರತ. ನಾಳೆಯ ಕಾರ್ಯಗಳ ಶಿಸ್ತುಬದ್ಧ ಆಯೋಜನೆ. ಮನೆಗೆ ಬಂದ ಅತಿಥಿಗಳಿಗೆ ಯಥೋಚಿತ ಸತ್ಕಾರ. ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವ ಅವಕಾಶ.
ಕನ್ಯಾ: ಕುಟುಂಬದ ಹುಡುಗನಿಗೋಸ್ಕರ ಕನ್ಯಾ ವೀಕ್ಷಣೆ. ಅಪರೂಪದ ಬಂಧು ದರ್ಶನ. ರಾಜಕೀಯ ಸಭೆಯಲ್ಲಿ ಪಾಲುಗೊಂಡದ್ದಕ್ಕೆ ಪಶ್ಚಾತ್ತಾಪ. ಸಾಮಾಜಿಕ ಸಮಸ್ಯೆ ಪರಿಹಾರಕ್ಕೆ ವಿಫಲ ಚರ್ಚೆ. ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ.
ತುಲಾ: ಸಂಸಾರ ಸಹಿತ ಗುರುಮಠ, ದೇವಾಲಯಕ್ಕೆ ಭೇಟಿ. ಅನಿರೀಕ್ಷಿತವಾಗಿ ಭೇಟಿಯಾದ ಹಿರಿಯರ ಹಿತವಚನ ಪಾಲನೆಯಿಂದ ವ್ಯವಹಾರದಲ್ಲಿ ಲಾಭದ ಸೂಚನೆ. ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಲು ಪರಿಣತರ ಮಾರ್ಗದರ್ಶನ. ತೋಟ ಗಾರಿಕೆಯಲ್ಲಿ ಕಾಲಯಾಪನೆ ಮಾಡುವವರಿಗೆ ಒಳ್ಳೆಯ ಅವಕಾಶ.
ವೃಶ್ಚಿಕ: ಮನೆಯಲ್ಲಿ ಲವಲವಿಕೆಯ ವಾತಾವರಣ. ಬಂಧುಗಳಿಂದ ಹರ್ಷದ ವಾರ್ತೆ ಲಭ್ಯ. ನೆರೆಮನೆಯವರ ಸಂತೋಷ ಆಚರಣೆಯಲ್ಲಿ ಪಾಲುಗೊಳ್ಳಲು ಆಹ್ವಾನ. ಕುಟುಂಬದಲ್ಲಿ ಅಪರೂಪದ ಶಿಶುಜನನದಿಂದ ಆನಂದ. ಹತ್ತಿರದ ದೇವಾಲಯಕ್ಕೆ ಭೇಟಿ.
ಧನು: ವಿರಾಮದ ಅನುಭವ ಪಡೆಯುವ ಮನಸ್ಸಿದ್ದರೂ ಕರ್ತವ್ಯದ ಅನಿವಾರ್ಯತೆ. ಕುಟುಂಬದ ಪುರೋಭಿವೃದ್ಧಿಗೋಸ್ಕರ ನಿಲ್ಲದ ಶ್ರಮ. ಸಾರ್ವಜನಿಕ ಸೌಲಭ್ಯಗಳ ಸದುಪಯೋಗಕ್ಕೆ ಮಾಡುವ ಪ್ರಯತ್ನಕ್ಕೂ ಹಿತಶತ್ರುಗಳ ಅಡ್ಡಗಾಲು.
ಮಕರ: ವಿರಾಮದ ಪೂರ್ಣ ಅನುಭವ ಪಡೆಯುವ ಪ್ರಯತ್ನ. ಸಹೋದ್ಯೋಗಿಗಳೊಂದಿಗೆ ಸಂತೋಷ ಆಚರಣೆ. ಸರಕಾರಿ ನೌಕರರಿಗೆ ಹರ್ಷಾನುಭವ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಲಾಭ.
ಕುಂಭ: ಸಮಾಜದ ಕ್ಷೇಮ ಚಿಂತನೆ. ಸೇವಾ ಕಾರ್ಯಗಳಲ್ಲಿ ಪಾಲುಗೊಳ್ಳುವ ತವಕ. ವ್ಯಾಪಾರಕ್ಕೆ ಬಿಡುವಿದ್ದರೂ ನಾಳೆಯ ವ್ಯವಹಾರಕ್ಕೆ ಮನೆಯÇÉೇ ಸಿದ್ಧತೆ. ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಧಾರ್ಮಿಕ ಕ್ಷೇತ್ರದ ಪುರೋಭಿವೃದ್ಧಿ ಚಿಂತನೆ.
ಮೀನ: ಕಾರ್ಯಗಳು ಸಫಲವಾಗಿ ಧನ್ಯತೆಯ ಭಾವ. ನಾಳೆಯ ಕಾರ್ಯಗಳ ಆಯೋಜನೆಗೆ ಸಮಯ ನೀಡುವ ಅನಿವಾರ್ಯತೆ. ಗುರುಸ್ಥಾನದಿಂದ ಬಂದ ಕರೆಗೆ ಸ್ಪಂದಿಸುವ ಸಿದ್ಧತೆ. ಪತಿ ಅಥವಾ ಪತ್ನಿಯ ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಆಹ್ವಾನ. ತಾಯಿಯ ಆರೋಗ್ಯ ಸುಧಾರಣೆ. ಸಾಮಾಜಿಕ ಕಾರ್ಯದ ನೇತೃತ್ವ ಪಾಲನೆಯಲ್ಲಿ ಯಶಸ್ವಿಯಾಗುವಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year:ಹೊಸ ವರುಷ-ಹೊಸ ಹರುಷ 2025:ಕಾಲಚಕ್ರ ಮತ್ತೆ ತಿರುಗಿದೆ…ಹೊಸತು ಕಾಯುತ್ತಿದೆ!
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.