Modi: ಪರಿಹಾರಗಳಿಗೆ ಭಾರತ ಪ್ರಯೋಗಾಲಯ: ಮೋದಿ
ಜಿ20 ಡಿಜಿಟಲ್ ಎಕಾನಮಿಕ್ ವರ್ಕಿಂಗ್ ಗ್ರೂಪ್ ಸಚಿವರ ಸಭೆ
Team Udayavani, Aug 20, 2023, 12:29 AM IST
ಬೆಂಗಳೂರು: ಭಾರತವು ಪರಿಹಾರಗಳಿಗೆ ಒಂದು ಪ್ರಯೋಗಾಲಯವಾಗಿದೆ. ದೇಶದಲ್ಲಿ ಯಶಸ್ವಿಯಾಗುವ ಪರಿಹಾರಗಳನ್ನು ವಿಶ್ವದ ಎಲ್ಲಿಗೆ ಬೇಕಾದರೂ ಸುಲಭವಾಗಿ ಅನ್ವಯಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಜಿ20
ಡಿಜಿಟಲ್ ಎಕಾನಮಿಕ್ ವರ್ಕಿಂಗ್ ಗ್ರೂಪ್ ಸಚಿವರ ಸಭೆಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿ ಮಾತನಾ ಡಿದ ಅವರು, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಗತ್ತಿನ ಸವಾಲುಗಳಿಗೆ ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ಒದಗಿಸಲಿದೆ ಎಂದರು.
ಭಾರತವು ವೈವಿಧ್ಯಮಯ ದೇಶವಾಗಿದೆ. ನಮ್ಮಲ್ಲಿ ಅನೇಕ ಭಾಷೆಗಳು ಮತ್ತು ನೂರಾರು ಪ್ರಾಂತೀಯ ಭಾಷೆಗಳಿವೆ. ಅನೇಕ ಧರ್ಮಗಳು ಮತ್ತು ಸಂಸ್ಕೃತಿಯ ಜನರು ಇಲ್ಲಿ ವಾಸಿಸುತ್ತಾರೆ. ಪುರಾತನ ಸಂಪ್ರದಾಯದಿಂದ ಹಿಡಿದು ನೂತನ ತಂತ್ರಜ್ಞಾನದವರೆಗೆ ಪ್ರತಿಯೊಬ್ಬರಿಗೆ ಬೇಕಾಗಿರುವ ಏನಾದರೂ ಒಂದನ್ನು ಭಾರತ ಹೊಂದಿದೆ ಎಂದು ಹೇಳಿದರು.
ಎಲ್ಲ ದೇಶಗಳಿಗೂ ಅನ್ವಯಿಸುವಂತೆ ಡಿಜಿಟಲ್ ಕೌಶಲ ಮಾರ್ಗಸೂಚಿ ತಯಾರಿಸುವಂತೆ ಹಾಗೂ ಡಿಜಿಟಲ್ ಕೌಶಲಕ್ಕೆ ಸಂಬಂಧಿಸಿ ವರ್ಚುವಲ್ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುವಂತೆ ಇದೇ ವೇಳೆ ಅವರು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.