Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

ಅಂಬೇಡ್ಕರ್‌ ವಿರೋಧಿ ಕಾಂಗ್ರೆಸ್‌ ನನ್ನ ಹೇಳಿಕೆಯನ್ನು ತಿರುಚಿದೆ, ಕಾಂಗ್ರೆಸ್‌ ನಿಜ ಬಣ್ಣ ಸಂಸತ್‌ನಲ್ಲಿ ಬಯಲಾಗಿದ್ದಕ್ಕೆ ಈ ಕೀಳು ತಂತ್ರ: ಕೇಂದ್ರ ಗೃಹ ಸಚಿವ

Team Udayavani, Dec 18, 2024, 11:19 PM IST

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಹೊಸದಿಲ್ಲಿ: “ಅಂಬೇಡ್ಕರ್‌ ವಿರೋಧಿ, ಸಂವಿಧಾನ ವಿರೋಧಿ ಕಾಂಗ್ರೆಸ್‌ ನನ್ನ ಹೇಳಿಕೆಯನ್ನು ತಿರುಚಿದೆ. ಸಂಸತ್‌ನಲ್ಲಿ ನಡೆದ ಚರ್ಚೆಯಿಂದಾಗಿ ವಿಪಕ್ಷಗಳೇ ಅಂಬೇಡ್ಕರ್‌ ವಿರೋಧಿ ಮತ್ತು ಮೀಸಲಾತಿ ವಿರೋಧಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ವಿಪಕ್ಷಗಳು ನನ್ನ ವಿರುದ್ಧ ದ್ವೇಷದ ಪ್ರಚಾರ ಆರಂಭಿಸಿವೆ.’

ಹೀಗೆಂದು ವಿಪಕ್ಷ ಕಾಂಗ್ರೆಸ್‌ ವಿರುದ್ಧ ಕೆಂಡ ಕಾರಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ. ರಾಜ್ಯಸಭೆಯಲ್ಲಿ ತಾವು ನೀಡಿದ “ಅಂಬೇಡ್ಕರ್‌ ಜಪ’ ಹೇಳಿಕೆಯು ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಬುಧವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿಪಕ್ಷಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

“ರಾಜ್ಯಸಭೆಯಲ್ಲಿ ನಾನು ಆಡಿದ ಮಾತುಗಳು ಸ್ಪಷ್ಟವಾಗಿದ್ದವು. ಯಾವುದೇ ಗೊಂದಲಗಳು ಇರಲಿಲ್ಲ. ಸಂವಿಧಾನ ಶಿಲ್ಪಿಯನ್ನು ಎಂದೂ ಅವಮಾನಿಸದಂಥ ಪಕ್ಷದಿಂದ ಬಂದವನು ನಾನು. ಅವರನ್ನು ಅವಮಾನಿಸಬೇಕೆಂದು ನಾನು ಕನಸಿನಲ್ಲೂ ಯೋಚಿಸಿದ್ದಿಲ್ಲ. ಇತ್ತೀಚಿನ ಚುನಾವಣೆ ವೇಳೆಯೂ ಕಾಂಗ್ರೆಸ್‌ ಕೃತಕ ಬುದ್ಧಿಮತ್ತೆ ಬಳಸಿ ನನ್ನ ಮತ್ತು ಮೋದಿಯವರ ಹೇಳಿಕೆಗಳನ್ನು ತಿರುಚಿತ್ತು ಎಂದೂ ಹೇಳಿದ್ದಾರೆ. ಈಗಲೂ ನನ್ನ ಹೇಳಿಕೆ ತಿರುಚಲಾಗಿದೆ. ನನ್ನ ಪೂರ್ಣ ಹೇಳಿಕೆಯನ್ನು ಪ್ರಸಾರ ಮಾಡುವಂತೆ ನಾನು ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ’ ಎಂದಿದ್ದಾರೆ.

ಕಾಂಗ್ರೆಸ್‌ ದೇಶದ ಸೇನೆಯನ್ನು, ಮಹಿಳೆಯರನ್ನು ಅವಮಾನಿಸಿದೆ. ದೇಶವನ್ನು ವಿಭಜನೆ ಮಾಡಿ, ವಿದೇಶಿ ಶಕ್ತಿಗಳ ಕೈಗಿತ್ತಿದೆ. ಈ ಸತ್ಯಗಳೆಲ್ಲ ಬಯಲಾದ ಕೂಡಲೇ ಸತ್ಯವನ್ನೇ ತಿರುಚಿ, ಜನರ ಹಾದಿ ತಪ್ಪಿಸಲು ಯತ್ನಿಸುತ್ತಿದೆ. ಸುಳ್ಳು ಸುದ್ದಿ ಸೃಷ್ಟಿಸುವುದರಲ್ಲಿ ಅವರು ನಿಸ್ಸೀಮರು ಎಂದೂ ಅಮಿತ್‌ ಶಾ ಆರೋಪಿಸಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ: ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಅಶ್ವಿ‌ನಿ ವೈಷ್ಣವ್‌, ಕಿರಣ್‌ ರಿಜಿಜು, ಪಿಯೂಷ್‌ ಗೋಯಲ್‌ ಜತೆಗೂಡಿ ಅಮಿತ್‌ ಶಾ ಈ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಪಕ್ಷವು ಸಂಸತ್‌ನ ಒಳಗೆ ಮತ್ತು ಹೊರಗೆ ಲಭ್ಯವಿರುವ ಎಲ್ಲ ಕಾನೂನಾತ್ಮಕ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದೂ ಹೇಳಿದ್ದಾರೆ.

ನನ್ನ ರಾಜೀನಾಮೆಯಿಂದ ಖರ್ಗೆಗೆ ಸಹಾಯ ಆಗಲ್ಲ!
ಖರ್ಗೆ ನಿಮ್ಮ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್‌ ಶಾ, “ಖರ್ಗೆ ಅವರಿಗೆ ಖುಷಿ ಆಗುವುದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ. ಆದರೆ ನನ್ನ ರಾಜೀನಾಮೆಯಿಂದ ಅವರ ಸಮಸ್ಯೆ ಪರಿಹಾರವಾಗದು. ಏಕೆಂದರೆ ಅವರಿಗೆ ಇನ್ನೂ 15 ವರ್ಷವಿಪಕ್ಷ ನಾಯಕನ ಸ್ಥಾನವೇ ಖಾಯಂ’ ಎಂದು ವ್ಯಂಗ್ಯವಾಡಿದರು. ಜತೆಗೆ, ರಾಹುಲ್‌ ಅವರ “ಒತ್ತಡ’ಕ್ಕೆ ಮಣಿದು ಖರ್ಗೆ ಅವರು ನನ್ನ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದೂ ಹೇಳಿದರು.

ಸುಳ್ಳು ಹೇಳಿ ಸತ್ಯ ಮುಚ್ಚಿಇಡಲು ಸಾಧ್ಯವಿಲ್ಲ: ಮೋದಿ
ವಿವಾದದ ಬೆನ್ನಲ್ಲೇ ಅಮಿತ್‌ ಶಾರನ್ನು ಸಮರ್ಥಿಸಿಕೊಂಡು ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, “ಕಾಂಗ್ರೆಸ್‌ ಪಕ್ಷದ ಸುಳ್ಳುಗಳು ಅವರ ತಪ್ಪುಗಳನ್ನು ಮುಚ್ಚಿಡಲಾರವು’ ಎಂದಿದ್ದಾರೆ. ಅಮಿತ್‌ ಶಾ ವಾಸ್ತವದಲ್ಲಿ ಅಂಬೇಡ್ಕರ್‌ರನ್ನು ಅವಮಾನಿಸುತ್ತಾ ಬಂದಿರುವ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‌ನ ಸುಳ್ಳುಗಳು ಅವರ ಹಲವು ವರ್ಷಗಳ ತಪ್ಪುಗಳನ್ನು ಮುಚ್ಚಿಹಾಕುತ್ತವೆ ಎಂದು ಆ ಪಕ್ಷದ ನಾಯಕರು ಭಾವಿಸಿದ್ದರೆ ಅದು ಅವರ ಮೂರ್ಖತನ.

ಅಮಿತ್‌ ಶಾ ಅವರು ಬಹಿರಂಗಪಡಿಸಿದ ಸತ್ಯವನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಕೀಳುಮಟ್ಟದ ನಾಟಕ ಮಾಡುತ್ತಿದೆ. ಆದರೆ  ಜನರಿಗೆ ಸತ್ಯ ಗೊತ್ತಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ, ಜೆ.ಪಿ.ನಡ್ಡಾ, ಅಶ್ವಿ‌ನಿ ವೈಷ್ಣವ್‌, ಗೋಯಲ್‌, ರವನೀತ್‌ ಬಿಟ್ಟು ಸೇರಿದಂತೆ ಕೇಂದ್ರದ ಹಲವು ಸಚಿವರೂ ಅಮಿತ್‌ ಶಾ ಪರ ನಿಂತಿದ್ದು, ಕಾಂಗ್ರೆಸ್‌ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಅಂಬೇಡ್ಕರ್‌ ಬಗ್ಗೆ ಗೌರವವಿದ್ದರೆ ಶಾರನ್ನು ವಜಾ ಮಾಡಿ: ಖರ್ಗೆ
ಪ್ರಧಾನಿ ಮೋದಿಯವರಿಗೆ ಬಾಬಾ ಸಾಹೇಬ್‌ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ, ಕೂಡಲೇ ಅಮಿತ್‌ ಶಾ ರನ್ನು ಸಂಪುಟದಿಂದ ಹೊರಹಾಕಿ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ದೇಶದ ಸಂವಿಧಾನ ಶಿಲ್ಪಿಯನ್ನು ಅವಮಾನ ಮಾಡಿದವರನ್ನು ಮೋದಿ ಸಮರ್ಥಿಸಿಕೊಳ್ಳುತ್ತಿದ್ದಾರೆಂದರೆ ಏನರ್ಥ? ಅಂಬೇಡ್ಕರ್‌ಗಾಗಿ ಪ್ರಾಣತ್ಯಾಗಕ್ಕೂ ಜನ ಸಿದ್ಧರಿದ್ದಾರೆ.

ಮಧ್ಯರಾತ್ರಿಯೊಳಗೆ ಅಮಿತ್‌ ಶಾರನ್ನು ಸಂಪುಟ ದಿಂದ ಕೈಬಿಟ್ಟರಷ್ಟೇ ಜನ ಸುಮ್ಮನಾಗುತ್ತಾರೆ. ಇಲ್ಲದಿದ್ದರೆ ದೇಶಾದ್ಯಂತ ಬೀದಿಗಿಳಿಯುತ್ತಾರೆ ಎಂದೂ ಎಚ್ಚರಿಸಿದ್ದಾರೆ. ಸಂವಿಧಾನದ ಜಾಗದಲ್ಲಿ ಮನುಸ್ಮತಿ ತರಬೇಕೆಂದು ಬಿಜೆಪಿ, ಆರೆಸ್ಸೆಸ್‌ ಬಯಸಿತ್ತು. ಆದರೆ ಅದಕ್ಕೆ ಅಂಬೇಡ್ಕರ್‌ ಅವಕಾಶ ನೀಡಲಿಲ್ಲ. ಇದೇ ಕಾರಣಕ್ಕೆ ಅವರಿಗೆ ಅಂಬೇಡ್ಕರ್‌ ಎಂದರೆ ಅಷ್ಟು ದ್ವೇಷ. ಎಂದೂ ಖರ್ಗೆ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.