ಮಹಾನಗರ ಪಾಲಿಕೆ ಚುನಾವಣೆ: ಒಂದರಿಂದ ಒಂಭತ್ತು..ಕೈ-ಕಮಲ ಹಣಾಹಣಿ ಹೀಗಿತ್ತು  

5 ರಲ್ಲಿ ಅರಳಿದ ತಾವರೆ-4 ಕಡೆ "ಕೈ' ಮೇಲೆ|  ­ಹಿಂಬಾಲಕರ ಗೆಲ್ಲಿಸಿಕೊಳ್ಳುವ ಕೊಸರಾಟ| ­ ಮೇಯರ್‌ಗಿರಿಗೆ ಹತ್ತಿರವಾದ ಈರೇಶ ಅಂಚಟಗೇರಿ

Team Udayavani, Sep 8, 2021, 12:57 PM IST

hutyuty

ವರದಿ: ಬಸವರಾಜ ಹೊಂಗಲ್‌

ಧಾರವಾಡ: ಒಂದರಲ್ಲಿ ಅಣ್ಣ ಸೋತರೂ, ಎರಡರಲ್ಲಿ ಗೆಲ್ಲಲೇಬೇಕು. ಮೂರರಲ್ಲಿ ಧಣಿ ಗೆದ್ದರೆ, ನಾಲ್ಕರಲ್ಲಿ ವಿ.ಕೆ.ಬಾಸ್‌ಗೆ ಪ್ರಚಂಡ ಗೆಲುವು. ಆಗ ಸೋತಿದ್ದಕ್ಕೆ ಈಗ ಗೆಲುವು, ಈಗ ಸೋತಿದ್ದಕ್ಕೆ ಮುಂದೆ ಕೌಂಟರ್‌. ಇಲ್ಲೇನಿದ್ದರೂ ಮಕ್ಕಿ ಕಾ ಮಕ್ಕಿ.

ಹೌದು, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ ಗಳಲ್ಲಿ ಮೇಲ್ನೋಟಕ್ಕೆ ಇದು ಮಹಾನಗರ ಪಾಲಿಕೆ ಚುನಾವಣೆ ಆದರೂ ಒಳಗೊಳಗೇ ಎರಡು ಮದಗಜಗಳ ಮಧ್ಯದ ಬಿಗ್‌ ಫೈಟ್‌ ಆಗಿತ್ತು. ಪಾಳೆಗಾರಿಕೆ ಪರಂಪರೆಯ ಕೊಂಡಿಗಳಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಮತ್ತು ಹಾಲಿ ಶಾಸಕ ಅಮೃತ ದೇಸಾಯಿ ರಾಜಕೀಯ ಸೆಣಸಾಟದ ಅಖಾಡಗಳಾಗಿ ರೂಪುಗೊಂಡಿದ್ದವು ಹು-ಧಾ ಮಹಾನಗರ ಪಾಲಿಕೆಯ 1 ರಿಂದ 9ರ ವರೆಗಿನ ವಾರ್ಡ್‌ಗಳು. ಇಲ್ಲಿ ಐದರಲ್ಲಿ ಕೈ ಸೋತು ಕಮಲ ಅರಳಿದರೆ, ನಾಲ್ಕರಲ್ಲಿ ಕಮಲ ಕಮರಿ ಕೈ ಬಲಗೊಂಡಿದೆ. ಇನ್ನು ದಳ ವಿದಳವಾಗಿ ಹೋಗಿದ್ದು, ಪಕ್ಷೇತರರು ಅಲ್ಲಲ್ಲಿ ಬಿರುಸಿನ ಛಾಪು ಮೂಡಿಸಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿ ಪಕ್ಷಗಳ ಮಧ್ಯದ ಪೈಪೋಟಿಗಿಂತ ಇಬ್ಬರು ಸ್ಥಳೀಯ ಮಹಾನಾಯಕರ ಹಿಂಬಾಲಕರನ್ನು ಗೆಲ್ಲಿಸಿಕೊಳ್ಳುವ ರಾಜಕೀಯ ಕೊಸರಾಟವೇ ನಡೆದು ಹೋಗಿದೆ. ಅಂತಿಮವಾಗಿ ಕಮಲ ಪಡೆ ಬರೀ 11 ಮತಗಳ ಮುನ್ನಡೆಯಲ್ಲಿ 9ನೇ ವಾರ್ಡ್‌ ಅನ್ನು ತನ್ನದಾಗಿಸಿಕೊಂಡಿದೆ.

ನಡೆಯದ “ಬಸವನ ಆಟ’: (1ನೇ ವಾರ್ಡ್‌): ಬಿಜೆಪಿ ಮತ್ತು ಪಕ್ಷೇತರರ ಮಧ್ಯೆ ವಾರ್ಡ್‌ ನಂ.1ರಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಸಚಿವ ವಿನಯ್‌ ಕುಲಕರ್ಣಿ ವಿರುದ್ಧ ಯೋಗೀÍ ‌ಗೌಡ ಕೊಲೆ ಪ್ರಕರಣದ ಕುರಿತು ಮಾಧ್ಯಮ ಗಳಲ್ಲಿ ಭಾರಿ ಸದ್ದು ಮಾಡಿದ್ದ ಸಾಮಾಜಿಕ ಹೋರಾ ಟಗಾರ ಬಸವರಾಜ ಕೊರವರ ಈ ಭಾಗದಲ್ಲಿ ಬಿಜೆಪಿ ನೆಲೆಗೊಳ್ಳಲು ಶ್ರಮಿಸಿದ್ದರು. ಆದರೆ ಮೀಸಲಾತಿಯಲ್ಲೇ ಚಾಣಾಕ್ಷತನದಿಂದ ಅವರಿಗೆ ಬಿಜೆಪಿಯಲ್ಲಿ ಟಿಕೆಟ್‌ ಸಿಕ್ಕದಂತೆ ನೋಡಿಕೊಳ್ಳಲಾಯಿತು ಎನ್ನಲಾಗಿದೆ. ಅಂತಿಮವಾಗಿ ತಮಗೆ ಟಿಕೆಟ್‌ ಸಿಗದಿದ್ದರೂ ಪರವಾಗಿಲ್ಲ, ತಾವು ಹೇಳಿದವರಿಗೆ ಟಿಕೆಟ್‌ ಕೊಡಬಹುದು ಎನ್ನುವ ನಿರೀಕ್ಷೆ ಕೂಡ ಹುಸಿಯಾಗುವಂತೆ ಮಾಡಿದ ಬಿಜೆಪಿ ವಿರುದ್ಧ ಕೊರವರ, ಪಕ್ಷೇತರ ಅಭ್ಯರ್ಥಿ ಜಯಶ್ರೀ ಅವರನ್ನು ಕಣಕ್ಕಿಳಿಸಿದ್ದರು. ಅಂತಿಮವಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಚಳಗೇರಿ 2231 ಮತಗಳನ್ನು ಪಡೆದರು.

ಇವರು ಜಯಶ್ರಿ ಅವರಿಗಿಂತ ಅತ್ಯಲ್ಪ 134 ಮತಗಳಿಂದ ಗೆಲುವು ಸಾಧಿಸಿದ್ದು, ಬಸವರಾಜ ಕೊರವರಗೆ ತೀವ್ರ ಹಿನ್ನಡೆಯಾದಂತಾಗಿದೆ. ಪಾಟೀಲ”ಗಿರಿ’ ಶುರು (2ನೇ ವಾರ್ಡ್‌): ಇಲ್ಲಿ ಕಾಂಗ್ರೆಸ್‌ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್‌ನ ಸೂರವ್ವ ಪಾಟೀಲ ಹಾಗೂ ಬಿಜೆಪಿಯ ನಿಂಗವ್ವ ಹಾರಿಕೊಪ್ಪ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟು 2085 ಮತಗಳನ್ನು ಪಡೆದುಕೊಂಡ ಸೂರವ್ವ ಪಾಟೀಲ ಗೆದ್ದು ಬೀಗಿದರು. ಜೆಡಿಎಸ್‌ನಿಂದ ಹೇಮಾವತಿ 767 ಮತಗಳನ್ನು ಪಡೆದುಕೊಂಡಿದ್ದೇ ಇಲ್ಲಿ ಬಿಜೆಪಿಗೆ ಭಾರಿ ಏಟು ಬೀಳಲು ಕಾರಣ ಎನ್ನಲಾಗಿದೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಈ ವಾರ್ಡಿನಲ್ಲಿ ಬಿಜೆಪಿ ಅತ್ಯಧಿಕ ಮತಗಳನ್ನು ಪಡೆದುಕೊಂಡಿತ್ತು. ಇದು ಶಾಸಕ ಅಮೃತ ದೇಸಾಯಿ ಅವರಿಗೆ ವರದಾನವಾದರೆ, ವಿನಯ್‌ ಅವರ ಹಿನ್ನಡೆಗೆ ಕಾರಣವಾಗಿತ್ತು. ಇದೀಗ ವಿನಯ್‌ ಪಡೆ ಮತ್ತೆ ಇಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಂಡಿದೆ. ಮತ್ತೆ ಗೆದ್ದ ಜೋಶಿ ಭಂಟ (3ನೇ ವಾರ್ಡ್‌): ನಿರೀಕ್ಷೆಯಂತೆಯೇ ಇಲ್ಲಿ ಈರೇಶ ಅಂಚಟಗೇರಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದು ವಿಶೇಷ. ಕಳೆದ ಬಾರಿ ಪಾಲಿಕೆ ಚುನಾವಣೆಯಲ್ಲಿ ಅಂಚಟಗೇರಿ ಅವರ ತಾಯಿ ಮಹಾನಂದ ಅವರು ಅತ್ಯಲ್ಪ ಮತಗಳ ಅಂತರದಿಂದ ಸೋಲುಂಡಿದ್ದರು. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಹೂಗಾರ ಅವರಿಗಿಂತಲೂ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಈರೇಶ ಜಯಗಳಿಸಿದ್ದಾರೆ. 2013ರಲ್ಲಿ ಸೋತ ಮೇಲೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸದಾ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದ ಈರೇಶ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಚ್ಚುಮೆಚ್ಚಿನ ಯುವ ನಾಯಕ. ಹೀಗಾಗಿಯೇ ಅವರನ್ನು ಈಗಾಗಲೇ ಪ್ರಸಿದ್ಧ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಅಧ್ಯಕ್ಷರನ್ನಾಗಿ ಜೋಶಿ ಅವರೇ ನೇಮಿಸಿದ್ದಾರೆ. ಇದೀಗ ಮೇಯರ್‌ಗಿರಿ ಅವರಿಗೆ ಲಭಿಸುವುದು ಬಹುತೇಕ ಖಚಿತವಾಗಿದೆ.

ಕಮಲ ತೆಕ್ಕೆಯಿಂದ “ಕೈ’ ವಶ (4ನೇ ವಾರ್ಡ್‌): ಕಳೆದ ಬಾರಿ ಕಮಲ ಅರಳಿದ್ದ ಈ ವಾರ್ಡ್‌ಅನ್ನು ಮತ್ತೆ ಕೈ ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ರಾಜಶೇಖರ ಕಮತಿ ಆಯ್ಕೆಯಾಗಿದ್ದು, ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಅಪ್ಪಟ ಶಿಷ್ಯ. ಅಷ್ಟೇಯಲ್ಲ, ಕಮಲಾಪುರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಲಿಂಗಾಯತ ಸಮುದಾಯ ಇವರ ಬೆನ್ನಿಗೆ ನಿಂತಿದ್ದರಿಂದ ಬಿಜೆಪಿ ಅಭ್ಯರ್ಥಿ ಬಸವರಾಜ ಪಳ್ಳೋಟಿ ಅವರಿಗಿಂತಲೂ 900 ಮತಗಳ ಅಂತರದಿಂದ ಗೆಲುವು ಸಾಧಿಸಲು ಅನುಕೂಲವಾಯಿತು. ಇಲ್ಲಿ ಜೆಡಿಎಸ್‌ ಮುಸ್ತಾಕ್‌ ಅಹ್ಮದ 619 ಮತಗಳನ್ನು ಪಡೆದುಕೊಂಡಿದ್ದಾರೆ.

ಕೈ ಸೋತಲ್ಲಿ ಕಮಲ, ಕಮಲ ಸೊರಗಿದಲ್ಲಿ ಕೈ: (5-6ನೇ ವಾರ್ಡ್‌): 5ನೇ ವಾರ್ಡ್‌ನಲ್ಲಿ ಕಮಲ ಅರಳಿ ಕೈ ಸೋತರೆ, 6ನೇ ವಾರ್ಡ್‌ನಲ್ಲಿ ಕೈ ಸೋತು ಕಮಲ ಅರಳಿದೆ. 5ನೇ ವಾರ್ಡ್‌ನಲ್ಲಿ ನಿತೀನ್‌ ಇಂಡಿ ಕಾಂಗ್ರೆಸ್‌ ಅಭ್ಯರ್ಥಿ ಶಿವಪ್ಪ ಚೆನ್ನಗೌಡರ ವಿರುದ್ಧ ಗೆದ್ದರೆ, 6ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ನ ದಿಲಾÒದ್‌ ಬೇಗಂ ನದಾಫ್‌ ಬಿಜೆಪಿಯ ಭೀಮವ್ವಾ ಮಾಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

 

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.