ಕಿಟ್ ಪಡೆಯಲು ನೂಕುನುಗ್ಗಲು: ವಿತರಣೆ ಸ್ಥಗಿತ
Team Udayavani, Apr 19, 2020, 2:57 PM IST
ಹೊಸಪೇಟೆ: ಪಡಿತರ ಕಿಟ್ ಪಡೆಯಲು ನಗರದ ನ್ಯಾಯಬೆಲೆ ಅಂಗಡಿ ಮುಂದೆ ಮುಗಿಬಿದ್ದ ಸಾರ್ವಜನಿಕರು.
ಹೊಸಪೇಟೆ: ಸಚಿವ ಆನಂದ ಸಿಂಗ್ ಕ್ಷೇತ್ರದ ಬಡಜನರಿಗೆ ವಿತರಿಸುವ ಪಡಿತರ ಕಿಟ್ ಪಡೆಯಲು ನಗರದ ನ್ಯಾಯಬೆಲೆ ಅಂಗಡಿ ಮುಂದೆ ಸಾರ್ವಜನಿಕರು ಶನಿವಾರ ಮುಗಿಬಿದ್ದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕ್ಷೇತ್ರದ ಬಡಜನರು-ಕೂಲಿ ಕಾರ್ಮಿಕರು ಹಸವಿನಿಂದ ಬಳಲಬಾರದೆಂಬ ಉದ್ದೇಶದಿಂದ ಸಚಿವ ಆನಂದ ಸಿಂಗ್ 6.9 ಲಕ್ಷ ರೂ ವೆಚ್ಚದಲ್ಲಿ 60 ಸಾವಿರ ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ ಮಾಡಲು ಮುಂದಾಗಿದ್ದರು. ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಕಿಟ್‌ಗಳನ್ನು ವಿತರಣೆಗೆ ಕ್ರಮ ಕೈಗೊಂಡಿದ್ದರು. ಈ ಕಿಟ್ ಪಡೆಯಲು ಸಾರ್ವಜನಿಕರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನ್ಯಾಯಬೆಲೆ ಅಂಗಡಿ ಮುಂದೆ ಮುಗಿಬಿದ್ದರು.
ಈಗಾಗಲೇ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಪಡಿತರ ಕಿಟ್‌ನ್ನು ವಿತರಿಸಲಾಗಿದ್ದು, ನಗರ ಪ್ರದೇಶದಲ್ಲಿ ಮಾತ್ರ ಕಿಟ್ ಪಡೆಯಲು ಸಾರ್ವಜನಿಕರು ಮುಗಿಬೀಳುತ್ತಿರುವುದು ತೀವ್ರ ತಲೆನೋವು ತಂದಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಜನರ ನೂಕುನುಗ್ಗಲು ವಿಷಯ ತಿಳಿಯುತ್ತಿದಂತೇ ಸಚಿವ ಆನಂದ ಸಿಂಗ್, ಕೂಡಲೇ ಪಡಿತರ ಕಿಟ್ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ವ್ಯವಸ್ಥಿತ ವಿತರಣೆಗೆ ಚಿಂತನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.