Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Team Udayavani, Dec 18, 2024, 11:34 PM IST
ಬೆಳಗಾವಿ: ಆಡಳಿತದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಎಷ್ಟು ಸರಿ ಎಂದು ಪ್ರಶ್ನಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲವನ್ನೂ ನ್ಯಾಯಾಂಗವೇ ಮಾಡುವು ದಾದರೆ ಶಾಸಕಾಂಗ, ಕಾರ್ಯಾಂಗ ಏಕಿರಬೇಕು ಎಂದು ಪ್ರಶ್ನಿಸಿದರು.
ಬಾಣಂತಿಯರ ಸರಣಿ ಸಾವು ಪ್ರಕರಣದ ಕುರಿತು ಬುಧವಾರ ವಿಧಾನ ಸಭೆಯಲ್ಲಿ ಚರ್ಚೆ ನಡೆಯುವಾಗ ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಆರ್. ಅಶೋಕ್, ಚಾಮರಾಜನಗರ, ಹಾಸನ, ಚಿತ್ರದುರ್ಗ ಸೇರಿ 4 ಜಿಲ್ಲೆಗಳ ರಿಂಗಲ್ ಲ್ಯಾಕ್ಟೇಟ್ ದ್ರಾವಣವನ್ನು ಪರೀಕ್ಷೆ ಮಾಡಿ ಗುಣಮಟ್ಟದ್ದಲ್ಲ ಎಂದು ಮೇ 14ರಂದೇ ಅವುಗಳನ್ನು ನಿರ್ಬಂಧಿಸಿ ಔಷಧ ನಿಗಮ ಆದೇಶಿಸಿತ್ತಲ್ಲದೆ, ಪಶ್ಚಿಮ್ ಬಂಗಾ ಫಾರ್ಮಾಸುಟಿಕಲ್ಸ್ ಕಂಪೆನಿಯ 27 ಬ್ಯಾಚ್ ಔಷಧಿಯು ಉಗ್ರಾಣದಲ್ಲದ್ದರೆ ಆಸ್ಪತ್ರೆಗಳಿಗೆ ಸರಬ ರಾಜು ಮಾಡದಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿ ಆದೇಶಕ್ಕೆ ತಡೆ ತಂದಿ ದ್ದರು. ವಂಚನೆ ಮಾಡುವ ಕಂಪೆನಿಗಳು ಬಲಾಡ್ಯವಾಗಿರುತ್ತವೆ. ಸರಕಾರ ಏಕೆ ಮೇಲ್ಮನವಿ ಸಲ್ಲಿಸಲಿಲ್ಲ? ಬಾಣಂತಿಯರ ಜೀವದ ಬಗ್ಗೆ ಕಾಳಜಿ ಇರಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜೀವದ ವಿಚಾರ ಆಗಿದ್ದರೂ, ನ್ಯಾಯಾಲಯಗಳು ಈ ರೀತಿ ಆದೇಶಗಳನ್ನು ಮಾಡುತ್ತವೆ ಎಂದರೆ ದುರ್ದೈವ. ಇದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಗುತ್ತಿಗೆ ಕಂಪೆನಿ ಸರಬರಾಜು ಮಾಡಿದ ಔಷಧ ಸರಿಯಿಲ್ಲ ಎಂದು ನಾವು ಆದೇಶಿಸಿದ್ದೆವು. ಅದನ್ನು ಪ್ರಶ್ನಿಸಿದ್ದರಿಂದ ನಾವು ನ್ಯಾಯಾಲಯದ ಆದೇಶ ಪಾಲನೆ ಮಾಡಲೇಬೇಕಾಯಿತು. ನ್ಯಾಯಾಂಗವು ಶಾಸಕಾಂಗ, ಕಾರ್ಯಾಂಗದ ಕೆಲಸ ಮಾಡುತ್ತಿದೆ. ಈ ಬಗ್ಗೆ ಚರ್ಚೆ ಆಗಬೇಕು. ಶಾಸಕಾಂಗದ ರಕ್ಷಣೆ ಆಗಬೇಕು. ನ್ಯಾಯಾಂಗದ ಹಸ್ತಕ್ಷೇಪ ಎಷ್ಟು ಸರಿ? ಎಲ್ಲವನ್ನೂ ನ್ಯಾಯಾಂಗವೇ ಮಾಡುವುದಾದರೆ ಶಾಸಕಾಂಗ, ಕಾರ್ಯಾಂಗ ಏಕಿರಬೇಕು ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.