Hunsur ಎಆರ್‌ಟಿಒ ಕಚೇರಿ ಮೇಲೆ ಲೋಕಾ ದಾಳಿ; ಎರಡು ಕಾರು, ದಾಖಲೆಗಳು ವಶ
Team Udayavani, Jun 12, 2024, 9:25 PM IST
ಹುಣಸೂರು: ಹುಣಸೂರು ಎಆರ್‌ಟಿಒ ಲೋಕಾಯುಕ್ತರು ಹಠಾತ್ ದಾಳಿ ನಡೆಸಿ ಕಚೇರಿಯಲ್ಲಿ ಉದ್ದೇಶ ಪೂರಕವಾಗಿ ಉಳಿದಿರುವ ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
ಲೋಕಾಯುಕ್ತರ ವಾಹನಗಳು ಎಆರ್‌ಟಿಒ ಕಚೇರಿ ಆವರಣ ಪ್ರವೇಶಿಸುತ್ತಿದ್ದಂತೆ ಆವರಣದಲ್ಲಿದ್ದ ಬ್ರೋಕರ್‌ಗಳು ಓಡಿ ಹೋದರು. ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಬಳಿ ಜನರು ನಿಂತಿದ್ದನ್ನು ಗಮನಿಸಿದ ಲೋಕಾಯುಕ್ತರು ಕಾರುಗಳನ್ನು ಪರಿಶೀಲಿಸಲು ಸಿಬ್ಬಂದಿಗೆ ಸೂಚಿಸಿದ ಮೇರೆಗೆ ತಪಾಸಣೆ ನಡೆಸಿದ ವೇಳೆ ಡಿ.ಎಲ್, ವಾಹನಗಳ ದಾಖಲಾತಿಗಳು ಪತ್ತೆಯಾದವು.
ನಂತರ ಕಚೇರಿಯಲ್ಲಿ ವಿಲೇ ಇಡಲಾಗಿದ್ದ ಕಡತಗಳನ್ನು ಪರಿಶೀಲಿಸಿದರು. ಕಂಪ್ಯೂಟರ್ ಗಳಲ್ಲಿ ಎಂಟ್ರಿಮಾಡಿ ವಿಲೇ ಇಟ್ಟಿದ್ದ ಬಗ್ಗೆಯೂ ಮಾಹಿತಿ ಪಡೆದರು.
ಈ ವೇಳೆ ಲೋಕಾಯುಕ್ತ ಎಸ್‌ಪಿ ವಿ.ಜೆ.ಸಜಿತ್ ಮಾತನಾಡಿ, ಸಾರ್ವಜನಿಕರಿಂದ ಹಲವು ದೂರುಗಳು ಎದುರಾಗಿದ್ದು, ಕಚೇರಿಯಲ್ಲಿ ಉದ್ದೇಶಪೂರಕವಾಗಿ ಕಡತ ವಿಲೇವಾರಿ ಮಾಡದೆ ಚಾಲನ ಪರವಾನಿಗೆ ಸೇರಿದಂತೆ ಹಲವು ಸವಲತ್ತು ಬಳಸಿಕೊಳ್ಳಲು ಕಚೇರಿಯಲ್ಲಿ ಸಮಸ್ಯೆ ಸೃಷ್ಟಿಸುತ್ತಾರೆ. ಮಧ್ಯವರ್ತಿಗಳ ಹಾವಳಿ ಬಗ್ಗೆಯೂ ದೂರು ಕೇಳಿ ಬಂದಿತ್ತು. ಹೀಗಾಗಿ ಹಠಾತನೆ ದಾಳಿ ನಡೆಸಿ ಇಲಾಖೆ ಅಧಿಕಾರಿಗಳ ಬಳಿ ಇರುವ ದಾಖಲೆ ಪರಿಶೀಲಿಸುತ್ತಿದ್ದೇವೆ.
ಇಲ್ಲಿನ ಸಾರಿಗೆ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸೇವೆ ನೇರವಾಗಿ ಸಿಗದೆ ಮಧ್ಯವರ್ತಿಗಳ ಮೂಲಕವೇ ಬರಬೇಕಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸಕಾಲ ನಿಯಮದಂತೆ ನಿಗದಿತ ಸಮಯಕ್ಕೆ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಈ ಎಲ್ಲಾ ವಿಷಯ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಮತ್ತು ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಈ ವೇಳೆ ಎಆರ್‌ಟಿಒ ಭಗವಾನ್ ದಾಸ್ ಉಪಸ್ಥಿತರಿದ್ದರು. ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ, ಪೊಲೀಸ್ ಇನ್ ಸ್ಪೆಕ್ಟರ್ ರೂಪಾಶ್ರೀ, ಮಹೇಶ್ ಮತ್ತು ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.